9

ನೂತನ ಎಸ್ಡಿಎಂಸಿ ಅಧ್ಯಕ್ಷರಾಗಿ ಲಕ್ಷ್ಮಣ್ ಕಾಳಿ, ಉಪಾಧ್ಯಕ್ಷರಾಗಿ ಗೀತಾ ಆರೇರ್

ಕರುನಾಡ ಬೆಳಗು ಸುದ್ದಿ

ಕುಕನೂರು, 29- ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಂಬೇಡ್ಕರ್ ನಗರದ ನೂತನ ಅಧ್ಯಕ್ಷರಾಗಿ ಲಕ್ಷ್ಮಣ ಕಾಳಿ ಹಾಗೂ ಉಪಾಧ್ಯಕ್ಷರಾಗಿ ಗೀತಾ ಆರೇರ್ ಆಯ್ಕೆಯಾಗಿದ್ದಾರೆ ಎಂದು ಮಹೇಶ್ ಬಿ ಆರ್ ಪಿ ಹೇಳಿದರು.

ಪಟ್ಟಣದ 8ನೇ ವಾರ್ಡಿನ ಅಂಬೇಡ್ಕರ್ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನೂತನ ಎಸ್ಡಿಎಂಸಿ ರಚನೆ ಸಭೆಯನ್ನು ಹಮ್ಮಿಕೊಳ್ಳಲಾಯಿತು ಸಭೆಯನ್ನು ಉದ್ದೇಶಿಸಿ ಮಹೇಶ್ ಅಸೂಟಿ ಬಿಆರ್ ಪಿ ಅವರು ಮಾತನಾಡಿ, 2002 ಏಪ್ರಿಲ್ 28ರಂದು ಪ್ರತಿಯೊಂದು ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ 1 ಎಸ್ಡಿಎಂಸಿ ಸಮಿತಿ ರಚನೆ ಆಗಬೇಕು ಎಂದು ಸರಕಾರ ಸುತ್ತೋಲೆ ಹೊರಡಿಸಿದ್ದು, ಅದಕ್ಕಾಗಿ ನಾವು 3 ವರ್ಷಕ್ಕೆ ಒಂದು ಬಾರಿ ನೂತನ ಎಸ್ಡಿಎಂಸಿ ಸಮಿತಿಯನ್ನು ರಚನೆ ಮಾಡುತ್ತೇವೆ ಈ ಒಂದು ಸಮಿತಿಯ ರಚನೆಯಲ್ಲಿ ಪುರುಷ ಸದಸ್ಯರು 9 ಮಹಿಳಾ ಸದಸ್ಯರು 9 ಒಟ್ಟು 18 ಸದಸ್ಯರು ಸೇರಿ ಒಂದು ನೂತನ ಸಮಿತಿಯನ್ನು ರಚಿಸಲಾಗುವುದು ಎಂದರು.

ಈ ಶಾಲೆಯಲ್ಲಿ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 140 ಇದ್ದು, ವಿದ್ಯಾರ್ಥಿಯ ಎಲ್ಲಾ ಪಾಲಕರ ಸಹಕಾರದೊಂದಿಗೆ 18 ಸದಸ್ಯರ ನೂತನ ಎಸ್ಡಿಎಂಸಿ ಸಮಿತಿಯನ್ನು ರಚನೆ ಮಾಡಿದ್ದೇವೆ ಸಮಿತಿಯ ಎಲ್ಲಾ ಸದಸ್ಯರು ಶಾಲಾ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ಹೇಳಿದರು. ಸಭೆಯ ಅಧ್ಯಕ್ಷತೆ ಪಪಂ ಅಧ್ಯಕ್ಷರಾದ ಶ್ರೀ ಮತಿ ಲಲಿತಮ್ಮ.ಗಂ/ ರಮೇಶ್ ಯಡಿಯಾಪುರ ಅವರು ವಹಿಸಿಕೊಂಡಿದ್ದರು.

ಈ ಸಂದರ್ಭದಲ್ಲಿ ಪೀರ್ ಸಾಬ್ ದಪೇದಾರ್ ಸಿಆರ್‌ಪಿ, ಗೋಣೆಪ್ಪ ಹಿರೇಮನಿ ಶಿಕ್ಷಕರು, ಶಾಲೆಯ ಮುಖ್ಯ ಶಿಕ್ಷಕ ಶಿವಪ್ಪ ಈಬೇರಿ, ಹಾಗೂ ನೂತನ ಎಸ್ಡಿಎಂಸಿ ಸಮಿತಿಯ ಸದಸ್ಯರಾದ, ಉಮೇಶ್ ಚಲವಾದಿ, ದೇವಪ್ಪ ಆರ್ ಬೆರಳಿನ್, ಅರವಿಂದ್ ಚಲವಾದಿ, ಗುರುರಾಜ ಗೂರ್ಲೆಕೊಪ್ಪ, ಗುದ್ನೇಪ್ಪ ಚಲವಾದಿ, ಮಹಾಂತೇಶ್ ಬಾರಿಗಿಡದ, ಯಮನೂರಪ್ಪ ನಾಯಕ್, ನಾಗಪ್ಪ ಕಂಬಳಿ, ಶೀಲಾ ಗುಡದಳ್ಳಿ,ಹೇಮಾ ಬಂಡಿಹಾಳ, ಭಾರತಿ ಗೊರ್ಲೆಕೊಪ್ಪ, ಬಸವ್ವ ಚಲವಾದಿ, ಪುಷ್ಪ ಘಾಟಿ, ಲಕ್ಷ್ಮಿ ಭಜಂತ್ರಿ, ಪ್ರೇಮವ್ವ ಭಜಂತ್ರಿ, ಮಾಲನ್ ಕಂದಗಲ್, ಇದ್ದರು.

Leave a Reply

Your email address will not be published. Required fields are marked *

error: Content is protected !!