
ಕೊಟ್ಟ ಮಾತು ಈಡೇರಿಸಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ : ಶಾಸಕ ಭರತ್ ರೆಡ್ಡಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ/ಕುಡುತಿನಿ, 7- ಬಡ ಜನರ ದುಡ್ಡು ಬಡ ಜನರಿಗೆ ಕೆಲಸವನ್ನು ಕಾಂಗ್ರೆಸ್ ಮಾಡಿದೆ, ಅಂತಹ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ನಮ್ಮ ಕೈ ಬಲಪಡಿಸಿ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿಯವರು ಹೇಳಿದರು.
ಸಂಡೂರು ಉಪ ಚುನಾವಣೆಯ ಹಿನ್ನೆಲೆ ಕುಡುತಿನಿ ಪಟ್ಟಣದ ಆಂಜನೇಯ ದೇವಸ್ಥಾನ ಕಾಂಗ್ರೆಸ್ ವತಿಯಿಂದ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮಾತು ಕೊಟ್ಟಂತೆ ಐದು ಯೋಜನೆಗಳನ್ನು ಜನರಿಗೆ ತಲುಪಿಸಿದ್ದೇವೆ, ಸರ್ಕಾರದ ಹಣದಲ್ಲಿ ಬಡವರಿಗೆ ಯೋಜನೆ ಮಾಡಬಾರದು ಎಂದು ಹೇಳಿದರು ಆದರೆ ಕಾಂಗ್ರೆಸ್ ಬಡವರ ಪರ ನಿಂತಿದೆ ಎಂದು ಹೇಳಿದರು.
ಐದು ಯೋಜನೆಗಳಿಗೆ ಹಣವನ್ನು ನಾವೇನೂ ನಮ್ಮ ಮನೆಯಿಂದ ತಂದು ಕೊಟ್ಟಿಲ್ಲ, ಜನರ ದುಡ್ಡು ಜನರಿಗೆ ಕೊಟ್ಟಿದ್ದೇವೆ ಎಂದರು.
ಬಡವರ ಪರ ಯೋಜನೆ ಮಾಡಿದ ಜನಪರ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಯಾವುದೋ ಕೆಲಸಕ್ಕೆ ಬಾರದ ಆರೋಪ ಮಾಡಿ, ಮುಡಾ ಹಗರಣ ಹುಟ್ಟು ಹಾಕಿದರು, ಬಿಜೆಪಿಯ ವಿರುದ್ಧ ಮತ ನೀಡುವ ಮೂಲಕ ಸಿಎಂ ಸಿದ್ದರಾಮಯ್ಯ ಅವರ ಪರ ಸಂಡೂರು ಕ್ಷೇತ್ರದ ಜನ ನಿಲ್ಲಬೇಕು ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಮಾಜಿ ಸಚಿವ ನಾಗೇಂದ್ರ ಅಣ್ಣ ಅವರು ಅಮಾಯಕರು, ಬಿಜೆಪಿಯವರು ಷಡ್ಯಂತ್ರ ಮಾಡಿ ಪ್ರಕರಣದಲ್ಲಿ ಸಿಲುಕಿದರು, ಬಿಜೆಪಿಯ ನಾಯಕರು ಇಂದು ಈ ಪ್ರಕರಣದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳಿದ ಅವರು, ಮುಂದೊAದು ದಿನ ನಾಗೇಂದ್ರ ಅವರು ತಮ್ಮ ವಿರುದ್ಧದ ಆರೋಪಗಳಿಂದ ಮುಕ್ತರಾಗಿ ಬರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅನ್ನಪೂರ್ಣ ಅವರಿಗೆ ಮತ ನೀಡಿ, ೫೦ ಸಾವಿರ ಮತಗಳಿಂದ ಗೆಲ್ಲಿಸಬೇಕೆಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಬಹಿರಂಗ ಸಭೆಯಲ್ಲಿ ಹಾಜರಿದ್ದು ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಈ.ಅನ್ನಪೂರ್ಣ ತುಕಾರಾಂ; ಘೋರ್ಪಡೆ ಮನೆತನದ ನಾಯಕರು ಹಾಕಿರುವ ಅಭಿವೃದ್ಧಿಯ ಅಡಿಪಾಯದ ಮೇಲೆ ತುಕಾರಾಂ ಅವರು ಕೆಲಸ ಮಾಡಿದ್ದಾರೆ, ಅದೇ ಪರಂಪರೆಯನ್ನು ನಾನು ಮುಂದುವರೆಸಲಿದ್ದೇನೆ ಎಂದರು.
ಸಚಿವ ಸಂತೋಷ್ ಲಾಡ್ ಹಾಗೂ ತುಕಾರಾಂ ಅವರು ಜೋಡಿ ನಾಯಕರಾಗಿ ಸಂಡೂರಿನ ಅಭಿವೃದ್ಧಿ ಮಾಡಿದ್ದಾರೆ, ಆ ಅಭಿವೃದ್ಧಿಯ ರಥವನ್ನು ಎಳೆಯಲು ನನಗೆ ಅವಕಾಶ ನೀಡಿ ಎಂದರು.
ಇಲ್ಲಿ ನೈಸರ್ಗಿಕ ಸಂಪತ್ತು ಇದೆ, ಇಲ್ಲಿ ಸಾಕಷ್ಟು ಅಕ್ರಮ ನಡೆದರೂ ಸಂತೋಷ ಲಾಡ್ ಹಾಗೂ ತುಕಾರಾಂ ಅವರು ತಮ್ಮ ಮೈಗೆ ಒಂದು ಸಣ್ಣ ಕೊಳೆ ಅಂಟಿಸಿಕೊ0ಡಿಲ್ಲ ಎಂದರು.
ಸ0ಡೂರಿನ ಗಣಿ ಸಂಪತ್ತು ದೇಶದ ಆಸ್ತಿ, ಇದರ ರಕ್ಷಣೆ ಆಗಬೇಕು, ಮುಂದಿನ ಪೀಳಿಗೆಗೆ ಇದನ್ನು ಉಳಿಸಬೇಕಾಗಿದೆ ಎಂದರು.
ಈ ಸಂದರ್ಭ ಕಾಂಗ್ರೆಸ್ಸಿನ ಮುಖಂಡರಾದ ವಿಷ್ಣು ಬೋಯಪಾಟಿ, ಹೊನ್ನಪ್ಪ, ಹಗರಿ ಗೋವಿಂದ, ಬಿಆರೆಲ್ ಸೀನಾ, ಬಳ್ಳಾರಿ ಮಹಾನಗರ ಪಾಲಿಕೆಯ ಸದಸ್ಯರಾದ ಎಂ.ಪ್ರಭ0ಜನಕುಮಾರ್, ನೂರ್ ಮಹಮ್ಮದ್, ರಾಮಾಂಜನೇಯ, ಮಿಂಚು ಸೀನಾ, ಪೇರಂ ವಿವೇಕ್, ಸ್ಥಳೀಯ ಮುಖಂಡರಾದ ಕುಡಿತಿನಿ ರಾಮಾಂಜನೇಯ, ಕನಕಗಿರಿ ಪಂಪಾಪತಿ, ಶೇಖರ್, ದೊಡ್ಡ ಬಸಪ್ಪ, ಯರ್ರಿಸ್ವಾಮಿ, ಚಂದ್ರಪ್ಪ, ರಾಮಲಿಂಗ, ಸತ್ಯಪ್ಪ ಮೊದಲಾದವರು ಹಾಜರಿದ್ದರು.
ಇದಕ್ಕೂ ಮುನ್ನ ಕುಡುತಿನಿ ಪಟ್ಟಣದ ಪಲ್ಲೇದ ಭವನದಲ್ಲಿ ನಡೆದ ಸೇರ್ಪಡೆ ಕಾರ್ಯಕ್ರಮದಲ್ಲಿ ನೂರಾರು ಜನ ಬಿಜೆಪಿಯ ಕಾರ್ಯಕರ್ತರು, ಮುಖಂಡರು ಶಾಸಕ ನಾರಾ ಭರತ್ ರೆಡ್ಡಿಯವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.