
ವಕೀಲರು ಒತ್ತಡದಲ್ಲಿ ಬದುಕಬಾರದು ಆರೋಗ್ಯದ ಕಡೆ ಗಮನ ಹರಿಸಿ : ನ್ಯಾ. ಅಬ್ದುಲ್ ರೆಹಮಾನ್
ಕರುನಾಡ ಬೆಳಗು ಸುದ್ದಿ
ವಿಜಯನಗರ, 28- ಹೊಸಪೇಟೆ ತಾಲೂಕಿನ ಕೋರ್ಟ್ ಕಚೇರಿಯ ವಕೀಲರ ಸಂಘದ ಸಭಾಂಗಣದಲ್ಲಿ ನ್ಯಾಯಾಂಗ ಇಲಾಖೆ ತಾಲೂಕು ಕಾನೂನು ಸೇವಾ ಸಮಿತಿ ಮತ್ತು ವೈದ್ಯಕೀಯ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ವಕೀಲರಿಗೆ ಮತ್ತು ನ್ಯಾಯಾಂಗ ಇಲಾಖೆಯ ನೌಕರರಿಗೆ ವಿಶೇಷ ಆರೋಗ್ಯ ತಪಾಸಣೆಯ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಹಯೋಗದೊಂದಿಗೆ ನಡೆದ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನೆಯನ್ನು ಜಿಲ್ಲಾ ನ್ಯಾಯಾಧೀಶ ಅಬ್ದುಲ್ ರೆಹಮಾನ್ ನಂದಗಡಿ ಉದ್ಘಾಟಿಸಿ ಮಾತನಾಡಿದರು.
ವಕೀಲರು ಒತ್ತಡದಲ್ಲಿ ಬದುಕಬಾರದು ಆದಷ್ಟು ಆರೋಗ್ಯದ ಕಡೆ ಗಮನ ಹರಿಸಬೇಕು. ವಕೀಲರಿಗೆ ಆರೋಗ್ಯ ಕುಂಠಿತವಾದರೆ ಜನಸಾಮಾನ್ಯರಿಗೆ ನ್ಯಾಯ ದೊರಕಿಸಿ ಕೊಡುವುದು ಕಷ್ಟವಾಗುತ್ತದೆ. ನಾವು ಒತ್ತಡದಲ್ಲಿದ್ದಾಗ, ವಿಪರೀತವಾಗಿ ಅಥವಾ ನಿಭಾಯಿಸಲು ಸಾಧ್ಯವಾಗದಿದ್ದಾಗ ನಾವು ಪಡೆಯುವ ಸಾಮಾನ್ಯ ಭಾವನೆಯಾಗಿದೆ. ಆದರೆ ಸಣ್ಣ ಪ್ರಮಾಣದ ಒತ್ತಡವು ನಮಗೆ ಒಳ್ಳೆಯದು,ವಿಶೇಷವಾಗಿ ಅದು ನಿಯಂತ್ರಣದಲ್ಲಿಲ್ಲ ಎಂದು ಭಾವಿಸಿದಾಗ, ನಮ್ಮ ಮನಸ್ಥಿತಿ, ದೈಹಿಕ ಮತ್ತು ಮಾನಸಿಕ ಯೋಗಕ್ಷೇಮ ಮತ್ತು ಸಂಬAಧಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಹಾಗಾಗಿ ಒತ್ತಡವನ್ನು ಕಮ್ಮಿ ಮಾಡಲು ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಈ ಕುರಿತು ಆರೋಗ್ಯ ಅಧಿಕಾರಿ ಡಾಕ್ಟರ್ ಬಸವರಾಜ್ ಮಾತನಾಡಿ ರೋಗ ಬರುವ ಮುಂಚೆ ನಾವು ಜಾಗೃತರಾಗಿರಬೇಕು, ಬಿಪಿ ಮಧುಮೇಹದಂತಹ ಕಾಯಿಲೆಗಳನ್ನು ನಿಯಂತ್ರಣದಲ್ಲಿಡುವುದಕ್ಕಾಗಿ ಹಲವಾರು ಪ್ರಯತ್ನಗಳನ್ನು ಮಾಡುತ್ತೇವೆ. ಮೊದಲು ಜಂಕ್ ಫುಡ್ ಗಳನ್ನು ತಿನ್ನುವುದು ಬಿಟ್ಟುಬಿಡಬೇಕು ಇದರ ಜೊತೆಗೆ ವಯಸ್ಸಿಗೆ ತಕ್ಕಂತೆ ದೇಹಕ್ಕೆ ತಕ್ಕುನಾದ ವ್ಯಾಯಾಮವನ್ನು ದಿನನಿತ್ಯ ಮಾಡಬೇಕು. ಆಗ ರೋಗಗಳನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಗುತ್ತದೆ. ಜವಾಬ್ದಾರಿಗಳನ್ನು ನಿರ್ಲಕ್ಷಿಸುವುದು, ಕಾರ್ಯಗಳಲ್ಲಿ ಕಡಿಮೆ ದಕ್ಷತೆ ಅಥವಾ ಗಮನವನ್ನು ಕೇಂದ್ರೀಕರಿಸಲು ಕಷ್ಟವಾಗುತ್ತದೆ ಎಂದು ಕೆಲವು ಆರೋಗ್ಯಗಳ ಮಾಹಿತಿ ನೀಡಿದರು.
ಶ್ರೀನಿವಾಸ್ ಮೂರ್ತಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಕಾರ್ಯಕ್ರಮದ ನಿರೂಪಣೆ ಮಾಡುವ ಮೂಲಕ ಮಾತನಾಡಿ ಆರೋಗ್ಯವೇ ಮಹಾಭಾಗ್ಯ ಪೌಷ್ಟಿಕ ಆಹಾರಗಳನ್ನು ಸೇವನೆ ಮಾಡಬೇಕು.ದೈಹಿಕ ಕಸರತ್ತುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು ಶ್ರಮವಹಿಸಿ ವೃತ್ತಿ ಜೀವನದಲ್ಲಿ ನಾವು ಅಭಿವೃದ್ಧಿ ಹೊಂದಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀಮತಿ ಹೇಮಲತಾ ಹುಲ್ಲುರು, ರಮೇಶ್ ಬಾಬು, ಅಶೋಕ, ಸಂಜೀವ ಕುಮಾರ, ಶ್ರೀಮತಿ ಚೈತ್ರ, ಆರೋಗ್ಯ ಅಧಿಕಾರಿ ಡಾ.ಬಸವರಾಜ್, ವಕೀಲರ ಸಂಘದ ಅಧ್ಯಕ್ಷ ಕೆ.ಪ್ರಹ್ಲಾದ್ ಹಾಗೂ ಖಜಾಂಚಿ ಎ.ಮರಿಯಪ್ಪ, ಶ್ರೀಮತಿ ಭಾಗ್ಯಲಕ್ಷ್ಮಿ, ಹಿರಿಯ ವಕೀಲಗಳಾದ ವಿರೂಪಾಕ್ಷ ರೆಡ್ಡಿ, ಜೆ.ಪ್ರಹ್ಲಾದ ಶೆಟಿ,್ಟ ತರಿಹಳ್ಳಿ ಹನುಮಂತಪ್ಪ, ಸತ್ಯನಾರಾಯಣ ಜವಳಿ, ನ್ಯಾಯಾಂಗ ಇಲಾಖೆ ನೌಕರರು ವಕೀಲರು ಇತರರು ಉಪಸ್ಥಿತರಿದ್ದರು.
ವೈದ್ಯಕೀಯ ತಂಡ ಮತ್ತು ಸಿಬ್ಬಂದಿಗಳು ಚಿಕಿತ್ಸೆ ನೀಡಿದರು.