
ಬಳ್ಳಾರಿ ಸಂಪೂರ್ಣ ಅಭಿವೃದ್ಧಿಗೆ ಎಲ್ಲರೂ ಶ್ರಮಿಸೋಣ : ಶಾಸಕ ಜನಾರ್ದನ್ ರೆಡ್ಡಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 15- ಜಿಲ್ಲೆಯಲ್ಲಿ ಪ್ರಕೃತಿ ಪ್ರಸಾದಿತ, ಸಂಪನ್ಮೂಲಗಳು ಸಾಕಷ್ಟು ಇರುವೆ ಎಂದು, ಇಲ್ಲಿನ ನಾವೆಲ್ಲರೂ ಒಗ್ಗಟ್ಟಾಗಿ ಅವುಗಳನ್ನು ಬಳಸಿಕೊಂಡು ಅಭಿವೃದ್ಧಿಗೆ ಶ್ರಮಿಸೋಣ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ್ ರೆಡ್ಡಿ ಕರೆ ನೀಡಿದರು.
ನಗರದ ಪ್ರತಿಷ್ಠಾತ್ಮಕವಾದಂತ ರಾವ್ ಬಹುದ್ದೂರ್ ಮಹಾಬಲೇಶ್ವರಪ್ಪ ಎಂಜಿನಿಯರಿAಗ್ ಕಾಲೇಜ್ ಸಭಾಂಗಣದಲ್ಲಿ ನಡೆದ ಆಕೃತಿ, ಟೆಕ್ನಿಕಲ್ ಫೀಸ್ಟ್ ೨೦೨೪-೨೫ನೇ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಹಿಂದಕ್ಕೆ ತಾವು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ, ಸಮಗ್ರ ಬಳ್ಳಾರಿ ಅಭಿವೃದ್ಧಿಗಾಗಿ ಎಷ್ಟೋ ಕನಸುಗಳನ್ನು ಕಟ್ಟಿಕೊಂಡು ಅವುಗಳ ಕಾರ್ಯರೂಪಕ್ಕೆ ಶ್ರಮಿಸಿರುವುದಾಗಿ ತಿಳಿಸಿದರು. ಬಳ್ಳಾರಿ ಜಿಲ್ಲೆಯಲ್ಲಿ ಖನಿಜ ಸಂಪದಗಳು, ತುಂಗಭದ್ರಾ ಜಲಾಶಯ, ಪ್ರಕೃತಿ ಪ್ರಸಾದಿತ ಸಂಪದಗಳು ಇರುವುದಾಗಿ ತಿಳಿಸಿದರು.
ವಿದ್ಯಾವಂತರು, ಸರ್ಕಾರದ ಜೊತೆಗೆ ಕೈಜೋಡಿಸಿ ಸಮಗ್ರ ಬಳ್ಳಾರಿ ಅಭಿವೃದ್ಧಿ ಶ್ರಮಿಸಲು ಮುಂದಾಗ ಬೇಕೆಂದರು. ಬಳ್ಳಾರಿಗೆ ಸೌರಶಕ್ತಿ ಕೇಂದ್ರ ಸ್ಥಾಪನೆ, ಜೀನ್ಸ್ ಬಟ್ಟೆಗಳ ಕೇಂದ್ರ ಆಗಬೇಕಾಗಿದೆ. ನಾವೆಲ್ಲಾ ಹೋರಾಟ ಮಾಡೋಣ, ಇಂದಿನ ಯುವತಿ ಯುವಕರು ಭವಿಷ್ಯದ ಬೆಳಕು ಆದ್ದರಿಂದ ಬಳ್ಳಾರಿಯ ನಮ್ಮ ಹೆಮ್ಮೆಯ ಬಳ್ಳಾರಿ ಅಭಿವೃದ್ಧಿ ಪಡಿಸಲು ಹೋರಾಟ ಮಾಡೋಣ ಎಂದು ಕರೆ ನೀಡಿದರು.
ಎಂಜಿನಿಯರಿAಗ್ ವಿದ್ಯಾರ್ಥಿಗಳು ತಮ್ಮ ಕೋರ್ಸ್ಗಳು ಮುಗಿದ ನಂತರ ದೇಶದ ಆರ್ಥಿಕ ಅಭಿವೃದ್ಧಿಗೆ ಶ್ರಮಿಸಬೇಕೆಂದು ಕರೆ ನೀಡಿದರು.
ವಿವಿ ಸಂಘದ ಅಧ್ಯಕ್ಷರು ಅಲ್ಲಂ ಗುರು ಬಸವರಾಜ್, ತಮ್ಮ ಅಧ್ಯಕ್ಷತೆ ಭಾಷಣದಲ್ಲಿ ಮಾತನಾಡುತ್ತಾ ವೀರಶೈವ ವಿದ್ಯಾವತ್ಥಕ ಸಂಘ ದ ವಿದ್ಯಾರ್ಥಿಗಳು ಎಲ್ಲಿ ಹೋದರು ಪ್ರತಿ ೧೦ ಜನರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುವುದು ನಮಗೆ ತುಂಬಾ ಸಂತೋಷವಾಗಿದೆ ಎಂದರು.
ಆರ್ಟಿಫಿಶಿಯಲ್ ಇನ್ ಇಂಟೆಲಿಜೆನ್ಸ್ ಮತ್ತು ಮಿಷನ್ ಲರ್ನಿಂಗ್ ಎನ್ನುವುದು ಹೊಸದು ಹಾಗೆಯೇ ಮುಂದಿನ ದಿನಗಳಲ್ಲಿ ನೀವು ನಿಮ್ಮ ಎಂಜಿನಿಯರಿ0ಗ್ ಕ್ಷೇತ್ರದಲ್ಲಿ ಹೊಸದನ್ನು ತಯಾರು ಮಾಡಬೇಕೆಂದು ನಾನು ಕೋರುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಲ್ಬುರ್ಗಿಯ ವಿಟಿಯು ಪ್ರಾದೇಶಿಕ ನಿರ್ದೇಶಕರು ಡಾ.ಬಿ.ಶಂಭುಲಿAಗಪ್ಪ, ವಿವಿ ಸಂಘದ ಉಪಾಧ್ಯಕ್ಷರು ಮತ್ತು ಆರ್‌ವೈಎಂಸಿ ಕಾಲೇಜಿನ ಅಧ್ಯಕ್ಷರು ಜಾನೆಕುಂಟೆ ಬಸವರಾಜ, ವಿವಿ ಸಂಘದ ಜಂಟಿ ಕಾರ್ಯದರ್ಶಿ ಡಾ.ಅರವಿಂದ್ ಪಟೇಲ್, ಹ್ಯಾಪಿ ಮೇಟಿ, ಪಂಪನಗೌಡ, ಗಾಲಿ ಜನಾರ್ದನ್ ರೆಡ್ಡಿ ಸತಿಮಣಿ ಗಾಲಿ ಲಕ್ಷ್ಮಿ ಅರುಣ, ವಿವಿ ಸಂಘದ ಖಜಾಂಜಿ, ಬೈಲು ವದ್ದಿಗೇರಿ, ಎರ್ರಿಸ್ವಾಮಿ, ಆರ್‌ವೈಎಂಈಸಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರು, ಡಾ.ಟಿ.ಹನುಮಂತರ ರೆಡ್ಡಿ, ಎಲ್ಲಾ ವಿಭಾಗಗಳ ಉಪನ್ಯಾಸಕರು, ಮಹಾವಿದ್ಯಾಲಯದ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.