8

ಶೈಕ್ಷಣಿಕ ಪ್ರಗತಿಗೆ ಪೂರಕವಾದ ಅನ್ವೇಷಣೆ ಹೆಚ್ಚಾಗಲಿ : ನ್ಯಾ.ಸಂತೋಷ ಹೆಗ್ಡೆ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 29- ಶೈಕ್ಷಣಿಕ ಪ್ರಗತಿಗೆ ಪೂರಕವಾದ ಹೊಸ ಅನ್ವೇಷಣೆಗಳು ಹೆಚ್ಚಾಗಬೇಕು ಎಂದು ಕರ್ನಾಟಕ ನಿವೃತ್ತ ಲೋಕಾಯುಕ್ತರು ಹಾಗೂ ಸುಪ್ರೀಂ ಕೋರ್ಟ್ನ ವಿಶ್ರಾಂತ ನ್ಯಾಯಾಧೀಶರಾದ ಸಂತೋಷ ಹೆಗ್ಡೆ ಅವರು ಹೇಳಿದರು.

ಬಳ್ಳಾರಿ ತಾಲ್ಲೂಕಿನ ಮೋಕಾದ ಭೈರದೇವನಹಳ್ಳಿಯ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಗೆ ಗುರುವಾರ ಭೇಟಿ ನೀಡಿದ ಅವರು, ಶಾಲೆಯಲ್ಲಿ ಚಿಕ್ಕಮಗಳೂರಿನ ಯುವಸ್ಪೂರ್ತಿ ಅಕಾಡೆಮಿ ಮತ್ತು ಬಿ.ಡಿ.ಹಳ್ಳಿ ಮೊರಾರ್ಜಿ ಮಾದರಿ ವಸತಿ ಶಾಲೆ ಇವರ ವತಿಯಿಂದ ವಿದ್ಯಾರ್ಥಿಗಳೊಂದಿಗೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶೈಕ್ಷಣಿಕ ಬೆಳವಣಿಗೆಯಲ್ಲಿ ವಿದ್ಯಾರ್ಥಿಗಳ ಕೊಡುಗೆ ಅಪಾರವಾಗಿದೆ. ಶಾಲೆಯಲ್ಲಿ ಉತ್ತಮ ವಿಜ್ಞಾನ ಪ್ರಯೋಗಾಯಲವಿದ್ದು, ಇದರ ಸದುಪಯೋಗಪಡೆದುಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ಮಕ್ಕಳಿಂದ ವಿಜ್ಞಾನದ ಪ್ರಯೋಗಗಳನ್ನು ಮಂಡಿಸಿ ಚರ್ಚಿಸಿದರು. ಶಾಲೆಯ ವಾತಾವರಣ ಕಂಡು ಹರ್ಷ ವ್ಯಕ್ತಪಡಿಸಿದರು.

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಕಲ್ಪನಾ ಅವರು, ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಗಳಿಗೆ ಏಕೆ ಬೇಗ ಶಿಕ್ಷೆಯಾಗುತ್ತಿಲ್ಲ ಮತ್ತು ತಂತ್ರಜ್ಞಾನ ಮುಂದುವರೆದರೂ ರೈತರಿಗೆ ಮತ್ತು ಸಾಮಾನ್ಯ ಜನರಿಗೆ ಸರಿಯಾಗಿ ಸಮಯಕ್ಕೆ ಏಕೆ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ನಿವೃತ್ತ ನ್ಯಾಯಾಧೀಶರನ್ನು ಪ್ರಶ್ನಿಸಿದರು.

ಇನ್ನೋರ್ವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ವಿದ್ಯಾಶ್ರೀ ಅವರು, ಮೀಸಲಾತಿಯನ್ನು ಸಂವಿಧಾನದಲ್ಲಿ ಕೇವಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮಾತ್ರ ಸೀಮಿತವಾಗಿದೆಯೇ? ಎಂದು ಪ್ರಶ್ನಿಸಿದರು.

ಹೀಗೆ ಹಲವಾರು ವಿದ್ಯಾರ್ಥಿಗಳು ಸುಮಾರು ಪ್ರಶ್ನೆಗಳನ್ನು ಕೇಳಿದರು. ಬಳಿಕ ನಿವೃತ್ತ ನ್ಯಾಯಾಧೀಶರಾದ ಸಂತೋಷ ಹೆಗ್ಡೆ ಅವರು ಮಕ್ಕಳ ಪ್ರಶ್ನೆಗಳನ್ನು ಆಲಿಸುತ್ತಾ ಪ್ರಸ್ತುತ ದಿನಮಾನಗಳಲ್ಲಿರುವ ಪರಿಸ್ಥಿತಿಗಳ ಆಧಾರವಾಗಿಟ್ಟುಕೊಂಡು ಸವಿವರವಾಗಿ ಉತ್ತರಿಸಿದರು.

Leave a Reply

Your email address will not be published. Required fields are marked *

error: Content is protected !!