IMG-20240727-WA0086(1)

ವೀರಶೈವ ಮಹಾಸಭೆ ಸದಸ್ಯರು ಸಮಾಜದ ಅಭಿವೃದ್ಧಿಗೆ ಸಹಕರಿಸಲಿ : ಹೆಚ್.ಗಿರೇಗೌಡ

ಕರುನಾಡ ಬೆಳಗು ಸುದ್ದಿ

ಗಂಗಾವತಿ, 29- ಅಖಿಲ ಭಾರತ ವೀರಶೈವ ಮಹಾ ಸಭಾದ ಗಂಗಾವತಿ ತಾಲೂಕು ಘಟಕದ ಕಾರ್ಯಕಾರಿ ಮಂಡಳಿ ಸಭೆ ಇಲ್ಲಿನ ಖಾಸಗಿ ಹೋಟೆಲ್ ನಲ್ಲಿ ನಡೆಯಿತು.

ಇತ್ತೀಚೆಗೆ ಅವಿರೋಧವಾಗಿ ಮಹಾ ಸಭಾದ ತಾಲೂಕು ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಎಚ್.ಗಿರೇಗೌಡ ಮತ್ತು ಕಾರ್ಯಕಾರಿ ಮಂಡಳಿ ಸದಸ್ಯರಿಗೆ ಆಯ್ಕೆ ಪತ್ರಗಳನ್ನು ನಿಕಟ ಪೂರ್ವ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ವಿತರಿಸಿದರು.
ನೂತನ ಅಧ್ಯಕ್ಷರನ್ನು ಸನ್ಮಾನಿಸಿ,ಅಧಿಕಾರ ಹಸ್ತಾಂತರ ಮಾಡಿದರು.

ಹೆಚ್.ಗಿರೇಗೌಡ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ ಕ್ಷೇಮಾಭಿವೃದ್ಧಿಗೆ ಸಹಕಾರ ನೀಡುವಂತೆ ನೂತನ ಸದಸ್ಯರನ್ನು ಕೋರಿದರು.ವಾರ್ಡ ಮತ್ತು ಗ್ರಾಮ ಪಂಚಾಯತಿ ಮಟ್ಟದ ಸಮಿತಿಗಳನ್ನು ರಚಿಸಲು ಕಾರ್ಯ ಪ್ರವೃತ್ತರಾಗುವುದಾಗಿ ತಿಳಿಸಿದರು.ಕೇಂದ್ರ ಕಚೇರಿಯಿಂದ ಸೂಚನೆ ಬಂದ ನಂತರ ಇತರ ಪದಾಧಿಕಾರಿಗಳನ್ನು ನೇಮಕ ಮಾಡುವುದಾಗಿ ಹೇಳಿದರು.

ಅಶೋಕಸ್ವಾಮಿ ಹೇರೂರ ಮಾತನಾಡಿ, ಕಳೆದ 5 ವರ್ಷದಲ್ಲಿ ತಾಲೂಕು ಘಟಕದಿಂದ ಮಾಡಲಾದ ಪತ್ರ ವ್ಯವಹಾರ ಹಾಗೂ ಇತರ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ರಾಜ್ಯ ಸಮಿತಿ ಸದಸ್ಯ ಬಸವರಾಜ ಐಗೋಳ ಅವರು ಯುವ ಘಟಕ ಮತ್ತು ಮಹಿಳಾ ಘಟಕ ಅಸ್ತಿತ್ವಕ್ಕೆ ತರುವ ಅಗತ್ಯತೆಯ ಬಗ್ಗೆ ವಿವರಿಸಿದರು.

ನೂತನ ಸದಸ್ಯರಾಗಿ ಆಯ್ಕೆಯಾದ ಮನೋಹರಸ್ವಾಮಿ ಮೂದೇನೂರ ಹಿರೇಮಠ, ಶರಣೆಗೌಡ ಮಾಲಿ ಪಾಟೀಲ್, ಮನೋಹರಗೌಡ ಹೇರೂರ, ಅಮರೇಶಪ್ಪ ಹುಳ್ಕಿಹಾಳ, ಕರಿಬಸಪ್ಪ ಶೀಲವಂತರ ಬೂದಗುಂಪಾ, ಬಸವರಾಜ ಸ್ವಾಮಿ ಎಚ್.ಎಮ್, ವಿಶ್ವನಾಥ ಪಾಟೀಲ್ ಕೇಸರಹಟ್ಟಿ, ಶಾಂತಪ್ಪ ಗಣವಾರಿ, ಕರಿಬಸವಯ್ಯ ಗಡ್ಡಿ ಮಠ, ಡಿ.ಎಮ್.ಅಭಿಷೇಕ್, ಮುಷ್ಟಿ ವಿರುಪಾಕ್ಷಪ್ಪ, ಮಂಜುನಾಥ ಲಿಂಗಪ್ಪ, ಸಿದ್ದಪ್ಪ ನಾಗೂರ, ಸಂಧ್ಯಾ ಪಾರ್ವತಿ, ಮಂಜುಳಾ ಪಾಟೀಲ್, ರೇವತಿ ಪಾಟೀಲ್, ಉಮಾ ಶಿವಾನಂದ ಸ್ವಾಮಿ ಉಪಸ್ತಿತರಿದ್ದರು.

Leave a Reply

Your email address will not be published. Required fields are marked *

error: Content is protected !!