
ಮರಕುಂಬಿ ಗ್ರಾಮ ನಿರವಮೌನ ಗ್ರಾಮಕ್ಕೆ ಸೂತಕದ ಛಾಯೆ
ಕರುನಾಡ ಬೆಳಗು ಸುದ್ದಿ
* ಪ್ರಸನ್ನ ಕುಮಾರ ದೇಸಾಯಿ
ಗಂಗಾವತಿ, 25- ತಾಲೂಕಿನ ಮರಕುಂಬಿ ಗ್ರಾಮದಲ್ಲಿ ಜಾತಿನಿಂದನೆ ಹಲ್ಲೆ ದೌರ್ಜನ್ಯ ಪ್ರಕರಣ ಸಾಬಿತಾಗಿ ನ್ಯಾಯಾಲಯದಲ್ಲಿ 101 ಆರೋಪಿಗಳಿಗೆ ಶಿಕ್ಷೆ ಘೋಷಣೆ ಯಾಗುತ್ತಿದ್ದಂತೆ ಇಡಿ ಗ್ರಾಮವೇ ನಿರವ ಮೌನವಹಿಸಿ ಸೂತಕದ ಛಾಯೇ ಬಿಸಿತಟ್ಟಿದೆ.
2024ರಲ್ಲಿ ನಡೆದ ಪ್ರಕರಣದಿಂದಾಗಿ ಇಡಿಗ್ರಾಮವೇ ಏನಪ್ಪ ಎಂತಹ ಸ್ಥಿತಿ ನಿರ್ಮಾಣವಾಗಿದೆ. ಅಂದು ಅಕ್ಕ ಪಕ್ಕದ ಗ್ರಾಮಸ್ಥರೋಡಗೂಡಿ ಮಠಾಧೀಶರುಗಳ ನೇತೃತ್ವದಲ್ಲಿ ಶಾಂತಿ ಸೌರ್ಹದ ಮೆರೆಯಬಹುದಾಗಿತ್ತು.
2024ರಲ್ಲಿ ಜನಪ್ರತಿನಿಧಿಗಳಾರು ಗ್ರಾಮದತ್ತ ಸುಳಿಯಲಿಲ್ಲಿ. ಇದೆ ಪ್ರಕರಣದಲ್ಲಿ ಓರ್ವವ್ಯಕ್ತಿ ಮೃತಪಟ್ಟ ಸುದ್ದಿ ತಿಳಿಯುತ ಇದ್ದಂತೆಯೇ ಗ್ರಾಮದ ಜನರು ಏನಪ್ಪ ಈ ಪ್ರಕರಣದಲ್ಲಿ ಮೃತಪಟ್ಟನಲ್ಲ ಎಂಬುವ ಪಿಸು ಪಿಸು ಮಾತು ಗ್ರಾಮದಲ್ಲಿ ನಡದಿದೆ.
ಮೃತಪಟ್ಟ ರಾಮಣ್ಣ ಭೋವಿಯವರ ಮನೆ ಮಂದಿಯ ಸಂಬ0ದಿಗಳ ಆಕ್ರಂದನ ಮುಗಿಲು ಮುಟ್ಟಿದೆ. ಭಯದ ವಾತಾವರಣ ಇಡಿ ಗ್ರಾಮದ ಪುರುಷರು ಭಯದಲ್ಲಿ ಬದುಕುವ ಹಾಗೇ ಆಗಿದೆ. ಮರಕುಂಬಿ ಗ್ರಾಮದ ಅಕ್ಕಪಕ್ಕದ ಊರುಗಳು ಸಂಬ0ದಿಗಳ ಮನೆಗಳಿಗೆ ತೆರಳಿದ್ದಾರೆ.
ಪೋಲಿಸ ಸರ್ಪಗಾವಲು-ಮರಕುಂಬಿ ಗ್ರಾಮದಲ್ಲಿ ಪೋಲಿರ ಉಪ ವಿಭಾಗಧಿಕಾರಿಗಳು ಸಮ್ಮುಖದಲ್ಲಿ ೩೦ ಅಧಿಕ ಪೋಲುಸರು,೨ಡಿಆರ್ ವ್ಯಾನ್,ಇರ್ವರು ಪಿಎಸ್.ಐ,ಇರ್ವರು ಎಎಸ್.ಐ ಗ್ರಾಮದಲ್ಲಿ ಮುಕ್ಕಾಂ ಹೂಡಿದ್ದಾರೆ.