6

ಪ್ರಪಂಚ ಕಂಡ ಅತ್ಯಂತ ಶ್ರೇಷ್ಠ ಆಟಗಾರ ಮೇಜರ್ ಧ್ಯಾನ್ ಚಂದ್

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 29- ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಕೊಪ್ಪಳ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಮೇಜರ್ ಧ್ಯಾನ್ ಚಂದ್ ಅವರ ಭಾವಚಿತ್ರಕ್ಕೆ ಪೂಜೆಸಲ್ಲಿಸುವುದರ ಮೂಲಕ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಂತ ಕಾಲೇಜಿನ ಪ್ರಾಂಶುಪಾಲರಾದ ಡಾ.ಗಣಪತಿ ಕೆ ಲಮಾಣಿ ಇವರು ಮಾತನಾಡುತ್ತಾ ಕಾಲೇಜಿನಲ್ಲಿ ಕ್ರೀಡಾ ವಿಭಾಗವು ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ. ನಮ್ಮ ಕಾಲೇಜಿನ ಹಲವಾರು ವಿದ್ಯಾರ್ಥಿನಿಯರು ವಿಶ್ವವಿದ್ಯಾಲಯವನ್ನು ಹಲವಾರು ಕ್ರೀಡೆಗಳಲ್ಲಿ ಪ್ರತಿನಿಧಿಸಿದ್ದಾರೆ. ವಿದ್ಯಾರ್ಥಿನಿಯರು ಇದರ ಸದುಪಯೋಗವನ್ನು ಪಡೆದುಕೊಂಡು ಕ್ರೀಡೆಯಲ್ಲಿ ಸಾಧನೆ ಮಾಡಬೇಕು. ಪ್ರಚಲಿತ ದಿನಮಾನಗಳಲ್ಲಿ ಕ್ರೀಡೆಯಿಂದಲೂ ತಾವು ತಮ್ಮ ಜೀವನವನ್ನು ಅತ್ಯಂತ ಉನ್ನತ ಮಟ್ಟದಲ್ಲಿ ರೂಪಿಸಿಕೊಳ್ಳಬಹುದು, ಮಹಿಳೆಯರು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಉತ್ತಮ ಆರೋಗ್ಯ ಪಡೆಯಬಹುದು ಎಂದು ಹೇಳಿದರು.

ಸದರಿ ಕಾರ್ಯಕ್ರಮದ ಆಯೋಜಕರು, ದೈಹಿಕ ಶಿಕ್ಷಣ ಹಾಗೂ ಕ್ರೀಡಾ ವಿಭಾಗದ ಮುಖ್ಯಸ್ಥರಾದಂತಹ ಡಾ. ಪ್ರದೀಪ್ ಕುಮಾರ್ ಇವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ “ಪ್ರಪಂಚ ಕಂಡ ಅತ್ಯಂತ ಶ್ರೇಷ್ಠ ಆಟಗಾರ ಹಾಗೂ ದೇಶಪ್ರೇಮಿ ಮೇಜರ್ ಧ್ಯಾನ್ ಚಂದ್” ಇವರು ಉತ್ತರ ಪ್ರದೇಶದ ಪ್ರಯಾಗ್ ನಲ್ಲಿ ಜನಿಸಿದರು.

ತಂದೆ ರಾಮೇಶ್ವರ ಸಿಂಗ್ ತಾಯಿ ಶಾರದಾ ಸಿಂಗ್. ಧ್ಯಾನ್ ಚಂದ್‌ರವರ ಕ್ರೀಡಾ ಸಾಧನೆಯನ್ನು ಮೆಚ್ಚಿ ಭಾರತ ಸರ್ಕಾರವು ಅವರ ಜನ್ಮದಿನವನ್ನು ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನಾಗಿ ಆಚರಿಸುತ್ತಿದೆ. ೧೯೩೬ರ ಬರ್ಲಿನ್ ಒಲಂಪಿಕ್ಸ್ ಕ್ರೀಡೆಯ ಅಂತಿಮ ಪಂದ್ಯದ ನಂತರ ಜರ್ಮನಿಯ ಹಿಟ್ಲರ್ ಅವರು ನಿಮ್ಮ ದೇಶ ನಿನಗೇನು ಕೊಟ್ಟಿದೆ ಎಂದು ಧ್ಯಾನ್ ಚಂದ್‌ರವರಿಗೆ ಕೇಳಿದಾಗ “ದೇಶ ನಮಗೇನು ಕೊಟ್ಟಿದೆ ಅನ್ನೋದು ಮುಖ್ಯವಲ್ಲ ದೇಶಕ್ಕೆ ನಾವೇನು ಕೊಟ್ಟಿದ್ದೇವೆ ಎನ್ನುವುದು ಮುಖ್ಯ” ಎಂದು ಧ್ಯಾನ ಚಂದ್‌ಅವರು ಹೇಳಿದರು ಹಾಗಾಗಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಕ್ರೀಡೆಯನ್ನು ಹಾಗೂ ದೇಶಪ್ರೇಮವನ್ನು ಅಳವಡಿಸಿಕೊಳ್ಳಬೇಕು, ಕ್ರೀಡೆಯು ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ ಕ್ರೀಡೆಯಿಂದ ನಿಮಗೆ ಉಲ್ಲಾಸದ ಮುಖ ಮತ್ತು ಉತ್ಸಾಹದ ಹೃದಯ ದೊರೆಯುತ್ತದೆ ಕ್ರೀಡೆಯಲ್ಲಿ ಸಾಧನೆ ಮಾಡುವುದರಿಂದ ಉನ್ನತ ಸ್ಥಾನಕ್ಕೆ ಬೆಳೆಯಬಹುದು ಎಂದರು.

ಕಾರ್ಯಕ್ರಮದಲ್ಲಿ ಕುಮಾರಿ ಭವ್ಯ ಪ್ರಾರ್ಥಿಸಿದರು. ಡಾ. ಪ್ರದೀಪ್ ಕುಮಾರ್ ಯು ಸ್ವಾಗತಿಸಿ ವಂದಿಸಿದರು ಕನ್ನಡ ವಿಭಾಗದ ಮುಖ್ಯಸ್ಥರಾದಂತ ಡಾ. ಹುಲಿಗೆಮ್ಮ ಬಿ., ಐ ಕ್ಯೂ ಎ ಸಿ ಘಟಕದ ಸಂಚಾಲಕರಾದAತಹ ಡಾ. ಅಶೋಕ್ ಕುಮಾರ್. ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದಂತ ಶ್ರೀಮತಿ ಸುಮಿತ್ರ ಹಾಗೂ ಕಾಲೇಜಿನ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!