
ಕುಷ್ಟಗಿ ಹಿರಿಯ ಶ್ರೇಣಿ ನ್ಯಾಯಾಲಯಕ್ಕೆ ನ್ಯಾಯಾಧೀಶರಾಗಿ ಮಂಜುನಾಥ ಆರ್ ಅಧಿಕಾರ ಸ್ವೀಕಾರ
ಕುಷ್ಟಗಿ: ಚಿಕ್ಕಮಗಳೂರು ನ್ಯಾಯಾಲಯದಿಂದ ವರ್ಗಾವಣೆ ಹಾಗೂ ಬಡ್ತಿ ಹೊಂದಿ ಕುಷ್ಟಗಿ ಹಿರಿಯ ಶ್ರೇಣಿ ನ್ಯಾಯಾಲಯಕ್ಕೆ ನ್ಯಾಯಾಧಿಶರಾಗಿ ಆ.೧೨ ರಂದು ಗೌರವಾನ್ವಿತ ನ್ಯಾ. ಮಂಜುನಾಥ ಆರ್ ಅಧಿಕಾರ ವಹಿಸಿಕೊಂಡರು.
ಬೆಳಿಗ್ಗೆ 12 ಗಂಟೆಗೆ ವಕೀಲರ ಸಂಘದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಕುಷ್ಟಗಿ ನ್ಯಾಯಾಲಯದ ಪ್ರಧಾನ ಹಾಗೂ ಜೆ ಎಮ್ ಎಫ್ ಸಿ ನ್ಯಾಯಾಧಿಶರಾದ ಮಾಯಪ್ಪ ಎಲ್ ಪೂಜೇರಿ ಹಾಗೂ ಹೆಚ್ಚುವರಿ ಸಿವಿಲ್ ನ್ಯಾಯಾಲಯ ನ್ಯಾಯಧೀಶರಾದ ಮಾಹಾಂತೇಶ ಚೌಳಗಿ ರವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು. ಸ್ಥಳೀಯ ವಕೀಲರ ಸಂಘದ ವಕೀಲರುಗಳಾದ ನಾಗಪ್ಪ ಸೂಡಿ, ಕೃಷ್ಣ ಆಶ್ರಿತ್, ಅಮರೇಗೌಡ ಪಾಟೀಲ್, ಅಯ್ಯಪ್ಪ ಪಲ್ಲೆದ, ಹೋಳಿಯಪ್ಪ ಕುರಿ ಮುಂತಾದ ವಕೀಲರು ಪ್ರಸ್ತಾವಿಕವಾಗಿ ಮಾತನಾಡಿದರು ನ್ಯಾಯಾಧೀಶರಿಗೆ ಸ್ವಾಗತಿಸಿಕೊಂಡರು. ಸಹೋದ್ಯೋಗಿ ವಕೀಲ ಮಿತ್ರರು ಮಹಿಳಾ ವಕೀಲರುಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ವಿಜಯ ಮಹಾಂತೇಶ ಕುಷ್ಟಗಿ ಅಧ್ಯಕ್ಷತೆ ವಹಿಸಿದರು ಹಾಗೂ ಉಪಾಧ್ಯಕ್ಷರು ಶಿವಕುಮಾರ ದೊಡ್ಡಮನಿ ಹಾಗೂ ಜಂಟಿ ಕಾರ್ಯದರ್ಶಿ ಮೈನುದ್ದಿನ ಮುಲ್ಲಾ ಇದ್ದರು.
ಡಿ ಗೋಪಾಲರಾವ ನಿರೂಪಿಸಿದರು ಮತ್ತು ಪಿ ರಮೇಶ ಮ್ಯಾತ್ರಿ ಸ್ವಾಗಸಿದರು, ಆನಂದ ಡೊಳ್ಳಿನ ವಂದನಾರ್ಪಣೆ ಮಾಡಿದರು.