WhatsApp Image 2024-08-19 at 6.09.26 PM

ಜಾನಪದ ಬೆಳೆಸಿ ಉಳಿಸಲು ಶ್ರಮಿಸೋಣ : ಗುರುರಾಜ್ ಹೊಸಕೋಟೆ

ಕರುನಾಡ ಬೆಳಗು ಸುದ್ದಿ

ವಿಜಯನಗರ, 19- ಜಾನಪದ ಇತಿಹಾಸ ಸಾವಿರಾರು ವರ್ಷಗಳ ಹಳೆಯದಾಗಿದ್ದು,ಇದನ್ನು ಉಳಿಸಿ ಬೆಳೆಸುವ ಕಾರ್ಯಕ್ರಮಗಳಲ್ಲಿ ಪ್ರತಿಯೊಬ್ಬರು ಭಾಗವಹಿಸಬೇಕೆಂದು, ಜಾನಪದ ಕಲಾವಿದರಾದ ಗುರುರಾಜ್ ಹೊಸಕೋಟೆ ಅವರು ಅಭಿಪ್ರಾಯ ಪಟ್ಟರು.

ನಗರದ ಮಲ್ಲಿಗೆ ಹೋಟೆಲ್ ಸಭಾಂಗಣದಲ್ಲಿ ಶ್ರೀ ಕೀರ್ತಿ ಜಾನಪದ ಮತ್ತು ಸುಗಮ ಸಂಗೀತ ಕಲಾ ಟ್ರಸ್ಟ್ ಅಸ್ತಿತ್ವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹಿಂದಿನ ತಾಂತ್ರಿಕ ಯುಗದಲ್ಲಿ ನಶಿಸಿ ಹೋಗುತ್ತಿರುವ ಜಾನಪದ ಕಲೆಯನ್ನು ಜೀವಂತಿಕೆಯಾಗಿ ಇಡುವ ಬಗ್ಗೆ ಹಾಗೂ ಜಾನಪದ ಇತಿಹಾಸ ಸಾವಿರಾರು ವರ್ಷಗಳ ಹಳೆದಾಗಿದ್ದು ಇದನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕೆಂದು ಹೇಳಿದರು.

ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಪಾಶ್ಚ್ಯಾತ್ಯ ಸಂಗೀತಗಳಿಗೆ ಮಾರುಹೋಗುತ್ತಿರುವ ಈ ಸಂದರ್ಭದಲ್ಲಿ ಶ್ರೀ ಕೀರ್ತಿ ಜಾನಪದ ಮತ್ತು ಸುಗಮ ಸಂಗೀತ ಕಲಾ ಟ್ರಸ್ಟ್ ಅವರು ಒಂದು ವಿನೂತವಾದ ಕಾರ್ಯಕ್ರಮವನ್ನು ಮಾಡಿ ಕಳೆಯನ್ನು ಬೆಳೆಸಲು ಶ್ರಮಿಸುವುದು ದೊಡ್ಡದು ಎಂದರು.

ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಹಾಜರಾದ, ಪ್ರತಿಷ್ಠಿತ ಬಿಎಂಎಂ ಇಸ್ಪಾತ್ ಕಂಪನಿಯ ವ್ಯವಸ್ಥಾಪಕರಾದ ಗಣಪತಿ ಹೆಗಡೆಯವರು ಭಾಷಣೆಯನ್ನು ಮುಂದುವರಿಸುತ್ತಾ, ನಮ್ಮ ದೇಶ ಸಂಸ್ಕೃತಿ ಸಂಪ್ರದಾಯವನ್ನು ಇತರ ದೇಶಗಳಿಗೆ ಸಾರುವ ಕೆಲಸ ಕೇವಲ ಸಾಂಸ್ಕೃತಿಕ ರಂಗಕ್ಕೆ ಮಾತ್ರ ಸಾಧ್ಯ ಎಂದು ಇದಕ್ಕೆ ತಮ್ಮ ಸಹಕಾರ ಯಾವಾಗಲೂ ಇರುತ್ತದೆ ಎಂದು ಹೇಳಿದರು.

ಪದ್ಮಶ್ರೀ ಪುರಸ್ಕೃತರಾದ, ಮಂಜಮ್ಮ ಜೋಗಿತಿ ಅವರು, ಹುಡ ಅಧ್ಯಕ್ಷ, ಇಮಾಮ್ ನಿಯಾ ಜಿ, ಕನ್ನಡ ಮತ್ತು ಸಂಸ್ಥೆ ಇಲಾಖೆಯ ಸಹಾಯ ನಿರ್ದೇಶಕರಾದ ಸಿದ್ದಲಿಂಗೇಶ್ವರ ರಂಗಣ್ಣನವರ್, ಮಲ್ಲಿಗೆ ಹೋಟೆಲ್ ಮಾಲೀಕ ಗೌತಮ್, ಶ್ರೀ ಕೀರ್ತಿ ಜಾನಪದ ಮತ್ತು ಸುಗಮ ಸಂಗೀತಗಳ ಟ್ರಸ್ಟ್ ಪ್ರತಿನಿಧಿ, ಶ್ರೀಮತಿ ಕಮಲ ಕುಲಕರ್ಣಿ ಗುಜ್ಜಲ್ ಗಣೇಶ್, ಕಸಾಟಿ ಉಮಾಪತಿ , ತಾರೆ ಹಳ್ಳಿ ಜಂಬೂನಾಥ ಗಳ ಜೊತೆಗೆ ಟ್ರಸ್ಟಿನ ಪದಾಧಿಕಾರಿಗಳು ಮತ್ತು ಕಲಾವಿದರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!