
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 43;
ಡಿ , 01 ರಂದು 2000 – 01 ನೇ ಸಾಲಿನ
ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಂದ ಗುರುವಂದನೆ
ಮಕ್ಕಳ ಸಮುದ್ರದಲ್ಲಿನ ರತ್ನಗಳಂತೆ – ಮಾಗಳ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 01- ವಿಧ್ಯಾರ್ಥಿಗಳು ಸಮುದ್ರದ ಗರ್ಭದಲ್ಲಿ ಅಡಗಿರುವ ಮುತ್ತು – ರತ್ನಗಳಿದ್ದಂತೆ ಸಮಯ ಬಂದಾಗ ಪ್ರಜ್ವಲಿಸುತ್ತವೆ ಎಂದು ಶಿಕ್ಷಣ ತಜ್ಞ ಟಿ ವ್ಹಿ ಮಾಗಳದ ಹೇಳಿದರು .
ಅವರು ರವಿವಾರದಂದು ನಗರದ ಶ್ರೀಗವಿಸಿದ್ಧೇಶ್ವರ ಸಂಯುಕ್ತ ಪ್ರೌಢ ಶಾಲಾ ಆವರಣದಲ್ಲಿ ಪ್ರೌಢಶಾಲೆಯ 2000- 2001ನೇ ಸಾಲಿನ 10ನೇ ತರಗತಿ ವಿದ್ಯಾರ್ಥಿಗಳಿಂದ ಗುರುವಂದನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗುರುಗಳಿಂದ ವಿಧ್ಯಾರ್ಥಿಗಳು ಅಕ್ಷರ ಕಲಿತರೆ ಮಕ್ಕಳಿಂದ ಶಿಕ್ಷಕರು ಅನುಭವದ ಪಾಠ ಕಲಿಯುತ್ತಾರೆ. ಶಿಕ್ಷಕರು ಕಲಿಸುವುದಕ್ಕಿಂತ ಮಕ್ಕಳಿಂದ ಕಲಿಯುವುದೆ ಹೆಚ್ಚು. ಪರಿಕ್ಷೆಗಾಗಿ ನಾವು ಪಾಠ ಮಾಡಿ ಮಕ್ಕಳನ್ನು ಸಿದ್ದಪಡಿಸಿದರೆ ಜೀವನದ ಪರಿಕ್ಷೆಯಲ್ಲಿ ಅವರೆ ರ್ಯಂಕ ಪಡೆಯುತ್ತಾರೆ ಎಂದರು.
ಶ್ರೀಗವಿಸಿದ್ಧೇಶ್ವರ ಪ್ರೌಢಶಾಲೆ ಕೇವಲ ಸಂಸ್ಥೆಯಲ್ಲ ಗಮಿಮಠದ ಹಲವಾರು ಯತಿಗಳ ತಪಸ್ಸಿನ ಶಕ್ತಿ ಇದರಲ್ಲಿದೆ, ಈ ಶಾಲೆಯಲ್ಲಿ ಓದಿದ ಮಕ್ಕಳು ಜಗತ್ತಿನ ಮೂಲೆ ಮೂಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಅಮರೇಶ ಕರಡಿ ಅಧ್ಯಕ್ಷತೆ ವಹಿಸಿದ್ದರು ,
ಈ ಸಂದರ್ಭದಲ್ಲಿ ಶಿಕ್ಷರಾದ ಬಿ, ವ್ಹಿ, ರಾಮರಡ್ಡಿ . ಪಿ,ಟಿ ಬಡಿಗೇರ. ವಿ, ಕೆ ಜಾಗಟಗೇರಿ, ಜಿ ಎಸ್ ಚಲವಾದಿ ಸೇರಿದಂತೆ 33 ಶಿಕ್ಷಕರಿಗೆ ಸನ್ಮಾನ ಹಾಗೂ ಗುರುವಂದನೆ ಜರುಗಿತು.2000-01ನೇ ಸಾಲಿನ ವಿದ್ಯಾರ್ಥಿಗಳು ಹಾಗೂ ಕುಟುಂಬದ ವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸತೀಶ ಜೋಶಿ ನಿರೂಪಿಸಿದರು. ಅನಗ ಜೋಶಿ ಪ್ರಾರ್ಥಿಸಿದರು. ಬಸವರಾಜ್ ಶಿರುಗುಂಪಿ ಶೆಟ್ಟರ್ ಸ್ವಾಗತಿಸಿದರು, ಶರಣಯ್ಯ ಅಬ್ಬಿಗೇರಿಮಠ ಪ್ರಾಸ್ತವಿಕ ನುಡಿದರು. ಸಣ್ಣನಾಗರಾಜ ವಂದಿಸಿದರು.ಶಿವಕುಮಾರ ಟ್ಯಾಂಗದ, ವಿನೋದ ಎಡವೆ,ಆಸಿಫ್ ಕಲಾಲ, ಬರಮಜ್ಜ ಡೊಳ್ಳಿನ್, ಪಂಪಣ್ಣ ಕೆಂಗಾರಿ ಮಂಜುನಾಥ ದೇಶಪಾಂಡೆ ಇನ್ನಿತರ ಕಾರ್ಯಕ್ರಮವನ್ನು ಸಂಘಟಿಸಿದರು.