ಅಹಿಂದ ಯುವ ಘಟಕದ ನೂತನ ಬಳ್ಳಾರಿ ಜಿಲ್ಲಾಧ್ಯಕ್ಷರಾಗಿ ಎಂ.ಜಿ ಕನಕ ನೇಮಕ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 2- ಕರ್ನಾಟಕ ಅಹಿಂದ ಜನ ಸಂಘ (ರಿ) ಬಳ್ಳಾರಿ ಜಿಲ್ಲಾಧ್ಯಕ್ಷರಾದ ಗೋನಾಳ್ ಎಂ.ತಿಮ್ಮಪ್ಪ ಅವರು ಭಾನುವಾರ ಅಹಿಂದ ಯುವ ಘಟಕದ ನೂತನ ಬಳ್ಳಾರಿ ಜಿಲ್ಲಾ ಅಧ್ಯಕ್ಷರಾಗಿ ಸಮಾಜ ಸೇವಕರಾದ ಎಂ.ಜಿ ಕನಕ ಅವರನ್ನು ನೇಮಕ ಮಾಡಿದ್ದರು.

ನಂತರ ಜಿಲ್ಲಾಧ್ಯಕ್ಷ ಗೋನಾಳ್ ಎಂ.ತಿಮ್ಮಪ್ಪ ಅವರು ಯುವ ಘಟಕದ ನೂತನ ಜಿಲ್ಲಾಧ್ಯಕ್ಷ ಎಂ.ಜಿ ಕನಕ ಅವರಿಗೆ ಸನ್ಮಾನ ಮಾಡಿ ಶುಭ ಕೋರಿದರು.

ಈ ವೇಳೆ ಮಾತನಾಡಿದ ಎಂ.ಜಿ ಕನಕ ಅವರು ನನ್ನ ಸಮಾಜ ಸೇವೆ ಕಂಡು ನನಗೆ ಅಹಿಂದ ಯುವ ಘಟಕದ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿದ ರಾಜ್ಯಾಧ್ಯಕ್ಷರಾದ ಶ್ರೀ ಅಯ್ಯಪ್ಪನಗೌಡ ಅವರಿಗೆ ಹಾಗೂ ಜಿಲ್ಲಾಧ್ಯಕ್ಷರಾದ ಶ್ರೀ ಗೋನಾಳ್ ಎಂ.ತಿಮ್ಮಪ್ಪ ಅವರಿಗೆ ಹಾಗೂ ಅಹಿಂದ ಎಲ್ಲಾ ಪದಾಧಿಕಾರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ. ಮತ್ತು ಅಹಿಂದ ಸಂಘದ ಎಲ್ಲಾ ಸದಸ್ಯರನ್ನು ಒಟ್ಟುಗೂಡಿಸಿ, ಸಂಘದ ಬೆಳವಣಿಗೆಗಾಗಿ ದುಡಿಯುತ್ತೇನೆ ಎಂದರು.

ಇAದಿನ ದಿನಗಳಲ್ಲಿ ಬಡವರಿಗೆ ನಾನು ನನ್ನ ಕೈಲಾದಷ್ಟು ಸಹಾಯ ಮಾಡುತ್ತಿದ್ದೆನೆ. ಇದಕ್ಕೆ ಕಾರಣ ಶ್ರೀ ಕನಕ ದುರ್ಗಮ್ಮನ ಆಶಿರ್ವಾದ ಮತ್ತು ನಮ್ಮ ಸ್ನೇಹಿತರ ಪ್ರೋತ್ಸಾಹ ಕಾರಣವಾಗಿದೆ. ಮುಂದಿನ ದಿನಗಳಲ್ಲಿಯೂ ನನ್ನ ಕೈಯಲ್ಲಾದ ಸಹಾಯವನ್ನು ಜನರಿಗೆ ಮಾಡುತ್ತೆನೆ ಎಂದು ನೂತನ ಜಿಲ್ಲಾಧ್ಯಕ್ಷ ಎಂ.ಜಿ ಕನಕ ಅವರು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!