
ರಾಜ ರಾಜೇಶ್ವರ ದೇವಿ ಪುರಾಣ ಸಂಪನ್ನ, ಸಮೂಹಿಕ ವಿವಾಹ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 22- ತಾಲೂಕಿನ ಗಡಿ ಗ್ರಾಮದ ಯಡ್ಡೋಣಿ ಗ್ರಾಮದ ಆರಾಧ್ಯ ದೈವ ದೇವತೆ ಶ್ರೀ ರಾಜ ರಾಜೇಶ್ವರ ಜಾತ್ರೆ ನಿಮಿತ್ತ ದೇವಿಯ ಪುರಾಣ ಮಹಾ ಮಂಗಲೋತ್ಸವ ನಡೆಯಿತು.
ಮುಂಜಾನೆ ಗ್ರಾಮದ ಪ್ರಮುಖ ಬೀದಿಗಳ ಮೂಲಕ ದೇವಸ್ಥಾನದಿಂದ ಆರಂಭಗೊAಡ ಮೆರವಣಿಗೆ ಕುಂಭ ಕಳಶ, ರಾಜ ಬೀದಿಗಳ ಮೂಲಕ ಉತ್ಸವ ಜರುಗಿತು. ಸಡಗರ ಸಂಭ್ರಮದಿ0ದ ಅದ್ಧೂರಿಯಾಗಿ ಮೆರವಣಿಗೆ ನಡೆಯಿತು.
ಮಧ್ಯಾಹ್ನ ವೇಳೆ ೭ ನವ ಜೋಡಿಗಳ ದಾಂಪತ್ಯಕ್ಕೆ ಕಾಲಿಟ್ಟರು.
ಗ್ರಾಮದ ಶ್ರೀ ಕೇಶಾವನಂದ ಮಹಾ ಸ್ವಾಮೀಜಿ, ಗ್ರಾಮದ ಹಿರಿಯ ಮರಿಯಪ್ಪ ದಳಪತಿ, ಅಯ್ಯಪ್ಪ ಗುಳೇದ್, ಆದೇಶ ರೊಟ್ಟಿ, ಗವಿಸಿದ್ಧಯ್ಯ ಹಿರೇಮಠ, ಜಗದೀಶ ಹಿರೇಮಠ, ಮಂಜುನಾಥ ಎಲ್.ರೊಟ್ಟಿ, ಮುದುಕಪ್ಪ ದೇವಪ್ಪ ರೊಟ್ಟಿ, ಬಸವರಾಜ ಹುಗ್ಗಿ, ಧೂಳಪ್ಪ ಮೇಟಿ, ಹನಮಗೌಡ ಗೌಡ್ರ, ಮುದುಕಪ್ಪ ವಂದಾಲಿ, ವೀರಭದ್ರಪ್ಪ ಶೆಟ್ರ ಹಾಗೂ ಗ್ರಾಮದ ಮುಖಂಡರು ಇನ್ನಿತರರು ಇದ್ದರು.