
ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು : ಮಂಜುನಾಥ ಬಂಡಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 01- ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಹಾಗೂ ಸ್ವಚ್ಛ ಪರಿಸರವನ್ನು ನಿರ್ಮಾಣ ಮಾಡುವಕ್ಕೆ ನಾವೆಲ್ಲರು ಸಿದ್ಧರಾಗಬೇಕು ಎಂದು ಕೊಪ್ಪಳ ಕೇಂದ್ರ ಬಸ್ ನಿಲ್ದಾಣದ ಸಹಾಯಕ ಸಂಚಾರ ನೀರಿಕ್ಷಕ ಮಂಜುನಾಥ ಬಂಡಿ ಹೇಳಿದರು.
ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಲಯದ ರಾ.ಸೇ. ಯೋ ಘಟಕದ ಸ್ವಯಂ ಸೇವಕರಿಂದ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮದಡಿಯಲ್ಲಿ ಸ್ವಭಾವ ಸ್ವಚ್ಛತೆ- ಸಂಸ್ಕಾರ ಸಚ್ಛತೆ ಘೋಷ ವಾಕ್ಯದಡಿಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಪರಿಸರ ಸ್ವಚ್ಛವಗಿದ್ದಾಗ ಆರೋಗ್ಯದ ಸಮಸ್ಯಗಳು ಬರುವುದಿಲ್ಲ. ಉತ್ತಮ ಆರೋಗ್ಯವನ್ನು ಕಾಪಾಡಲು ಒಳ್ಳೆಯ ಪರಿಸವನ್ನು ಕಾಪಾಡಿಕೊಳ್ಳಬೇಕು ಸಾರ್ವಜನಿಕ ಸ್ವತ್ತಾಗಿರುವ ಬಸ್ ನಿಲ್ದಾಣ ಇತರ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಸಾರ್ವಜನಿಕರು ಎಲ್ಲೆಂದರಲ್ಲಿ ಉಗುಳುವುದು, ಕಸ ಚೆಲ್ಲುವುದು ಮಾಡಬಾರದು ಇದರಿಂದ ನೈರ್ಮಲ್ಯ ಹೆಚ್ಚಾಗುವುದು. ಸ್ವಚ್ಚತೆಯ ಪರಿಸದ ಕಾಳಜಿ ನಾವೆಲ್ಲರು ವಹಿಸಿಕೊಳ್ಳಬೇಕು ಎಂದು ಹೇಳಿದರು.
ಬಸ್ ನಿಲ್ದಾಣದ ಆವರಣದಲ್ಲಿ ಸ್ವಯಂ ಸೇವಕರು ಶ್ರಮದಾನಗೈದು ಆವರಣವನ್ನು ಸ್ವಚ್ಛಗೂಳಿಸಿದರು.
ಮಹಾವಿದ್ಯಾಲಯದ ರಾ.ಸೇ. ಯೋಜನಾಧಿಕಾರಿ ಡಾ.ನಾಗರಾಜ ದಂಡೋತಿ ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರಮದಾನದಲ್ಲಿ ಪಾಲ್ಗೊಂಡರು. ನಂತರ ಸ್ವಚ್ಛತೆಯ ಜಾಗೃತಿ ಕುರಿತ ರೂಪಕದ ಮೂಲಕ ಸಾರ್ವಜನಿಕರಲ್ಲಿ ಸ್ವಚ್ಛತೆಯ ಅರಿವು ಮೂಡಿಸಿದರು.
ಸ್ವಚ್ಚತೆಯ ಅರಿವು ಮೂಡಿಸುವ ಘೋಷಣೆಯೊಂದಿಗೆ ಮುಖ್ಯ ರಸ್ತೆಯಿಂದ ನಗರದ ಹಳೆ ಸರ್ಕಾರಿ ಆಸ್ಪತ್ರೆಗೆ ತಲುಪಿ ನಂತರ ಹಳೆ ಆಸ್ಪತ್ರೆಯ ಆವರಣವನ್ನು ಸ್ವಯಂ ಸೇವಕರು ಸ್ವಚ್ಛಗೂಳಿಸಿದರು. ಆಸ್ಪತ್ರೆಯ ಕಾರ್ಯಕ್ರಮ ಯೋಜನಾಧಿಕಾರಿ ಶರಣಪ್ಪ, ಇತರ ಸಿಬ್ಬಂದಿ ಹಾಗೂ ಮಹಾವಿದ್ಯಾಲಯದ ಸ್ವಯಂ ಸೇವಕರು ಭಾಗವಹಿಸಿದ್ದರು.