
ವಿಶ್ವದ ಎಲ್ಲಾ ಧರ್ಮದವರು ಭಾರತದಲ್ಲಿ ಬದುಕುವುದಕ್ಕೆ ಇಷ್ಟ : ಶಾಸಕ ಗವಿಯಪ್ಪ
ಕರುನಾಡ ಬೆಳಗು ಸುದ್ದಿ
ವಿಜಯನಗರ, 27- ನಗರದ 27ನೇ ವಾರ್ಡ್, ಚಪ್ಪರದಹಳ್ಳಿಯಲ್ಲಿರುವ ಮದೀನಾ ಜಾಮಿಯ ಮಸ್ಜಿದ್ ಅಅಹ್ಲ ಹದೀಸ್ ವತಿಯಿಂದ ಸಾರ್ವಜನಿಕ ಮಸೀದಿ ಸಂದರ್ಶನ ಕಾರ್ಯಕ್ರಮ ಮಾನವೀಯ ಮನೋಭಾವವನ್ನು ಎತ್ತಿ ಹಿಡಿಯುವ, ಪರಸ್ಪರ ಪ್ರೀತಿ ಮತ್ತು ಸಹೋದರತೆಯ ಸಂದೇಶವನ್ನು ಸಾರುವ ಈ ಕಾರ್ಯಕ್ರಮದಲ್ಲಿ ನಾವೆಲ್ಲರೂ ಭಾಗಿಯಾಗೋಣ ನಮ್ಮವರೊಂದಿಗೆ ಎನ್ನುವ ಘೋಷ ವಾಕ್ಯದೊಂದಿಗೆ ಈ ಕಾರ್ಯಕ್ರಮದಲ್ಲಿ ಜಮಿಅತ್-ಎ-ಅಹ್ಲ-ಹದೀಸ್ ರವರು ಸರ್ವಧರ್ಮೀಯ ಪುರುಷ ಮತ್ತು ಮಹಿಳೆಯರಿಗೂ ಆದರದ ಸ್ವಾಗತವನ್ನು ಕೋರಿದ್ದರು.
ಈ ಕಾರ್ಯಕ್ರಮದಲ್ಲಿ ಶಾಸಕ ಹೆಚ್.ಆರ್.ಗವಿಯಪ್ಪ ಭಾಗಿಯಾಗಿ ಮಾಧ್ಯಮದವರೊಂದಿಗೆ ಮಾತನಾಡಿ, ಎಲ್ಲಾ ಧರ್ಮಗಳಲ್ಲಿ ಪ್ರಾರ್ಥನೆ ಮಾಡುವ ಪದ್ಧತಿಗಳು ಇರುತ್ತವೆ. ಅದರಂತೆ ಮುಸ್ಲಿಂ ಧರ್ಮದಲ್ಲೂ ಸಹ ಗುರುಗಳು ತಿಳಿಸಿಕೊಟ್ಟಿದ್ದಾರೆ ಹಿರಿಯ ಧರ್ಮ ಗುರುಗಳು ಹೇಳಿದಂತೆ ಯುವ ಪೀಳಿಗೆ ನಡೆದುಕೊಂಡು ಹೋಗಬೇಕು ಎಂದರು.
ಜಾತಿ ಸಂಘರ್ಷಗಳನ್ನು ಶಮನ ಮಾಡುವುದಕ್ಕೆ ಮತ್ತು ಇಂದಿನ ವಾತಾವರಣದಲ್ಲಿ ಧರ್ಮಗಳ ಸಂಘರ್ಷದಿ0ದಾಗಿ ಕೋಮು ಭಾವನೆಗಳು ಉಂಟಾಗಿ ಸಮಾಜದಲ್ಲಿ ಅಶಾಂತಿ ಉಂಟಾಗುತ್ತಿರುವುದಕ್ಕೆ ಕಾರಣವಾಗುತ್ತಿವೆ ಇಂತಹ ಕಾರ್ಯಕ್ರಮಗಳು ಎಷ್ಟರಮಟ್ಟಿಗೆ ಅನುಕೂಲವಾಗುತ್ತದೆ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು ವಿಶ್ವದಲ್ಲಿನ ಎಲ್ಲಾ ಧರ್ಮದವರು ಈ ಭಾರತದಲ್ಲಿ ಬದುಕುವುದಕ್ಕೆ ಇಷ್ಟಪಡುತ್ತಾರೆ ಈ ಭೂಮಿಯ ಗುಣವೇ ಅಂತಹದ್ದು ನಮ್ಮ ದೇಶ ಅಷ್ಟು ಪವಿತ್ರವಾಗಿದೆ ಹಾಗಾಗಿ ನಾವು ಮಾಡಿದ ಪ್ರಾರ್ಥನೆ ನೀರವಾಗಿ ದೇವರಿಗೆ ಸಲ್ಲುತ್ತದೆ. ಧರ್ಮವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಅದನ್ನೆಲ್ಲ ನಂಬಬಾರದು ದೇವರು ನಮಗೆ ಕೊಟ್ಟಿರುವ ಶಕ್ತಿಗನಗುಣವಾಗಿ ದುಡಿದು ಬದುಕಬೇಕೆನ್ನುವ ಕಿವಿ ಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಮುಸ್ಲಿಂ ಬಾಂಧವರಿ0ದ ಪ್ರಾರ್ಥನೆ ಸಲ್ಲಿಸುತ್ತಿರುವಾಗ ಭೇಟಿ ನೀಡಿರುವಂತ ಅನ್ಯ ಧರ್ಮಿಯರೂ ಪ್ರಾರ್ಥನೆಯಲ್ಲಿ ಭಾಗವಹಿಸಿ ಪ್ರಾರ್ಥನ ಸಲ್ಲಿಸಬಹುದು ಎಂದು ಮೈಕ್ ಮುಲಕ ಕರೆಕೊಟ್ಟರು.
ಧರ್ಮ ಗುರುಗಳಾದ ಇಸಾಕ್ ಪ್ರಾರ್ಥನೆ ಸಲ್ಲಿಸಿ ದೇವರ ದೃಷ್ಟಿಯಲ್ಲಿ ನಾವೆಲ್ಲರೂ ಸಮಾನರು, ಯಾವುದೇ ಮಸೀದಿಗಳಿಗೆ ಅನ್ಯ ಧರ್ಮದವರು ಹೋಗಬಾರದೆನ್ನುವ ಕಟ್ಟಳೆಗಳಿರುವುದಿಲ್ಲ ಮಸೀದಿಗಳಲ್ಲಿ ಎಲ್ಲ ಧರ್ಮದವರಿಗೂ ಮುಕ್ತ ಅವಕಾಶವಿರುತ್ತದೆ. ನಮ್ಮಂತೆ ಅವರು ಸಹ ದೇವರಲ್ಲಿ ನಂಬಿಕೆ ಇಟ್ಟು ಪ್ರಾರ್ಥನೆಯನ್ನು ಸಲ್ಲಿಸಬಹುದು ಎಂದು ನಮಾಜಿನ ಮಹತ್ವ ತಿಳಿಸಿದರು.
ಈ ನಮ್ಮೂರ ಮಸೀದಿ ನೋಡ ಬನ್ನಿ ಕಾರ್ಯಕ್ರಮದಲ್ಲಿ ಬಹುತೇಕ ಹಿಂದೂ ಧರ್ಮದವರು ಭೇಟಿ ನೀಡಿದ್ದು ಕಂಡು ಬಂದಿತು. ಅವರಿಗೆ ಇಸ್ಲಾಂ ಧರ್ಮದ ಗುರುವಾದ ಮಹಮ್ಮದ್ ಪೈಗಂಬರ್ ಬಗ್ಗೆ, ಖುರಾನ್ ಮತ್ತು ನಮಾಜ್ ಕುರಿತು ತಿಳಿಸಿ, ದೇವರ ದೃಷ್ಟಿಯಲ್ಲಿ ನಾವೆಲ್ಲರೂ ಒಂದೇ, ದೇವರು ನಿರಾಕಾರ ರೂಪಿ ಆತ ಸರ್ವಶಕ್ತನು ಆಗಿದ್ದಾನೆ, ಪ್ರತಿದಿನ ಐದು ಬಾರಿ ನಮಾಜ್ ಮಾಡುವುದರಿಂದ, ದೇವರಿಂದ ಒಳ್ಳೆ ಮಾರ್ಗವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಎನ್ನುವ ಇತರೆ ಮಾಹಿತಿನೀಡಿ ಕನ್ನಡದಲ್ಲಿರುವ ಕುರಾನ್ ಮತ್ತು ಇತರೆ ಪುಸ್ತಕಗಳನ್ನು ಉಚಿತವಾಗಿ ನೀಡಲಾಯಿತು.
ಎಲ್ಲಾ ಧರ್ಮದವರು ಒಂದೇ ರೀತಿ ಇರಬೇಕು ಯಾವುದೇ ರೀತಿಯ ಗಲಾಟೆಗಳು ನಡೆಯಬಾರದೆಂದು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜನೆ ಮಾಡಿದ್ದಾರೆ ತುಂಬಾ ಒಳ್ಳೆಯದು
-ಸದಾನಂದ ಸ್ವಾಮಿ ಸ್ಥಳೀಯರು.