
ದೇಶ ಕಂಡ ಮಹಾನ್ ಶ್ರೇಷ್ಠ ಕವಿ ಮಹರ್ಷಿ ವಾಲ್ಮೀಕಿ : ರಾಜ ವರದನಾಯಕ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 7- ದೇಶ ಕಂಡ ಮಹಾನ್ ಶ್ರೇಷ್ಠ ಕವಿ ಮಹರ್ಷಿ ವಾಲ್ಮೀಕಿ ಅವರ ಜೀವನ ತತ್ವಾದರ್ಶಗಳನ್ನು ನಾವು ನೀವು ಎಲ್ಲರೂ ಜೀವನದಲ್ಲಿ ಅಳವಡಿಸಿಕೂಂಡು ಹೋಗಬೇಕು ಎಂದು ರಾಜ ವರದನಾಯಕ ಹುಲಿಹೈದರ ಹೇಳಿದರು.
ತಾಲ್ಲೂಕಿನ ಕಲ್ಲಭಾವಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಜಯಂತೋತ್ಸವದ ಪ್ರಯುಕ್ತ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ವಾಲ್ಮೀಕಿ ನಾಯಕ ಸಮಾಜದ ಮೂಲ ಗುರುಗಳಾದ ರಾಜ ವರದನಾಯಕ ಹುಲಿಹೈದರ ಮಾತನಾಡಿ ರಾಮಾಯಣ ಮಹಾಕಾವ್ಯ ರಚಿಸಿದ ದೇಶದ ಮೊದಲ ಕವಿ ವಾಲ್ಮೀಕಿ ಮಹರ್ಷಿಯವರ ವ್ಯಕ್ತಿತ್ವವನ್ನು ಹೆಚ್ಚಿನ ಅಧ್ಯಯನದ ಮೂಲಕ ತಿಳಿದುಕೊಳ್ಳುವುದು, ವಾಲ್ಮೀಕಿ ರವರು ತತ್ವ ಮತ್ತು ಸಿದ್ಧಾಂತಕ್ಕೆ ಬದ್ಧರಾಗಿ ಪ್ರತಿಯೊಬ್ಬರೂ ನಡೆದುಕೊಳ್ಳುವುದು ಮುಖ್ಯವಾಗಿದೆ. ಜಯಂತಿ ಆಚರಣೆಯು ಮಹತ್ವ ಪಡೆದುಕೊಳ್ಳಬೇಕಾದರೆ ವಾಲ್ಮೀಕಿಯವರ ಆಚಾರ ವಿಚಾರಗಳನ್ನು ಮೈಗೂಡಿಸಿಕೊಂಡು ಜೀವನದಲ್ಲಿ ಸುಧಾರಣೆ ತಂದುಕೊAಡರೆ ಮಾತ್ರ ಮಹರ್ಷಿಯವರಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಹಾಗೆಯೇ ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ವಾಲ್ಮೀಕಿ ಸಮಾಜದ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಪ್ರೋತ್ಸಾಹ ಮಾಡಬೇಕಾಗಿದೆ ಎಂದರು.
ಮಹಷಿ೯ ವಾಲ್ಮೀಕಿಯವರ ಭಾವಚಿತ್ರ ಮೆರವಣಿಗೆ ಪ್ರಾರಂಭವಾಗಿ ಗ್ರಾಮದ ಪ್ರಮುಖ ರಾಜ ಬೀದಿಗಳ ಮೂಲಕ ಸಂಚರಿಸಿ ಮೆರವಣಿಗೆಯಲ್ಲಿ ಮಹಿಳೆಯರು ಕುಂಭ ಕಳಸ ಕನ್ನಡಿ. ಸಕಲ ವಾದ್ಯಮೇಳಗಳು ಪಾಲ್ಗೊಂಡಿದವು ಎಲ್ಲರೂ ಹಷ೯ದಿಂದ ಜೈ ವಾಲ್ಮೀಕಿ ಎಂದು ಕುಗುತ್ತಿದರು.
ಸಾನ್ನಿಧ್ಯ ವಹಿಸಿದ್ದ ವಿರೂಪಾಕ್ಷಯ್ಯ ಹಿರೇಮಠ ಮಾತನಾಡಿ, ಮಹಾ ಕಾವ್ಯವನ್ನು ರಚಿಸಿದ ವಾಲ್ಮೀಕಿಯವರು ಮಹಾಕವಿಯಾಗಿದ್ದು ಒಂದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ವಿಶ್ವಕ್ಕೆ ರಾಮರಾಜ್ಯ ಪರಿಚಯಿಸಿದ ಕೀರ್ತಿ ವಾಲ್ಮೀಕಿ ಅವರದ್ದು. ಸಮಾಜದ ಒಳಿತಿಗಾಗಿ ಶ್ರಮಿಸಿದ ಮಹನೀಯರ ವಿಚಾರಗಳನ್ನು ತಿಳಿದು ಅವರ ಮಾರ್ಗದಲ್ಲಿ ಮುನ್ನಡೆಯಬೇಕು ಎಂದರು.
ಶಿಕ್ಷಕ ದೇವೇಂದ್ರಪ್ಪ ಜಿರ್ಲಿ ಯಮನೂರಪ್ಪ ಹೊಮ್ಮಿನಾಳ, ರಂಗಣ್ಣ ಸುಬೇದಾರ ಉಪನ್ಯಾಸ ನೀಡಿದರು.
ವಾಲ್ಮೀಕಿ ಸಮಾಜದ ಯುವ ಮುಖಂಡ ಶ್ರೀಕಾಂತಗೌಡ ಮಾಲಿ ಪಾಟೀಲ್ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ವಿರುಪಾಕ್ಷಯ್ಯ ಹಿರೇಮಠ ಅರ್ಚಕ ಹನಮಂತಪ್ಪಜ್ಜ, ಗ್ರಾಮ ಪಂಚಾಯತ ಸದಸ್ಯರುಗಳಾಧ ದೇವಪ್ಪ ವಜ್ರದ, ಮಾರ್ಖಂಡೆಪ್ಪ ಹುಣಶಿಹಾಳ, ಮುಖಂಡರುಗಳಾದ ಜಗದೀಶಪ್ಪ ಸಿದ್ಧಾಪೂರ, ಹನಮಗೌಡ ಕೊರಿ ,ಬಸವರಾಜ ಮುಸಲಾಪೂರ, ದ್ಯಾಮಣ್ಣ ದೇವಲ್, ಮಹಾಂತೇಶ ನಾಯಕ, ದೇವಪ್ಪ ತಿಪ್ಪನಾಳ, ಮರಿಸ್ವಾಮಿ ಕಡೆಮನಿ, ಯಂಕನಗೌಡ ಬುಡಕುಂಟಿ, ಭೀಮಣ್ಣ ತಳವಾರ, ಮಾರುತಿ ಲಕ್ಕಂಪೂರ, ಕನಕಪ್ಪ ಗದ್ದಿ, ಸಂತೋಷ ಗದ್ದಿ ಸೇರಿದಂತೆ ಮತ್ತು ಇತರರು ಭಾಗವಹಿಸಿದ್ದರು.