
ಕುಡಿಯುವ ನೀರು ಯೋಜನೆ ಸದುಪಯೋಗವಾಗಲಿ : ಶಾಸಕ ಜನಾರ್ಧನರೆಡ್ಡಿ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 28- ವಸತಿ ಗ್ರಾಮಗಳ ಬಹುಗ್ರಾಮ ಕುಡಿಯುವ ನೀರು ಯೋಜನೆ ಸದುಪಯೋಗವಾಗಲಿ ಎಂದು ಶಾಸಕ ಗಾಲಿ ಜನಾರ್ಧನರೆಡ್ಡಿ ಹೇಳಿದರು.
ವಿಧಾನಸಭಾ ಕ್ಷೇತ್ರದ ಚಿಕ್ಕಬೆಣಕಲ್ ಮತ್ತು ಇತರೆ 61 ಜನ ವಸತಿ ಗ್ರಾಮಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ಭೂಮಿ ಪೂಜೆ ಕಾರ್ಯವನ್ನು ನೆರವೇರಿಸಿ ಚಾಲನೆ ನೀಡಿ ಮಾತನಾಡಿ 2022-23ನೇ ಸಾಲಿನ ಜೆ.ಜೆ.ಎಂ ಯೋಜನೆ ಅಡಿಯಲ್ಲಿ ಕುಡಿಯುವ ನೀರು ಯೋಜನೆ ಯನ್ನು ಸರಿಯಾಗಿ ನಿರ್ವಹಿಸುವಂತೆ ತಿಳಿಸಲಾಗಿದೆ.
ಗ್ರಾಮಸ್ಥರು ಸಹಕಾರ ನೀಡಿ ಯೋಜನೆಗಳು ಸದುಪಯೋಗವಾಗಬೇಕಾದರೆ ಕೆಲಸಗಳ ಮೇಲೆ ನಿಗಾವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಮೀಣ ಮಂಡಲ ಅಧ್ಯಕ್ಷ ಚನ್ನಪ್ಪ ಮಳಗಿ, ಎಕ್ಸಿಕ್ಯೂಟಿವ್ ಇಂಜಿನಿಯರ್ ಮಹೇಶ್ ಶಾಸ್ತ್ರಿ, ಜೂನಿಯರ್ ಇಂಜಿನಿಯರ್ ಲಕ್ಷ್ಮಿ, ಮಾಜಿ ಎಂಎಲ್‌ಸಿ ಕರಿಯಣ್ಣ ಸಂಗಟಿ, ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರ ಕುಟುಂಬದವರಾದ ಶ್ರೀಕಾಂತ್ ಹುಲಸನಹಟ್ಟಿ, ಲೋಕೇಶ್, ಗ್ರಾಮ್ ಪಂಚಾಯತಿ ಸದಸ್ಯ ಮಾಲಾಬಾಯ್, ಮುಖಂಡರುಗಳಾದ ಮನೋಹರ ಗೌಡ ಹೇರೂರು, ಸಂಗಮೇಶ್ ಬಾದವಾಡಗಿ, ಮಲ್ಲೇಶಪ್ಪ ಗುಂಗೇರಿ, ದುರ್ಗಪ್ಪ ಆಗೋಲಿ, ಚನ್ನವೀರನ ಗೌಡ್ರು, ಆನಂದ ಗೌಡ, ವೀರೇಶ್ ಬಲಕುಂದಿ, ವೆಂಕಟೇಶ್ ಜಬ್ಬಲಗುಡ್ಡ, ಅರ್ಜುನ್ ನಾಯಕ್, ರಾಜೇಶ್ ರೆಡ್ಡಿ, ಸೋಮಶೇಖರ್ ನಾಯ್ಕ ಉಪಸ್ಥಿತರಿದ್ದರು.