4

ಮಹಾತ್ಮಗಾಂಧಿ ನರೇಗಾ ಯೋಜನೆ ಗ್ರಾಮೀಣಾಭಿವೃದ್ಧಿಗೆ ದಾರಿದೀಪ : ಶರಣಪ್ಪ ಕೆಳಗಿನಮನಿ

ಕರುನಾಡ ಬೆಳಗು ಸುದ್ದಿ

ಕುಕನೂರು, 21- ತಾಲೂಕಿನ ಇಟಗಿ ಗ್ರಾಮ ಪಂಚಾಯತಿಯಲ್ಲಿ ಶ್ರೀಮತಿ ನಿರ್ಮಲಾ ಮಹೇಶ್ ಹಿರೇಮನಿ ರವರ ಅಧ್ಯಕ್ಷತೆಯಲ್ಲಿ ೨೦೨೫-೨೬ನೇ ಸಾಲಿನ ಕ್ರಿಯಾ ಯೋಜನೆ ತಯಾರಿಕೆ ಗ್ರಾಮ ಸಭೆಯ ಆಯೋಜನೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಸಹಾಯಕ ನಿರ್ದೇಶಕರು ಗ್ರಾಮೀಣ ಉದ್ಯೋಗ ಕುಕನೂರ ಶರಣಪ್ಪ ಕೆಳಗಿನ ಮನಿ ಅವರು ಮಾತನಾಡಿ, ನರೇಗಾ ಯೋಜನೆ ಮೂಲಕ ಗ್ರಾಮೀಣ ಪ್ರದೇಶದಲ್ಲಿ ನೂರಾರು ಕಾಮಗಾರಿಗಳನ್ನು ಅನುಷ್ಠಾನ ಮಾಡುವ ಮೂಲಕ ಗ್ರಾಮೀಣಾಭಿವೃದ್ಧಿ ಕನಸನ್ನು ನನಸಾಗಿಸಬಹುದು.

ಮುಖ್ಯವಾಗಿ ಸಕಲ ಜೀವವರಾಶಿಗಳು ಆಹಾರ ನೀಡುವ ಮಣ್ಣನ್ನು ಸಂರಕ್ಷಣೆ ಮಾಡಲು ಬದು ನಿರ್ಮಾಣ, ಕೃಷಿ ಹೊಂಡ, ನಾಲಾ ಸುಧಾರಣೆ, ಚೆಕ್ ಡ್ಯಾಮ್ ಹೂಳೆತ್ತುವುದು, ಅರಣ್ಣೀಕರಣ ದಲ್ಲಿ ತೋಟಗಾರಿಕೆ, ಅರಣ್ಯ, ರೇಷ್ಮೇ ಸೇರಿದಂತೆ ವಿವಿಧ ಇಲಾಖೆಗಳು ಸಹ ನರೇಗಾ ಯೋಜನೆಯ ಮೂಲಕ ಕಾಮಗಾರಿಗಳನ್ನು ಅನುಷ್ಠಾನ ಮಾಡುತ್ತಿವೆ.

ಕಳೆದ ವರ್ಷದಲ್ಲಿ ಸಾಮೂಹಿಕ ಬದು ನಿರ್ಮಾಣದಂತಹ ಕಾಮಗಾರಿಗಳನ್ನು ಜಲಾಮೃತ ಮಾದರಿಯಲ್ಲಿ ಅನುಷ್ಠಾನ ಮಾಡಿ ತಾಲೂಕಿಲ್ಲಿಯೇ ಮಾದರಿ ಗ್ರಾಮ ಪಂಚಾಯತಿಯಾಗಿದೆ.

ಈ ವರ್ಷವೂ ಸಹ ರೈತರು ನರೇಗಾ ಯೋಜನೆಯಡಿ ಅನುಮೋದಿಸಿರುವ ೨೬೬ ಕಾಮಗಾರಿಗಳಲ್ಲಿ ಯಾವುದಾದರೂ ಕಾಮಗಾರಿಯನ್ನು ಅನುಷ್ಠಾನ ಮಾಡಿಕೊಳ್ಳಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನೋಡಲ್ ಅಧಿಕಾರಿಗಳಾದ ಶ್ರೀಮತಿ ಪ್ರೇಮಾ ರೇಷ್ಮೇ ವಿಸ್ತೀರ್ಣಾಧಿಕಾರಿಗಳು ಯಲಬುರ್ಗಾ, ತೋಟಗಾರಿಗೆ ಅಧಿಕಾರಿಗಳಾದ ನಿತೀಶ್ ಕುಮಾರ, ಕರಷಿ ಅಧಿಕಾರಿಯಾದ ಜೆ.ಡಿ ಕೋಳಜಿ, ವಲಯ ಅರಣ್ಯಾಧಿಕಾರಿ ಚಿದಾನಂದ ಓಲೇಕಾರ, ರೇಷ್ಮೆ ಇಲಾಖೆ ಅಧಿಕಾರಿ ಆರ್.ಬಿ.ಕಮತರ್, ಮಾಜಿ ಅಧ್ಯಕ್ಷ ಗವಿಸಿದ್ದನಗೌಡ ಮುದ್ದಾಬಳ್ಳಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ದೇವಪ್ಪ ಗಾಳೆಪ್ಪ ಹರಿಜನ್, ಶ್ರೀಮತಿ ರೇಣುಕಾ ಉಮೇಶ ಹೋಸ ಉಪ್ಪಾರ, ಶ್ರೀಮತಿ ಲಕ್ಷ್ಮವ್ವ ಚಂದ್ರಪ್ಪ ತಳವಾರ, ಶ್ರೀಮತಿ ಕಲಾವತಿ ಅಂದಪ್ಪ ಕಳ್ಳಿ, ಶ್ರೀಮತಿ ಬಸವರಾಜೇಶ್ವರಿ ಶಾಂತಯ್ಯ ಕಂತಿ, ಸ್ವ-ಸಹಾಯ ಸಂಘದ ಒಕ್ಕೂಟದ ಅಧ್ಯಕ್ಷರಾದ ಪುಷ್ಪಾ ಬಸನಗೌಡ ಮುದ್ದಾಬಳ್ಳಿ, ಹಾಗೂ ವಿವಿಧ ಸಿಬ್ಬಂದಿ ಗಳು, ಗ್ರಾಮಸ್ಥರು ನರೇಗಾ ಕಾಯಕ ಬಂಧುಗಳು, ಕೃಷಿಕರು, ಕೂಲಿಕಾರರು ಇದ್ದರು.

Leave a Reply

Your email address will not be published. Required fields are marked *

error: Content is protected !!