
ಕರಮುಡಿ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಲಿಂಗರಾಜ ನೇಮಕ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 16- ತಾಲೂಕಿನ ಕರಮುಡಿ ಗ್ರಾಮ ಪಂಚಾಯಿತಿಗೆ ನೂತನವಾಗಿ ಗ್ರಾಮದ ಲಿಂಗರಾಜ ಉಳ್ಳಾಗಡ್ಡಿ ಅವಿರೋಧ ಅಧ್ಯಕ್ಷರಾಗಿ ಆಯ್ಕೆಗೊಂಡರು.
ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ನಡೆದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಹಿಂದಿನ ಅಧ್ಯಕ್ಷ ಕಲ್ಲಿನಾಥ ಲಿಂಗಣ್ಣನವರ್ ತೆರವಾದ ಸ್ಥಾನಕ್ಕೆ ಒಬ್ಬರೇ ಸದಸ್ಯರು ನಾಮಪತ್ರ ಸಲ್ಲಿಸಿದ್ದು, ನಾಮಪತ್ರವನ್ನು ಚುನಾವಣಾ ಅಧಿಕಾರಿಯಾಗಿ ಕರ್ತವ್ಯದಲ್ಲಿ ಭಾಗಿಯಾದ ಬಸವರಾಜ ತೆನ್ನಳ್ಳಿಗೆ ಸಲ್ಲಿಸಿದರು. ನಂತರ ಮಧ್ಯಾಹ್ನ ವೇಳೆಗೆ ಏಕಕೈ ನಾಮಪತ್ರ ಸಲ್ಲಿಕೆಯಿಂದ ಅಧ್ಯಕ್ಷರನ್ನಾಗಿ ಲಿಂಗರಾಜ ಅವರನ್ನು ಅಧಿಕೃತವಾಗಿ ಘೋಷಿಸಲಾಯಿತು.
ಈ ವೇಳೆಯಲ್ಲಿ ಗ್ರಾಮ ಪಂಚಾಯಿತಿ ಪಿಡಿಒ ಬಸವರಾಜ ಕಿಳ್ಳಿಕ್ಯಾತರ್, ಗ್ರಾ.ಪಂ. ಉಪಾಧ್ಯಕ್ಷ ಲಕ್ಷö್ಮವ್ವ ಲಮಾಣಿ, ಸದಸ್ಯರಾದ ಲಕ್ಷö್ಮವ್ವ ಕರೆಕ್ಕಿ, ಗೀತಾ ತುಪ್ಪದ್, ಮೈಲಾರಪ್ಪ ಪಲ್ಲೇದ್, ಅಂದವ್ವ ಮುಗಳಿ, ಮರ್ದಾನಸಾಬ್ ಮುಲ್ಲಾ, ರಾಮಪ್ಪ ಹೊಕ್ಕಳದ್, ಶರಣವ್ವ ವಡ್ಡರ್, ಶೇಖರಗೌಡ ಮಾಲಿಪಾಟೀಲ್, ಕಾಳಪ್ಪ ಬಡಿಗೇರ್, ರೇಣಕಾ ಹವಳಿ, ಮುಖಂಡರಾದ ವೀರಣ್ಣ ನಿಂಗೋಜಿ, ಸಂಗಪ್ಪ ಬಂಡಿ, ಶಿವಪುತ್ರಪ್ಪ ಮಲ್ಲಿಗೆವಾಡ, ಬಸವರಾಜ ಉಳ್ಳಾಗಡ್ಡಿ, ವೀರಣ್ಣ ಬಿಲ್ಲಕುಂದಿ, ವೀರಣ್ಣ ಮಾನಶೆಟ್ಟರ್, ಹುಚ್ಚೀರಪ್ಪ ರಾಂಪೂರ, ಶರಣು ಕಳಸಪ್ಪನವರ್, ಎಸ್.ವಿ.ಪಾಟೀಲ್, ಮಂಜುನಾಥ ಕುಕನೂರ, ಪಂಚಪ್ಪ ಬಿಸನಳ್ಳಿ, ಯಲ್ಲಪ್ಪ ಹಡಗಲಿ, ವಿರುಪಾಕ್ಷಪ್ಪ ಉಳ್ಳಾಗಡ್ಡಿ, ಚನ್ನಬಸಪ್ಪ ಬಂಗಾರಶೆಟ್ಟಿ, ಪರಸಪ್ಪ ಲಮಾಣಿ, ಗಂಗಪ್ಪ ಹವಳಿ, ಈರಣ್ಣ ಪತ್ತಾರ್, ಸಂಗಣ್ಣ ಅರಳಿ ಸೇರಿದಂತೆ ಇನ್ನಿತರರು ಇದ್ದರು.