1

ಕೇರಳ ಮಾದರಿಯಲ್ಲಿ ನಮ್ಮ ರಾಜ್ಯ ಸಹ ಶೈಕ್ಷಣಿಕವಾಗಿ ಅಭಿವೃದ್ದಿ ಹೊಂದಬೇಕು : ಶಾಸಕ ಹಿಟ್ನಾಳ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 18- ಅನುದಾನರಹಿತ ಶಾಲಾ ಆಡಳಿತ ಮಂಡಳಿಯವರು ಸರ್ವಪಲ್ಲಿ ರಾಧಾಕೃಷ್ಣನವರ ಜಯಂತ್ಯೋತ್ಸವ ಹಾಗೂ ಶಿಕ್ಷಣ ದಿನಾಚರಣೆ ಜೊತೆಗೆ ಶಿಕ್ಷಕರಿಗೆ ಪ್ರಶಸ್ತಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಂತಸ ಮತ್ತು ಹರ್ಷ ತಂದಿದೆ. ಶಿಕ್ಷಕರಾಗಿ ರಾಷ್ಟ್ರದ ಅತ್ಯುನ್ನತ ಸ್ಥಾನವನ್ನು ಪಡೆದವರು ಸರ್ವಪಲ್ಲಿ ರಾಧಾಕೃಷ್ಣರವರು ಶಿಕ್ಷಕರು ನಮ್ಮ ದೇಶದ ನಿರ್ಮಾಪಕರು ಶಿಕ್ಷಣದಿಂದಲೇ ಎಲ್ಲವೂ ಸಾಧಿಸಲು ಸಾಧ್ಯ ಕೇರಳದ ಶಿಕ್ಷಣ ಎಲ್ಲರಿಗೂ ಮಾದರಿಯಾಗಿದೆ ನಮ್ಮ ರಾಜ್ಯವನ್ನೂ ಸಹ ಆ ಸ್ಥಾನಕ್ಕೆ ಒಯ್ಯುವ ಶಕ್ತಿ ಶಿಕ್ಷಕರಿಗಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.

ನಗರದಲ್ಲಿ ಮಂಗಳವಾರ ಕೊಪ್ಪಳ ತಾಲ್ಲೂಕು ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಕುಸ್ಮಾ) ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ, ಉತ್ತಮ ಶಿಕ್ಷಕರ ಪ್ರಶಸ್ತಿ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಹಳೆ ಮೈಸೂರು ಭಾಗಗಳಿಗೆ ದಕ್ಷಿಣ ಕರ್ನಾಟಕದ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಭಾಗ ಶೈಕ್ಷಣಿಕವಾಗಿ ಹಿಂದುಳಿದಿದೆ. ಸರ್ಕಾರ ಶಾಲೆಗಳಿಗೆ ಸಾಕಷ್ಟು ಸೌಲಭ್ಯಗಳನ್ನು ಒದಗಿಸಿದರೂ ಶೈಕ್ಷಣಿಕ ಪ್ರಗತಿ ಕಂಡುಬರುತ್ತಿಲ್ಲ ಇದು ಬದಲಾಗಬೇಕಿದೆ. ಅನುದಾನರಹಿತ ಶಾಲೆಗಳಿಗೆ ಸವಲತ್ತು ಕೊಡಿಸುವ ಕುರಿತು ಕಲ್ಯಾಣ ಕರ್ನಾಟಕ ಮಂಡಳಿಯಲ್ಲಿ ಚರ್ಚೆಮಾಡಿದ್ದೇವೆ. ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುವಂತಾಗಬೇಕು. ಮಕ್ಕಳಲ್ಲಿಯ ಪ್ರತಿಭೆಗಳನ್ನು ಗುರುತಿಸುವ ಕೆಲಸ ಮಾಡಬೇಕು. ಪಾಲಕರೂ ಸಹ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಣಕ್ಕೆ ಹೆಚ್ಚು ಅನುದಾನ ಕೊಡುವ ಕೆಲಸ ಮಾಡಿದ್ದೇವೆ. ಕೋಚಿಂಗ್ ಸೆಂಟರ್ ಟ್ರೇನಿಂಗ್ ಸೆಂಟರ್ ತೆರೆಯುವ ಕೆಲಸ ಮಾಡಿದ್ದೇವೆ. ನಾನು ಜಿಲ್ಲಾ ಪಂಚಾಯತ್ ಅಧ್ಯಕ್ಷನಾಗಿದ್ದಾಗ ಉತ್ತಮ ಸ್ಥಾನ ಹೊಂದಿತ್ತು. ಆದರೆ ಈಗ ಎಸ್‌ಎಸ್‌ಎಲ್ ಸಿ ಫಲಿತಾಂಶದಲ್ಲಿ ೨೫ರ ಆಸುಪಾಸಿನಲ್ಲಿದೆ. ನಮ್ಮ ಜಿಲ್ಲೆ ಸಹ ರಾಜ್ಯದಲ್ಲಿಯೇ ಪ್ರಥಮ ಸ್ಥಾನಕ್ಕೆ ಬರುವಂತಾಗಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಸಾನಿದ್ಯ ವಹಿಸಿದ್ದ ಶಿರಹಟ್ಟಿ ಬಾಳೆಹೊಸುರ ಭಾವೈಕ್ಯತಾ ಮಹಾಸಂಸ್ಥಾನ ಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿಯವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಶೈಕ್ಷಣಿಕ ಪ್ರಮಾಣ ಅಧಿಕವಾಗಿದ್ದರೂ ಜ್ಞಾನ ಸಂಪಾದನೆ ಮಾತ್ರ ಕಡಿಮೆಯಾಗುತ್ತಿದೆ. ಕಲಿಯುವ ವಯಸ್ಸಿನಲ್ಲಿ ಸರಿಯಾಗಿ ಶಿಕ್ಷಣವನ್ನು ಕಲಿತು ಅವಮಾನ, ಟೀಕೆ ಟಿಪ್ಪಣೆಗಳನ್ನು ಎದುರಿಸಿದರೆ ಬದುಕಿನಲ್ಲಿ ಸನ್ಮಾನಗಳು ಸಿಗಲು ಸಾಧ್ಯ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂದುಕೊAಡವರಿಗೆಯೇ ಕಷ್ಟಗಳು ಬರುತ್ತವೆ. ಬದುಕಿನಲ್ಲಿ ಎಲ್ಲ ಸವಾಲು ಎದುರಿಸುವ ಧೈರ್ಯ ಗಳಿಸಿಕೊಳ್ಳಬೇಕು, ಇದರಿಂದ ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.

ಇನ್ಸೈಟ್ಸ್ ಐಎಎಸ್ ಸಂಸ್ಥಾಪಕರಾದ ವಿನಯಕುಮಾರ ಜಿ.ಬಿ.ಯವರು ವಿಶೇಷ ಉಪನ್ಯಾಸ ನೀಡಿದರು. ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ, ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರಯ್ಯ ಟಿ.ಎಸ್., ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್, ಕುಸ್ಮಾ ಸಂಘಟನೆಯ ಅಧ್ಯಕ್ಷ ಶಾಹೀದಹುಸೇನ ತಹಸೀಲ್ದಾರ್, ಕಾರ್ಯದರ್ಶಿ ನಾಗರಾಜ ಗುಡಿ, , ಪತ್ರಕರ್ತ ಸಿರಾಜ್ ಬಿಸರಳ್ಳಿ, ಮಂಜುನಾಥ ದಿವಟರ್, ಪ್ರವೀಣ ರೋಣದ,ಶಿವಪ್ಪ ಶೆಟ್ಟರ್, ಸುಮನ್ ಎಸ್. ಮಹ್ಮದ್ ಅಲೀಮುದ್ದೀನ್, ಶಿವನಗೌಡ ಪೋಲಿಸ್ ಪಾಟೀಲ್, ರಮೇಶ ಗುಡದಳ್ಳಿ, ಶಿವಾನಂದ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಗಳ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಹಿರಿಯ ಸಾಧಕರಾದ ಬಸವರಾಜ್ ಬಳ್ಳೊಳ್ಳಿ, ಶ್ರೀಮತಿ ಸಂಗೀತಾ ಕಲ್ಲೇಶರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು. ೬೦ ಉತ್ತಮ ಶಿಕ್ಷಕ ಹಾಗೂ ಶಿಕ್ಷಕಿ ಪ್ರಶಸ್ತಿಯನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.

ಎ.ಕೆ.ಮುಲ್ಲಾನವರ ಸ್ವಾಗತ ಕೋರಿದರೆ, ಸುರೇಶ ಕುಂಭಾರ ನಿರೂಪಣೆ ಮಾಡಿದರು. ಎಚ್.ವಿ.ರಾಜಾಭಕ್ಷಿಯವರು ಪ್ರಾಸ್ಥಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ೬೦ ಕ್ಕೂ ಹೆಚ್ಚು ಶಾಲೆಯ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!