ಶರಣ ಸಾಹಿತ್ಯ ಪರಿಷತ್ತ್ ಸಾಮಾನ್ಯ ಸಭೆ

ಶರಣರ ವಿಚಾರಗಳನ್ನು ಮುಂದಿನ ತಲೆಮಾರಿಗೂ ಬಿತ್ತೋಣ – ಹೆಮಲತಾ ನಾಯಕ

ಕರುನಾಡ ಬೆಳಗು ಸುದ್ದಿ 

ಕೊಪ್ಪಳ 01 – ಶರಣರ ವಿಚಾರಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವ ನಮ್ಮೆಲ್ಲರ ಮೇಲಿದೆ ಎಂದು ವಿಧಾನ ಪರಿಷತ್ ಸದಸ್ಯೆ ಹೇಮಲತಾನಾಯಕ ಹೇಳಿದರು.

ಅವರು ನಗರದ ಶಾಂತಿನಿಕೇತನ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಅಖಿಲ‌ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆ ಜಿಲ್ಲಾ ಮತ್ತು ತಾಲೂಕು ಘಟಕಗಳ ಸಂಯುಕ್ತಾಶ್ರಯದಲ್ಲಿ ಕೊಪ್ಪಳ ಜಿಲ್ಲಾ ಸರ್ವ ಸದಸ್ಯರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆ ಇಡೀ ರಾಜ್ಯದಲ್ಲಿ ಸ್ವಂತ ನಿವೇಶನವನ್ನು ಸಂಘಟನೆಯ ಶಕ್ತಿಯಿಂದ ಹೊಂದಿರುವುದು ಹೆಮ್ಮೆಯ ವಿಷಯ ,
ಶರಣರ ವಿಚಾರಗಳನ್ನು ಮುಂದಿನ ತಲೆಮಾರಿಗೂ ಬಿತ್ತುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು‌.


ಪ್ರರಂಭದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಶಿವಕುಮಾರ ಕುಕನೂರು ಮಾತನಾಡಿ ಅಖಿಲ‌ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆ ರಚನೆಯಾಗದ ತಾಲೂಕು ಘಟಕಗಳ‌ ರಚನೆ, ಕ್ರಿಯಾತ್ಮಕ ಚಟುವಟಿಕೆಗಳ ರೂಪರೇಷೆಗಳ ಕುರಿತು ತಾವೆಲ್ಲರೂ ನೀಡುವ ಅತ್ಯಮೂಲ್ಯ ಸಲಹೆ, ಸೂಚನೆಯೊಂದಿಗೆ ಈಡೀ ಜಿಲ್ಲೆಯಾದ್ಯಾಂತ ಜಿಲ್ಲಾ ಮತ್ತು ತಾಲೂಕ ಘಟಕಗಳನ್ನು ಕಟ್ಟೋಣ ಎಂದರು.

ನೂತನವಾಗಿ ಅಧ್ಯಕ್ಷರಾದ ಶಿವಕುಮಾರ ಕುಕನೂರ ಅವರಿಗೆ ಸನ್ಮಾನಿಸಲಾಯಿತು.

ಶಾಂತಪ್ಪ ಬೆಲ್ಲದ, ಡಾ.ಸಂಗಮೇಶ ಕಲಹಾಳ, ಡಾ.ಸಿ.ಎಸ್.ಕರಮುಡಿ, ಸಾವಿತ್ರಿ ಮುಜುಂದಾರ, ನಾಗರಾಜನಾಯಕ ಡೊಳ್ಳಿನ, ಡಾ.ಕವಿತಾ ಹ್ಯಾಟಿ, ಉಮೇಶಬಾಬು ಸುರ್ವೆ, ಸಲಹೆಗಳನ್ನು ನೀಡಿದರು‌.ಎಂ.ಬಿ.ಅಳವಂಡಿ, ಮಾತನಾಡಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಕಟ್ಟಡ ಪ್ರಾರಂಭಿಸಿದರೆ ಸದರಿ ಕಟ್ಟಡಕ್ಕೆ 100 ಚೀಲ ಸಿಮೆಂಟ್, ಕಟ್ಟಿಗೆ ನೀಡುತ್ತೇನೆ, ವಚನ ಸಾಹಿತ್ಯದ ಕುರಿತು ಗ್ರಂಥಾಲಯ ನಿರ್ಮಿಸಲು ಹನ್ನೊಂದು ಸಾವಿರ ರೂಪಾಯಿಗಳನ್ನು ದೇಣಿಗೆ ನೀಡಿದರು.

ಸಭೆಯನ್ನು ಶರಣಮ್ಮ ಕಲ್ಮಂಗಿ ವಚನ ಗಾಯನದ ಮೂಲಕ‌ ಪ್ರಾರಂಭಿಸಲಾಯಿತು. ಕದಳಿ ಮಹಿಳಾ ವೇದಿಕೆ ಜಿಲ್ಲಾಧ್ಯಕ್ಷೆ ನಿರ್ಮಲಾ ಬಳ್ಳೊಳ್ಳಿ ಅಧ್ಯಕ್ಷೀಯ ನುಡಿಗಳನ್ನಾಡಿದರು, ಜಿಲ್ಲಾ ಕಾರ್ಯದರ್ಶಿ ಸೋಮನಗೌಡ ಹೊಗರನಾಳ ನಿರೂಪಿಸಿದರು , ವಿರೇಶ ಕೊಪ್ಪಳ ವಂದಿಸಿದರು.

 

 

Leave a Reply

Your email address will not be published. Required fields are marked *

error: Content is protected !!