
ಬೀರಲಿಂಗೇಶ್ವರ ದೇವಸ್ಥಾನ ಹಾಗೂ ಮೂರ್ತಿ ಪ್ರತಿಷ್ಠಾಪನೆ
ಭವ್ಯ ಪರಂಪರೆ ಮುಂದುವರೆಯಿಸುವ ಕಾರ್ಯವಾಗಲಿ : ಸಿದ್ಧರಾಮನಂದಾ ಸ್ವಾಮೀಜಿ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 7- ಬೀರಲಿಂಗೇಶ್ವರ ಸಂಸ್ಕೃತಿ ಆಚಾರ ವಿಚಾರ ಪರಂಪರೆ ಉಳಿಸಿ ಬೆಳೆಸುವ ಮೂಲಕ ಯುವ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಲ ಹಾಲುಮತ ಸಮಾಜದ ಬಾಂಧವರು ಮುಂದಾಗಬೇಕು ಎಂದು ಕಲಬುರಗಿ ವಿಭಾಗದ ತಿಂಥಣಿ ಬ್ರಿಡ್ಜ್ನ ಕನಕ ಪೀಠ ಕಾಗಿನೆಲೆ ಮಹಾ ಸಂಸ್ಥಾನದ ಶ್ರೀ ಸಿದ್ಧರಾಮನಂದಾ ಮಹಾ ಸ್ವಾಮೀಜಿ ಹೇಳಿದರು.
ತಾಲೂಕಿನ ಧಮ್ಮೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಹಾಗೂ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸೋಮವಾರ ಮಾತನಾಡಿದರು.
ಸಮಾಜದ ಬಂಧುಗಳು ಯಾವುದೇ ದುಶ್ಚಟಗಳಿಗೆ ಬಲಿಯಾಗದೇ ಸಂಸಾರದಲ್ಲಿ ಹೊಂದಾಣಿಕೆ ಬದುಕು ನಡೆಸಬೇಕಿದೆ. ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಬೇಕಿದೆ. ಪ್ರತಿಯೊಬ್ಬರೂ ಬೀರಲಿಂಗೇಶ್ವರ ಆದರ್ಶ ಗುಣಗಳನ್ನು ಚಾಚು ತಪ್ಪದೇ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಯಲಬುರ್ಗಾದ ಶ್ರೀಧರ ಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಮಹಾ ಸ್ವಾಮೀಜಿ ಮಾತನಾಡಿ, ಧಾನ ಧರ್ಮದಲ್ಲಿ ಹೆಸರಾದ ಸಮಾಜದ ಬಂಧುಗಳು ಒಗ್ಗೂಡಿ ಕೆಲಸ ಮಾಡಬೇಕು. ಧಾರ್ಮಿಕ ಕಾರ್ಯಕ್ರಮ ನಡೆಸಲು ಹೀಗೆ ಮುಂದುವರೆಯಲಿ. ಸೌಹರ್ದತೆಯಿಂದ ಜೀವನ ನಡೆಸಬೇಕು ಎಂದು ಹೇಳಿದರು.
ಲೇಬಗೇರಿಮಠ ಶ್ರೀದಿವಾಕರ ಮಹಾ ಸ್ವಾಮೀಜಿ, ಬಾದಿನಾಳ-ಹಾಲವರ್ತಿ ಶ್ರೀ ಶಿವಸಿದ್ಧೇಶ್ವರ ಮಹಾಸ್ವಾಮೀಜಿ, ದಮ್ಮೂರಿನ ಶ್ರೀ ಶರಣಯ್ಯ ಗುರುಪಾದಯ್ಯ ಹಿರೇಮಠ, ದಮ್ಮೂರ ಹನುಮಂತಪ್ಪಜ್ಜನವರ ಧರ್ಮರಮಠ, ತಾಲೂಕು ಹಾಲುಮತ ಸಮಾಜದ ಅಧ್ಯಕ್ಷ ವೀರನಗೌಡ ಪಾಟೀಲ್, ತಾಲೂಕು ಯೋಜನಾಧಿಕಾರಿ ಸತೀಶ ಗಾಂವಕರ್, ಪಟ್ಟಣ ಪಂಚಾಯಿತಿ ಸದಸ್ಯ ರೇವಣಪ್ಪ ಹಿರೇಕುರಬರ, ಜಿ.ಪಂ.ಮಾಜಿ ಉಪಾಧ್ಯಕ್ಷ ಶಿವಶಂಕರ ದೇಸಾಯಿ, ತಾಲೂಕು ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಿ.ಎಂ.ಈಶ್ವರಟಮಾಳಗಿ, ಮುಖಂಡ ರಸೂಲ್ ಸಾಬ್, ದುರುಗೇಶ ಎಚ್, ಹನಮಂತಪ್ಪ ಶ್ಯಾನಬೋಗ, ರಮೇಶ ಚಿಕ್ಕಗೌಡ್ರ, ಎಸ್.ಕೆ.ದಾನಕೈ, ಎಚ್.ಎಚ್.ಕುರಿ, ಸಂಗಯ್ಯ ಹಾಗೂ ಇನ್ನಿತರರು ಇದ್ದರು.