
ದ್ವೇಷ ಬಿಟ್ಟು ಪ್ರೀತಿಯಿಂದ ಬದುಕಿ : ಫಕೀರ ಸಿದ್ದರಾಮೇಶ್ವರ ಶ್ರೀಗಳು
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 7- ಜಾತಿಯ ಭಾವನೆಗಳನ್ನು ತೊಲಗಿಸಿ ಪ್ರೇಮ ಬಿತ್ತಿದ ಫಕೀರ ಶ್ರೀಗಳು ಭಾವೈಕ್ಯಕ್ಕೆ ಮತ್ತೊಂದು ಹೆಸರು ಎಂದು ಶಿರಹಟ್ಟಿಯ ಫಕೀರ ಸಿದ್ದರಾಮೇಶ್ವರ ಶ್ರೀಗಳು ಹೇಳಿದರು.
ತಾಲೂಕಿನ ಸಿದ್ದರಾಮಪುರ ಗ್ರಾಮದ ಕದಳಿವನ ಸಿದ್ದೇಶ್ವರ ಶ್ರೀಗಳ ಮಠದಲ್ಲಿ ಆಯೋಜಿಸಿದ ಧರ್ಮ ಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.
ದ್ವೇಷ ಬಿಟ್ಟು ಪ್ರೀತಿಯಿಂದ ಬದುಕಿದರೆ ಭೂಮಿಯ ಮೇಲೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಪ್ರೀತಿಯ ಬೀಜ ಬಿತ್ತಿದರೆ ಪ್ರೇಮದ ರಾಶಿ ಮಾಡಬಹುದು ದ್ವೇಷ ಬಿತ್ತಿದರೆ ಸರ್ವನಾಶ ಶತಹ ಸಿದ್ಧ ಎಂದು ಅವರು ನುಡಿದರು.
ದೇವರು ಇದ್ದಾನೆ ಅವರ ಪ್ರತಿನಿಧಿಯಾಗಿ ತಾಯಿ ಮತ್ತು ಗುರುಗಳನ್ನು ಸೃಷ್ಟಿಸಿದ್ದಾನೆ ಸ್ವರ್ಗ ತಾಯಿಯ ಪಾದದಲ್ಲಿ ಇದ್ದು ಪ್ರತಿಯೊಬ್ಬರು ಗೌರವಿಸಬೇಕು ಎಂದು ಸಲಹೆಯನ್ನು ನೀಡಿದರು.
ಚಿದಾನಂದ ಶ್ರೀಗಳು ಮಾತನಾಡಿ, ಜಾತಿ ಮತ ಪಂಥವಿಲ್ಲದೆ ಎಲ್ಲರನ್ನೂ ಒಂದು ಸೂರಿನಡಿ ಸೇರಿಸಿ ಭಾವೈಕ್ಯ ಸಾರಿದ ನಾಡಿನ ಏಕೈಕ ಮಠ ಎಂದರೆ ಅದು ಶಿರಹಟ್ಟಿಯ ಫಕೀರ ಮಹಾಸ್ವಾಮಿಗಳ ಮಠ ಎಂದು ಅವರು ಬಣ್ಣಿಸಿದರು.
ಸಿರಿಗೇರಿ ಗ್ರಾಮದ ಸಿ.ಎಂ.ನಾಗರಾಜ ಸ್ವಾಮಿ, ಬಿ.ಎಂ.ಎರಿಸ್ವಾಮಿ, ತೇಜಾಮೂರ್ತಿ, ರಾಘವೇಂದ್ರ ಗುಂಡಿಗನೂರು, ಪಂಪನಗೌಡ, ಬಿ.ಎಂ.ಜೆಡಿಸ್ವಾಮಿ, ರುದ್ರಮುನಿಸ್ವಾಮಿ, ಭೀಮನಗೌಡ, ಸೋಮಶೇಖರಪ್ಪ ಕರಿ, ಬಸವನಗೌಡ, ಡಾ.ಯು.ಬಿ.ಶ್ರೀನಿವಾಸ, ಬೈರಾಪುರ ಹನುಮನಗೌಡ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಎಂ.ಬಸವರಾಜ ಸ್ವಾಮಿ ಮತ್ತು ವಿಶ್ವನಾಥ ಹೂಗಾರ್ ಅವರನ್ನು ಸನ್ಮಾನಿಸಲಾಯಿತು.