1

ಸರ್ಕಾರದ ಯೋಜನೆಗಳು ಪ್ರತಿ ಅರ್ಹ ಕುಟುಂಬ ಪಡೆಯಲಿ : ಮಡಗಿನ ಬಸಪ್ಪ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 25-ಪ್ರತಿಯೊಂದು ಕುಟುಂಬ ಆರ್ಥಿಕವಾಗಿ ಚೈತನ್ಯವಾಗಲು ಕೇಂದ್ರ ರಾಜ್ಯ ಸರ್ಕಾರಗಳು ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನೆಗಳನ್ನು,ಪ್ರತಿ ಅರ್ಹ ಕುಟುಂಬ ಸದ್ಬಳಕೆ ಪಡೆಯಲಿ ಎಂದು ಬಳ್ಳಾರಿ ತಾಲೂಕು ಪಂಚಾಯಿತಿ ಕಾರ್ಯನಿರ್ವಣ ಅಧಿಕಾರಿ, ಮಡಗಿನ ಬಸಪ್ಪ ಹೇಳಿದರು.

ತಾಲೂಕ ವ್ಯಾಪ್ತಿಯಲ್ಲಿ ಮೋಕ ಗ್ರಾಮ ಪಂಚಾಯತಿಯ, ಪಾಂಡುರ0ಗ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ವೈಯಕ್ತಿಕ ಕಾಮಗಾರಿಗಳ ಆದೇಶ ಪತ್ರ ವಿತರಣಾ ಮೇಳ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಸರ್ಕಾರ ವೈಯಕ್ತಿಕ ಕಾಮಗಾರಿಗಳಾದ, ದನದ ಕೊಟ್ಟಿಗೆ, ಕುರಿ ಕೊಟ್ಟಿಗೆ, ಬಚಲ ಗುಂಡಿ, ಕೋಳಿ ಶೆಡ್, ಎರೆಹುಳ ಘಟಕ, ತರದ ಬಾವಿ, ಕೃಷಿ ಹೋಂಡಾ, ಬದು ನಿರ್ಮಾಣ, ಮತ್ತು ಹಂದಿ ಕೊಟ್ಟಿಗೆ ಕಾಮೆಗಾರಿಗಳಿಗೆ ಹಾಗೂ ತೋಟಗಾರಿಕೆ ಬೆಳೆಗಳ ಕುರಿತು ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿ ರುವದಾಗಿ ತಿಳಿಸಿದರು.

ಪ್ರತಿ ಅರ್ಹ ಕುಟುಂಬ ಈ ಯೋಜನೆಗಳನ್ನು ಲದ್ದಿ ಪಡೆಯಲು ಮುಂದಾಗಬೇಕೆ0ದು ಕರೆ ನೀಡಿದರು.

ಈ ಸಂದರ್ಭದಲ್ಲಿ ಫಲಾನುಭವಿಗಳಿಗೆ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳು, ಮತ್ತು ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕರು ಗಳ ಜೊತೆಗೆ ಅರ್ಹತಾ ಪತ್ರಗಳನ್ನು ಹಂಚಿಕೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಪಂಚಾಯತ್ ರಾಜ್ ಸಹಾಯ ನಿರ್ದೇಶಕರು, ಹಾಗೂ ಇಲಾಖೆ ಅಧಿಕಾರಿಗಳು ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಸರ್ವ ಸದಸ್ಯರು, ಪಿಡಿಒಗಳು, ಟಿಸಿ, ಟಿಐಇಸಿ, ಟಿಎಂಐಎಸ್, ಟಿಎಇಎಸ್, ಬಿ ಎಫ್ ಟಿಎಸ್, ಜಿಕೆಎಂಎಸ್, ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ, ಮೊಕ, ಬೀಡಿಹಳ್ಳಿ, ಕಾರೆಕಲ್ಲು, ಎಂ ಗೋನಾಳು, ಶಿಡಿಗಿನ ಮೋಳ, ಯರಗುಡಿ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!