WhatsApp Image 2024-08-07 at 3.42.54 PM

ಕ್ರೀಡೆಯಲ್ಲಿ ಸೋಲು ಗೆಲವು ಸಹಜವಾಗಿ ಸ್ವೀಕರಿಸಿ : ಶಾಸಕ ಬಿ.ಎಂ.ನಾಗರಾಜ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 7- ಕ್ರೀಡಾ ಕೂಟದಲ್ಲಿ ಭಾಗವಹಿಸುವುದು ಮುಖ್ಯ ಕ್ರೀಡಾ ಸ್ಪರ್ಧೆಗಳಲ್ಲಿ ಸೋಲು ಗೆಲುವು ಸಹಜ ಭಾಗವಹಿಸುವುದು ಮುಖ್ಯ ಎಂದು ಶಾಸಕ ಬಿ ಎಂ ನಾಗರಾಜ ಅವರು ಹೇಳಿದರು.

ಸಿರುಗುಪ್ಪ ನಗರದ ತಾಲೂಕ ಕ್ರೀಡಾ ಮೈದಾನದಲ್ಲಿ ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಕಾಲೇಜು ಬಳ್ಳಾರಿ ಮತ್ತು ಸಿರುಗುಪ್ಪ ವಿದ್ಯಾಸಂಸ್ಥೆ, ಬಾಲಕಿಯರ ಸಂಯುಕ್ತ ಪದವಿ ಪೂರ್ವ ಕಾಲೇಜು ಇವರ ಸಹಭಾಗಿತ್ವದಲ್ಲಿ ಸಿರುಗುಪ್ಪ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ವನ್ನು ದೀಪ ಬೆಳಗಿಸಿ ಧ್ವಜಾರೋಹಣ ನೆರವೇರಿಸಿ ಚಾಲನೆ ನೀಡಿ ಮಾತನಾಡುತ್ತಾ ಸದೃಢ ಆರೋಗ್ಯಕ್ಕೆ ಕ್ರೀಡೆ ಅಗತ್ಯ ವಿದ್ಯಾಭ್ಯಾಸದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಹೆಚ್ಚಾಗಿ ಭಾಗವಹಿಸುವಂತೆ ಅವರು ಸಲಹೆ ನೀಡಿದರು.

ತಾಲೂಕು ಮಟ್ಟದ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು ಪ್ರಾಚಾರ್ಯರು ಪ್ರಮುಖ ಮುಖಂಡರಾದ ಎಕ್ಸ್ ಲೆಂಟ್ ಪಿಯು ಕಾಲೇಜು ಅಧ್ಯಕ್ಷರು ಶಿಕ್ಷಣ ಪ್ರೇಮಿ ಸಯ್ಯದ್ ಮೋಹಿ ದ್ದೀನ್ ಖಾದ್ರಿ ಎಸ್ ಇ ಎಸ್ ವಿದ್ಯಾಸಂಸ್ಥೆಗಳ ಕಾರ್ಯದರ್ಶಿಗಳಾದ ಅವಿನಾಶ್ ತಾಲೂಕು ದೈಹಿಕ ಪರಿವೀಕ್ಷಕರಾದ ರಮೇಶ್ ಸಾಕ್ಷರತಾ ಅಬ್ದುಲ್ ನಬಿ ದೈಹಿಕ ಶಿಕ್ಷಕ ವೈ ಡಿ ವೆಂಕಟೇಶ್ ಚನ್ನಪ್ಪ ಬಿ ಈರಣ್ಣ ರಮೇಶ ಆಡಳಿತ ಮಂಡಳಿ ಪ್ರಾಚಾರ್ಯರು ಉಪನ್ಯಾಸಕರು ಬೋಧಕೇತರ ಸಿಬ್ಬಂದಿ ವರ್ಗ ಎಸ್ ಇ ಎಸ್ ಬಾಲಕಿಯರ ಸಂಯುಕ್ತ ಪದವಿ ಪೂರ್ವ ಕಾಲೇಜು ಮಕ್ಕಳು ಇದ್ದರು.

ಈ ಸಂದರ್ಭದಲ್ಲಿ ಕ್ರೀಡಾ ಕೂಟದ ಪ್ರತಿಜ್ಞ ವಿಧಿ ಬೋಧಿಸಲಾಯಿತು.

Leave a Reply

Your email address will not be published. Required fields are marked *

error: Content is protected !!