
ಸಿದ್ದರಾಮಯ್ಯ ರಾಜಿನಾಮೆ ನೀಡಿ ರಾಜ್ಯದ ಗೌರವ ಕಾಪಾಡಲಿ : ಶಾಸಕ ದೊಡ್ಡನಗೌಡ ಪಾಟೀಲ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 2- ಮೂಡಾ ಹಗರಣದಲ್ಲಿ ಸಿಲುಕಿ ಅಧಿಕಾರ ದುರುಪಯೋಗ ಪಡೆಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರವರು ತಕ್ಷಣ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿ ರಾಜ್ಯದ ಗೌರವ ಕಾಪಾಡಲಿ ಎಂದು ವಿಧಾನ ಸಭಾ ಮುಖ್ಯ ಸಚೇತಕ ಹಾಗೂ ಶಾಸಕ ದೊಡ್ಡನಗೌಡ ಪಾಟೀಲ ಆಗ್ರಹಿಸಿದರು.
ಅವರು ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಜರುಗಿದ ಸುದ್ದಿಗೋಷ್ಠಿ ಉದ್ಧೇಶಿಸಿ ಮಾತನಾಡುತ್ತಿದ್ದರು, ಮೂಡಾ ಹಗರಣ ಕೂಡ ಅವರ ಅವದಿಯಲ್ಲೆ ನಡೆದಿದ್ದು, ಪತ್ರ ಬರೆಯುವ ಮೂಲಕ ತಪ್ಪು ಮಾಡಿರುವುದಾಗಿ ಒಪ್ಪಕೊಂಡಿದ್ದು ತಕ್ಷಣ ರಾಜಿನಾಮೆ ನೀಡುವಂತೆ ಆಗ್ರಹಿಸಿದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ನವೀನ್ ಗುಳಗಣ್ಣನವರ ಮಾತನಾಡಿ, ಕಾಂಗ್ರೆಸ್ ಮುಖಂಡರಿಗೆ ನಾಚಿಕೆ ಇಲ್ಲಾ ಹಗರಣ ಮಾಡಿ ರಾಜರಂತೆ ನಾಚಿಕೆ ಇಲ್ಲದೇ ತಿರುಗುತ್ತಿದ್ದಾರೆ. ರಾಜ್ಯ ಪಾಲರ ಬಗ್ಗೆ ಹಗುರವಾಗಿ ಮಾತನಾಡಿ ಮುಖ್ಯಮಂತ್ರಿ ಹುದ್ದೆಗೆ ಅಗೌರವ ಮಾಡಿದರು ಎಂದು ಆರೋಪಿಸಿದರು.
ರಾಜ್ಯದ ಮುಖ್ಯಮಂತ್ರಿಗಳು ಭಡತನ ಪ್ರದರ್ಶಿ ರಾಜ್ಯದ ಮಾನ ಹರಾಜು ಹಾಕುತ್ತಿದ್ದು ಹಿಂದೆ ಹಲವಾರು ಸಿಎಂಗಳು ಆರೋಪ ಬಂದಾಗ ರಾಜಿನಾಮೆ ನೀಡಿ ಮತ್ತೆ ಅಧಿಕಾರ ಹಿಡಿದ ಉದಾಹರಣೆಗಳಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಣಿ ಡಾ.ಬಸವರಾಜ ಕ್ಯಾವಟರ್, ಜಿಲ್ಲಾ ವಕ್ತಾರ ಸೋಮಶೇಖರ, ಜಿಲ್ಲಾ ಮಾಧ್ಯಮ ಸಂಚಾಲಕ ಮಹೇಶ ಹಾದಿಮನಿ ಇತರರು ಇದ್ದರು.