
ರಾಹುಲ್ ಗಾಂಧಿ ಫೇಲ್ಡ್ ಲೀಡರ್ ಅನ್ನೋದು ಮತ್ತೆ ಸಾಬೀತು : ಸಚಿವ ಪ್ರಲ್ಹಾದ ಜೋಶಿ
ಕರುನಾಡ ಬೆಳಗು ಸುದ್ದಿ
ಹುಬ್ಬಳ್ಳಿ, 23- ರಾಹುಲ್ ಗಾಂಧಿ ಕಾಂಗ್ರೆಸ್ ನ ಒಬ್ಬ ಫೇಲ್ಡ್ ಲೀಡರ್ ಎಂಬುದು ಈಗ ಮತ್ತೊಮ್ಮೆ ಸಾಬೀತಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ಮಹಾರಾಷ್ಟ್ರ ಚುನಾವಣೆ ಫಲಿತಾಂಶ ಇದನ್ನು ಮತ್ತೆ ರುಜುವಾತು ಮಾಡಿದೆ ಎಂದರು.
ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಎಂಬ ವಿಮಾನಕ್ಕೆ ಹೊಸ ಹೊಸ ಎಂಜಿನ್ ಹಾಕಿ ಹಾರಿಸಲು ಏನೇನೋ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಅದು ವಿಫಲವಾಗಿ ಕೆಳಗೆ ಬೀಳುತ್ತಲೇ ಇದೆ ಎಂದು ಜೋಶಿ ಟೀಕಿಸಿದರು.
ಕಾಂಗ್ರೆಸ್ ವಿಮಾನ ಲಾಂಚಿಂಗ್ ಮತ್ತೊಮ್ಮೆ ಫೇಲ್ ಆಗಿದೆ. ಸೋನಿಯಾ ಗಾಂಧಿ ಅವರು ಬಹಳ ಪ್ರಯತ್ನ ಪೂರ್ವಕವಾಗಿ ರಾಹುಲ್ ಗಾಂಧಿ ಅವರನ್ನು ಲಾಂಚ್ ಮಾಡುತ್ತಲೇ ಇದ್ದಾರೆ. ಆದರೆ, ಜನತೆ ಅವರನ್ನು ಫೇಲ್ಡ್ ಲೀಡರ್ ಆಗಿ ತಿರಸ್ಕರಿಸುತ್ತಲೇ ಇದ್ದಾರೆ ಎಂದು ಪ್ರಲ್ಹಾದ ಜೋಶಿ ಪ್ರತಿಕ್ರಿಯಿಸಿದರು.