
ವಾಲ್ಮೀಕಿ ಮಹಾನ್ ಕವಿಗಳಲ್ಲಿ ಅಗ್ರಸ್ಥಾನ ಹೊಂದಿದ್ದಾರೆ : ಶಾಸಕ ಗವಿಯಪ್ಪ
ಕರುನಾಡ ಬೆಳಗು ಸುದ್ದಿ
ವಿಜಯನಗರ, 27- ವಾಲ್ಮೀಕಿ ದೇಶದ ಮಹಾನ್ ಕವಿಗಳಲ್ಲಿ ಅಗ್ರಸ್ಥಾನ ಹೊಂದಿದ್ದಾರೆ. ಅವರ ಅಪ್ರತಿಮ ಸಾಧನೆಯ ಫಲವಾಗಿ ಇಂದು ಜಗತ್ತಿನಲ್ಲಿ ರಾಮನನ್ನೂ ರಾಮಾಯಣವನ್ನೂ ನಾವು ನೋಡುತ್ತಿದ್ದೇವೆ. ವಾಲ್ಮೀಕಿ ಜಯಂತಿಯು ದೇಶಾದ್ಯಾಂತ ಆಚರಿಸಲಾಗುತ್ತಿದೆ, ಮತ್ತು ವಾಲ್ಮೀಕಿ ಋಷಿಗಳ ಸಂದೇಶಗಳು ನಮ್ಮೆಲ್ಲರಿಗೂ ಆದರ್ಶವಾಗಲಿ ಎಂದು ಹೇಳಿದರು.
ನಗರದ ಚಿತ್ತವಾಡಗಿಯಲ್ಲಿ ಜರುಗಿದ ವಾಲ್ಮೀಕಿ ಜಯಂತಿ ಮಹೋತ್ಸವದ ಅಂಗವಾಗಿ, ವಿಜಯನಗರ ಕ್ಷೇತ್ರದ ಮಾನ್ಯ ಶಾಸಕ ಹೆಚ್. ಆರ್. ಗವಿಯಪ್ಪ ನವರು ವಾಲ್ಮೀಕಿ ಭಾವಚಿತ್ರದ ಬೆಳ್ಳಿ ರಥಕ್ಕೆ ಚಾಲನೆ ನೀಡುವುದರ ಮೂಲಕ ಹಾಗೂ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ವಾಲ್ಮೀಕಿ ಜಯಂತಿಗೆ ಚಾಲನೆ ನೀಡಿದರು.
ವಾಲ್ಮೀಕಿ ಸಮಾಜದ ಅಧ್ಯಕ್ಷ ಶ್ರೀನಾಥ್ ಗುಜ್ಜೆಲ್, ವಸಂತ ಜಂಬಾನಹಳ್ಳಿ, ಮಂಜುನಾಥ್, ಅಂಜಿನಪ್ಪ, ವಾಲ್ಮೀಕಿ ಸಮಾಜದ ಧರ್ಮದರ್ಶಿ ಜಂಬಯ್ಯ ನಾಯಕ್, ಕೊಟ್ರೇಶ್, ಹನುಮಂತಪ್ಪ ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.