
ಕಾಂಗ್ರೆಸ್ ಸರ್ಕಾರದಿಂದ ಎಸ್.ಸಿ/ಎಸ್.ಟಿ ಸಮಾಜಕ್ಕೆ ಅನ್ಯಾಯ : ಮಲ್ಲಿಕಾರ್ಜುನ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 3- ದಲಿತ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಎಂದು ಹೇಳಿಕೊಂಡು ಚುನಾವಣೆ ಎದುರಿಸಿದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಎರಡು ಸಮುದಾಯಗಳನ್ನು ನಿರ್ಲಕ್ಷಿಸುತ್ತಾ ಬಂದಿದೆ, ಈ ಸಮುದಾಯಕ್ಕೆ ಮೀಸಲಿದ್ದ ಹಣವನ್ನು ಅಕ್ರಮವಾಗಿ ಬೇರೆ ಯೋಜನೆಗಳಿಗೆ ಬಳಸಿ ದಲಿತ ಪರ ಸರ್ಕಾರ ಎಂದು ಬೊಗಳೆ ಬಿಡುತ್ತ ದಲಿತರಿಗೆ ಅನ್ಯಾಯ ಮಾಡಿದೆ ಇದನ್ನು ನಿಲ್ಲಿಸಬೇಕೆಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷರಾದ ಬೈಲೂರು ಮಲ್ಲಿಕಾರ್ಜುನ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಅವರು ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿ, ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎಸ್.ಸಿ/ಎಸ್.ಟಿ, ಸಮುದಾಯಗಳಿಗೆ ಸೇರಿದ ಹಣವನ್ನು ದುರುಪಯೋಗ ಪಡಿಸಿಕೊಳ್ಳುತ್ತಾ ಆ ಎರಡು ಸಮಾಜಗಳನ್ನು ವಂಚಿಸುತ್ತ ಬಂದಿದೆ. ಕಳೆದ ಒಂದು ವರ್ಷದಿಂದ ಎಸ್.ಸಿ./ಎಸ್.ಟಿ. ಸಮುದಾಯಗಳ ಅಭಿವೃದ್ಧಿಗಾಗಿ SCSP/TSP ಯೋಜನೆಗೆಂದು ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಸುಮಾರು 25,000 ಕೋಟಿ ರೂಪಾಯಿ ಹಣವನ್ನು ಅನ್ಯ ಕಾರ್ಯಕ್ಕೆ ಬಳಸಿ ದುರುಪಯೋಗ ಪಡಿಸಿಕೊಂಡಿದೆ. ಇದರಿಂದ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸರ್ಕಾರ ಅನ್ಯಾಯ ಮಾಡಿದೆ. ಸರ್ಕಾರಕ್ಕೆ ದಲಿತರ ಪರವಾಗಿ ನಿಜವಾದ ಕಾಳಜಿ ಇದ್ದಲ್ಲಿ ಕೂಡಲೇ ಆ 25000 ಕೋಟಿ ರೂಪಾಯಿ ಹಣವನ್ನು ನಿಗಮಕ್ಕೆ ಮರಳಿ ಪಡೆದುಕೊಳ್ಳಬೇಕು ವಿದ್ಯಾರ್ಥಿ ವೇತನವನ್ನು ಮಂಜೂರು ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಮೂಡಾ ಹಗರಣದಲ್ಲಿ ಪದೇ ಪದೇ ಮುಖ್ಯಮಂತ್ರಿಗಳ ಹೆಸರು ಕೇಳಿ ಬರುತ್ತಿರುವುದರಿಂದ ಅವರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭಾಗಿಯಾಗಿರುವ ಅನುಮಾನವಿದೆ, ಅಷ್ಟೇ ಅಲ್ಲದೆ ಅವರ ಮೇಲೆ ಲೋಕಾಯುಕ್ತ ಪೊಲೀಸರು ಮತ್ತು ಈಡಿ ಅಧಿಕಾರಿಗಳು ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಿದ್ದಾರೆ, ಇದರ ನೈತಿಕ ಹೊಣೆ ಹೊತ್ತು ಮುಖ್ಯ ಮಂತ್ರಿಗಳು
ರಾಜೀನಾಮೆ ನೀಡಬೇಕು, ತನಿಖೆಯನ್ನು ಎದುರಿಸಿ ಭ್ರಷ್ಟಚಾರದಿಂದ ಮುಕ್ತವಾಗಬೇಕು, ಇಲ್ಲವಾದಲ್ಲಿ ತನಿಕ ಅಧಿಕಾರಿಗಳಿಗೆ ಒತ್ತಡ ತಂದು ತನಿಖೆ ದಾರಿ ತಪ್ಪುವ ಸಂಭವವಿದೆ.
ಕಾರಣ ಕೂಡಲೇ ಮುಖ್ಯಮಂತ್ರಿಗಳು ರಾಜೀನಾಮೆಯನ್ನು ನೀಡಬೇಕೆಂದು ಆ ಗ್ರಹಿಸಿದರು. ಈ ಸಂದರ್ಭದಲ್ಲಿ ಸೋಮು ಚಲುವಾದಿ, ಶರಣಪ್ಪ, ನಾಗೇಂದ್ರ, ಲಕ್ಷ್ಮೀದೇವಿ, ಸುಮಲತಾ, ಶ್ರೀದೇವಿ, ಲಕ್ಷ್ಮೀದೇವಿ, ತಿಪ್ಪಣ್ಣ, ಮಲ್ಲಿಕಾರ್ಜುನ, ರಮೇಶ, ಗೋವರ್ಧನ್, ಅಂಬರೀಶ್, ರಾಜು, ವಿರುಪಾಕ್ಷ, ನೂರು, ಕೊಳಗಲ್ ರಾಮಣ್ಣ ಸೇರಿದಂತೆ ಇತರರಿದ್ದರು.