KB

ಶಾಲಾ, ಕಾಲೇಜಿನ ವಿದ್ಯಾರ್ಥಿಗಳಿಗೆ ಅಂಚೆ ಇಲಾಖೆಯಿಂದ ಪತ್ರ ಲೇಖನ ಸ್ಪರ್ಧೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 4- ಭಾರತೀಯ ಅಂಚೆ ಇಲಾಖೆ, ಕರ್ನಾಟಕ ಅಂಚೆ ವೃತ್ತವು ಪ್ರತಿ ವರ್ಷ ನಡೆಸುವ ರಾಷ್ಟ್ರ ಮಟ್ಟದ ಸ್ಪರ್ಧೆ “ಢಾಯಿ ಅಖರ್” ಪತ್ರ ಲೇಖನ ಅಭಿಯಾನದಲ್ಲಿ ರಾಜ್ಯದ ಜನತೆಗೆ, ಅದರಲ್ಲೂ ವಿಶೇಷವಾಗಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಸ್ಪರ್ಧೆಗೆ ಭಾಗವಹಿಸಲು ತಿಳಿಸಿದೆ.

ಶೀರ್ಷಿಕೆ : “ಬರವಣಿಗೆಯ ಆನಂದ : ಡಿಜಿಟಲ್ ಯುಗದಲ್ಲಿ ಪತ್ರಗಳ ಮಹತ್ವ” ಎಂಬ ಶಿರ್ಷಿಕೆಯಡಿಯಲ್ಲಿ ಪತ್ರಲೇಖನ ಸ್ಪರ್ಧೆ ಏರ್ಪಡಿಸಲಾಗಿದೆ. ಕನ್ನಡ, ಹಿಂದಿ, ಇಂಗ್ಲೀಷ್ ಯಾವುದರೂ ಒಂದು ಭಾಷೆಯಲ್ಲಿ ಕೈ ಬರಹದ ಮುಖೇನ ಪತ್ರವನ್ನು ಬರೆಯಬಹುದು. ಕಡ್ಡಾಯವಾಗಿ ಕೈ ಬರಹದ ಲೇಖನಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಅಭಿಯಾನವು ಸೆಪ್ಟಂಬರ್ ೧೪ ರಿಂದಲೇ ಪ್ರಾರಂಭವಾಗಿದ್ದು, ಡಿಸೆಂಬರ್ ೧೪ ರವರೆಗೆ ತೆರೆದಿರುತ್ತದೆ. ಅವಧಿ ನಂತರದ ಪತ್ರಗಳನ್ನು ಸ್ವೀಕರಿಸಲಾಗುವುದಿಲ್ಲ.

ಸ್ಪರ್ಧಿಗಳು ಅಂಚೆ ಕಚೇರಿಗಳಲ್ಲಿ ಲಭ್ಯವಿರುವ ಅಂತರ್ ದೇಶೀಯ ಪತ್ರಗಳು(ಐಎಲ್‌ಸಿ-ಇನ್‌ಲ್ಯಾಂಡ್ ಲೇಟರ್ ಕಾರ್ಡ್ ಮತ್ತು ಲಕೋಟೆಗಳನ್ನು (ಎನ್ವಲಪ್) ಬಳಸಿ ಪತ್ರಗಳನ್ನು ಬರೆಯಬಹುದು. ಅಂತರ್ ದೇಶೀಯ ಪತ್ರದ ಮೂಲಕ ಬರೆಯುವ ಸ್ಪರ್ಧೆಗಳು ೫೦೦ ಪದಗಳ ಮಿತಿಯಲ್ಲಿ ಬರೆಯಬೇಕು. ಲಕೋಟಿಯನ್ನು ಬಳಸಿ ಬರೆಯುವ ಸ್ಪರ್ಧಿಗಳು, ೧೦೦೦ ಪದಗಳ ಮಿತಿಯಲ್ಲಿ ಎ೪ ಸೈಝಿನ ಬಿಳಿಹಾಳೆಯಲ್ಲಿ ಬರೆದು ಲಕೋಟೆಗೆ ಸೂಕ್ತ ಅಂಚೆಚೀಟಿಯನ್ನು (sಸ್ಟಾö್ಯಂಪ್) ಲಗತ್ತಿಸಿ ಕಳುಹಿಸಬೇಕು.

ಪ್ರವೇಶ ಶುಲ್ಕ : ಯಾವುದೇ ನಿಗದಿತ ರೀತಿಯ ಪ್ರವೇಶ ಶುಲ್ಕ ಇರುವುದಿಲ್ಲ. ಉಚಿತ ಪ್ರವೇಶ, ಕೇವಲ ಲೇಖನ ಸಾಮಗ್ರಿಗಳಾದ ಅಂತರ್ ದೇಶೀಯ ಪತ್ರ ಅಥವಾ ಲಕೋಟೆ ಖರೀದಿಸಬೇಕು.

ವಯೋಮಿತಿ : ವಯಸ್ಸಿನ ಮಿತಿ ಇಲ್ಲದೆ ಎಲ್ಲರೂ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸ್ಪರ್ಧೆಯು ಎರಡು ವಯೋಮಿತಿಯ (೧೮ ವರ್ಷದೊಳಗಿನ ಮತ್ತು ೧೮ ವರ್ಷ ಮೀರಿದ) ವರ್ಗದಲ್ಲಿ ನಡೆಯಲಿದೆ. ಎರಡು ವಿಭಾಗಗಳಿಗೂ ಪ್ರತ್ಯೇಕ ಪ್ರಶಸ್ತಿಗಳು (ಸಪರೇಟ್ ಪ್ರೆöÊಜ್ ಕ್ಯಾಟಗರಿ ಫಾರ್ ಈಚ್ ಎಜ್ ಗ್ರೂಫ್) ಇದ್ದು, ರಾಜ್ಯ ಅಂಚೆ ವೃತ್ತದ ಮಟ್ಟದಲ್ಲಿ, ಹಾಗೂ ರಾಷ್ಟ್ರಮಟ್ಟದಲ್ಲಿ ಎರಡು ವಿಭಾಗಗಳಲ್ಲಿಯೂ ಪ್ರತ್ಯೇಕವಾಗಿ ಪ್ರಶಸ್ತಿಗಳನ್ನು ನೀಡಲಾಗುವುದು. ವಿಶೇಷವಾಗಿ ಶಾಲಾ ಮಕ್ಕಳು, ಕಾಲೇಜ್ ವಿದ್ಯಾರ್ಥಿಗಳು, ಗೃಹಿಣಿಯರು, ಉದ್ಯೋಗಸ್ಥರು, ಯಾರೇ ಇರಲಿ ತಮ್ಮದೇ ಸಮಯವನ್ನು ತೆಗೆದುಕೊಂಡು ಮನೆಯಲ್ಲಿಯೇ ಕುಳಿತು ಪತ್ರವನ್ನು ಬರೆಯಬಹುದು.

ಆಯ್ಕೆ ವಿಧಾನ : ವಿಭಾಗೀಯ ಮಟ್ಟದಲ್ಲಿ(ಡಿವಿಜಿನಲ್ ಲೆವೆಲ್) ಸ್ವೀಕರಿಸಿದ ಎಲ್ಲಾ ಪತ್ರಗಳನ್ನು ವಯೋಮಿತಿ ಮತ್ತು ಅಂಚೆ ಸಾಮಗ್ರಿಗೆ (ಪೋಸ್ಟಲ್ ಸ್ಟೇಷನರಿ) ಅನುಗುಣವಾಗಿ ವಿಂಗಡಿಸಿ, ಪ್ರತಿ ವಿಭಾಗದಲ್ಲಿ ಮೂರು ಉತ್ಕೃಷ್ಟ ಪತ್ರಗಳನ್ನು ರಾಜ್ಯಮಟ್ಟಕ್ಕೆ ಆಯ್ಕೆ ಮಾಡಿ ಕಳುಹಿಸಲಾಗುತ್ತದೆ. ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಪಡೆದ ಪತ್ರಗಳನ್ನು, ರಾಷ್ಟ್ರಮಟ್ಟದ ಸ್ಪರ್ಧೆಗೆ ಕಳುಹಿಸಲಾಗುತ್ತದೆ. ರಾಜ್ಯಮಟ್ಟದ ವಿಜೇತರ ಪಟ್ಟಿಯನ್ನು ಅಯಾ ರಾಜ್ಯಗಳ ಅಂಚೆ ವೃತ್ತದ ವೆಬ್‌ಸೈಟ್‌ಗಳ ಮೂಲಕ ಘೋಷಿಸಲಾಗುತ್ತದೆ.

ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ (ವಿಯೋಮಿತಿ ಮತ್ತು ಅಂಚೆ ಸಾಮಗ್ರಿಗೆ ಪ್ರತ್ಯೇಕವಾಗಿ) ಪ್ರಥಮ ಬಹುಮಾನ ೨೫,೦೦೦, ದ್ವಿತೀಯ ಬಹುಮಾನ ೧೦,೦೦೦ ಮತ್ತು ತೃತೀಯ ಬಹುಮಾನ ೫,೦೦೦ ಇರುತ್ತದೆ. ಹಾಗೂ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ (ವಯೋಮಿತಿ ಮತ್ತು ಅಂಚೆ ಸಾಮಗ್ರಿಗೆ ಪ್ರತ್ಯೇಕವಾಗಿ) ಪ್ರಥಮ ಬಹುಮಾನ ೫೦,೦೦೦, ದ್ವಿತೀಯ ಬಹುಮಾನ ೨೫,೦೦೦, ಮತ್ತು ತೃತೀಯ ಬಹುಮಾನ ೧೦,೦೦೦ ಇರುತ್ತದೆ.

ಸೂಚನೆಗಳು : ಪ್ರತಿ ಅಂತರ್ ದೇಶಿಯ ಪತ್ರ ಮತ್ತು ಲಕೋಟೆಗಳ ಮೇಲೆ “ಎಂಟ್ರಿ ಫಾರ್ ಢಾಯಿ ಅಖರ್” ಎಂಬ ತಲೆ ಬರಹ (ಹೆಡ್ಡಿಂಗ್ ಆನ್ ಎನ್ವಲಪ್) ಬರೆಯಬೇಕು. ತಲೆಬರಹದ ಕೆಳಗೆ, ಐ ಡಿಕ್ಲಿಯರ್ ಐ ಯಮ್ ಬಿಲೋವ್/ಅಬೋವ್ ೧೮ ಎಜ್ ಅ್ಯಸ್ ಆನ್ (ನೋಟಿಪೈಡ್ ಡೇಟ್) ಎಂಬ ವಯಸ್ಸಿನ ಸ್ವಯಂ ದೃಢೀಕರಣ (ಎಜ್ ಸೆಲ್ಫ್ ಡಿಕ್ಲೆರೇಷನ್) ನೀಡುವ ಅಡಿಬರಹವನ್ನು (ಸಬ್ ಹೆಡ್ಡಿಂಗ್ ) ಬರೆಯಬೇಕು.

ಪತ್ರಗಳನ್ನು ನೀವು ವಾಸಿಸುವ ವಿಳಾಸಕ್ಕೆ ಸಂಬAಧಿಸಿದ ಅಂಚೆ ವಿಭಾಗದ ಅಧೀಕ್ಷಕರಿಗೆ ಕಳುಹಿಸಬೇಕು. ಕರ್ನಾಟಕ ಅಂಚೆ ವೃತ್ತದ ಅಂಚೆ ಅಧೀಕ್ಷಕರ ವಿಳಾಸಗಳನ್ನು ವೆಬ್ ಸೈಟ್: https://karnatakapost.gov.in ನಲ್ಲಿ ನೀಡಿದ ಪಟ್ಟಿಯಲ್ಲಿ ತಿಳಿಸಲಾಗಿದೆ. ಅಥವಾ ಸಮೀಪದ ಅಂಚೆ ಕಚೇರಿಯನ್ನು ಸಂಪರ್ಕಿಸಿ ವಿಳಾಸವನ್ನು ಪಡೆಯಬಹುದು. ಪತ್ರಗಳನ್ನು ಢಾಯಿ ಆಖರ್ ಸ್ಪರ್ಧೆಗೆ ನಿಗದಿಪಡಿಸಿದ ಪ್ರತ್ಯೇಕ ಅಂಚೆಪೆಟ್ಟಿಗೆ (ಸಪರೇಟ್ ಸ್ಪೇಷಲ್ ಲೇಟರ್ ಬಾಕ್ಸ್)ಗೆ ಹಾಕಬೇಕು. ಅಥವಾ ಅಂಚೆ ಕಚೇರಿಯಲ್ಲಿ ಅಂಚೆಪಾಲಕ (ಪೋಸ್ಟ್ಮಾಸ್ಟರ್) ರ ಸುಪರ್ದಿಗೆ ಮುಂದಿನ ಹಂತಕ್ಕೆ ಕಳುಹಿಸಲು ನೀಡಬೇಕು. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಸಮೀಪದ ಅಂಚೆ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬೇಕು ಎಂದು ಕೊಪ್ಪಳ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!