
ತುಂಗಭದ್ರಾ ಕ್ರಸ್ಟ್ ಗೇಟ್ ಕಟ್ಟಾಗಿರುವುದಿಂದ ರೈತರಿಗೆ ಆಗುವ ನಷ್ಟವನ್ನು ಸರ್ಕಾರವೇ ಬರೀಸಲಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 13- ತುಂಗಭದ್ರಾ ಜಲಾಶಯದ 19ನೇ ಕ್ರಶ್ ಗೇಟ್ ಕಟ್ಟಾಗಿರುವುದರಿಂದ ರಿಪೇರಿಗಾಗಿ ಡ್ಯಾಮ್ ನ ನೀರು ವ್ಯರ್ಥವಾಗಿ ಹಾರಿಸಿ ರೈತರಿಗೆ ಅಪಾರ ನಷ್ಟವನ್ನು ಈಡು ಮಾಡಿದ ಸರ್ಕಾರವು ಭರಿಸಬೇಕೆಂದು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ( ಎ ಐ ಕೆ ಕೆ ಎಂ ಎಸ್ ) ಸಂಘಟನೆ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಗೋವಿಂದ ಮಾತನಾಡುತ್ತಾ, ಸರ್ಕಾರದ ನಿರ್ಲಕ್ಷದಿಂದ ಜಲಾಶಯದ ನೀರು ವ್ಯರ್ಥವಾಗಿ ಹರಿಸಬೇಕಾಗಿ ಬಂದಿದೆ, ಇದರಿಂದ ಈ ಭಾಗದ ರೈತರಿಗೆ ಬೆಳೆ ನಷ್ಟ ಆಗುವ ಅವಕಾಶವಿರುವುದರಿಂದ ಸರ್ಕಾರವೇ ಇವರ ನಷ್ಟವನ್ನು ಬಾರಿಸಬೇಕೆಂದು ಒತ್ತಾಯಿಸಿದರು. ಇಂದು ರೈತ ಕೃಷಿ ಕಾರ್ಮಿಕರ ಬದುಕು ನೈಸರ್ಗಿಕ ವಿಕೋಪದಿಂದಾಗಿ ಹಸಿಬರ ಒಣಬರದಿಂದ ತೀವ್ರ ಬಿಕ್ಕಟ್ಟಿನಲ್ಲಿದೆ ಇನ್ನೊಂದೆಡೆ ಕೃಷಿಗೆ ಬಳಸುವ ಯಂತ್ರೋಪಕರಣ ಬೀಜ ಗೊಬ್ಬರ ಕೀಟನಾಶಕಗಳ ಬೆಲೆಗಳು ಗಗನಕ್ಕೆ ಏರಿವೆ, ಇಷ್ಟೆಲ್ಲರ ನಡುವೆ ಬೆಳೆದಂತಹ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯೇ ಇಲ್ಲದಿರುವುದು ಕೃಷಿಯನ್ನು ಕೈಬಿಡುವಷ್ಟು ಹತಾಶಕ್ಕೆ ರೈತರು ಮುಂದಾಗಿದ್ದರೆ ಎಂದರು. ಕಳೆದ 15 ತಿಂಗಳಲ್ಲಿ 1182 ರೈತರು ಈ ಮೇಲಿನ ಪರಿಸ್ಥಿತಿಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು.
ಬೆಳೆಗೆ ನೀರು ಸಿಗದಿದ್ದಲ್ಲಿ ಒಂದು ಎಕರೆಗೆ 50,000 ನಷ್ಟ ಪರಿಹಾರ ನಿಗದಿಪಡಿಸಬೇಕು. ಈ ಬೆಳಗಾಗಿ ರೈತರು ಮಾಡಿದ ಎಲ್ಲಾ ಬ್ಯಾಂಕುಗಳ ಸಾಲ ಮನ್ನಾ ಮಾಡಬೇಕು, ಜಲಾಶಯದ ಸಂಪೂರ್ಣ ನೀರನ್ನು ಕೃಷಿಗಾಗಿ ಮಾತ್ರ ಬಳಸಬೇಕು. ಮುಂದಿನ ದಿನಗಳಲ್ಲಿ ಈ ರೀತಿಯ ಅನಾಹುತಗಳು ಸಂಭವಿಸಿದಂತೆ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಗುರಳ್ಳಿ ರಾಜ, ಜೊತೆಗೆ ಹಲವಾರು ಮಂದಿ ರೈತ ಮುಖಂಡರು ಪಾಲ್ಗೊಂಡಿದ್ದರು.