ವಿಜ್ಞಾನ ಶಿಕ್ಷಕ ಯು.ಶ್ರೀನಿವಾಸ್ ಮೂರ್ತಿ ಅವರಿಂದ ಪವಾಡ ಬಯಲು ಕಾರ್ಯಗಾರ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, ೩೦-ಮಾನವನಿಗೆ ಸಮಸ್ಯೆಗಳು ಹೆಚ್ಚಾದಂತೆ ಆಲೋಚನೆ ಜಾಸ್ತಿಯಾಗುತ್ತದೆ ಇಂತಹ ಸಂದರ್ಭದಲ್ಲಿ ಮೆದುಳು ನಿಷ್ಕ್ರಿಯ ಅಥವಾ ನಿಶ್ಚಲವಾಗಿರುತ್ತದೆ ಇದನ್ನೇ ಪವಾಡ ಎಂದು ಅಥವಾ ದೆವ್ವ ದೇವರು ಎಂದು ಮೂಡನಂಬಿಕೆಯಿ0ದ ಜನರನ್ನು ವಂಚನೆಗೊಳಿಸುತ್ತಾರೆ, ಆದರೆ ಇದು ನಿಜವಲ್ಲ ಇದು ಸಾರ್ವಜನಿಕರನ್ನು ಮೌದ್ಯಕ್ಕೆ ದೂಡುವ ಒಂದು ಭಾಗವಾಗಿರುತ್ತದೆ ಎಂದು ವಿಜ್ಞಾನ ಉಪನ್ಯಾಸಕ ಡಾಕ್ಟರ್ ಯು ಶ್ರೀನಿವಾಸ್ ಮೂರ್ತಿ ತಿಳಿಸಿದರು.
ಅವರು ನಗರದ ಬಸವೇಶ್ವರ ನಗರದಲ್ಲಿನ ವುಂಕಿ ಸಣ್ಣ ರುದ್ರಮ್ಮ ಶಾಲೆಯಲ್ಲಿ ಪವಾಡ ಬಯಲ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಅವರು ಕೈಗೆ ಬೆಂಕಿ ಹಚ್ಚಿಕೊಳ್ಳುವುದು ತಲೆಯ ಮೇಲೆ ಕರ್ಪೂರ ಬೆಳಗಿಸುವುದು ಸೇರಿದಂತೆ ವಿವಿಧ ರೀತಿಯ ಪವಾಡಗಳನ್ನು ಮಾಡಿ ತೋರಿಸಿದರು.
ಈ ಕಾರ್ಯಕ್ರಮದಲ್ಲಿ ಡಾ.ರಾಘವೇಂದ್ರ ಪಟೇಲ್, ನಿವೃತ್ತ ಪ್ರಾಂಶುಪಾಲರಾದ ಜಯಶ್ರೀ ಸೇರಿದಂತೆ ಶಾಲೆಯ ಶಿಕ್ಷಕರು ಮತ್ತು ಹಲವಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.