1

ಶಿಘ್ರದಲ್ಲಿಯೇ ಸಿಟಿ ಮಾರುಕಟ್ಟೆ ಶಿಪ್ಟ : ಶಾಸಕ ಜನಾರ್ಧನ ರೆಡ್ಡಿ

ಕರುನಾಡ ಬೆಳಗು ಸುದ್ದಿ

ಗಂಗಾವತಿ, 20- ಶಿಘ್ರದಲ್ಲಿಯೇ ಗುಂಡಮ್ಮ ಕ್ಯಾಂಪನಲ್ಲಿ ಸಿಟಿ ಮಾರುಕಟ್ಟೆ ಶಿಪ್ಟ ಮಾಡಲಾಗುವುದು ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದ್ದರಿ ಸಿಟಿ ಮಾರುಕಟ್ಟೆ ಟೆಂಡರ್‌ನಲ್ಲಿ ಆಯ್ಕೆಯಾದವರು ಶಿಪ್ಟ ಆಗಲೇಬೇಕು ಇಲ್ಲದಿದ್ದರೇ ನಡೆಯೋದಿಲ್ಲ ಎಂದು ಶಾಸಕ ಗಾಲಿ ಜನಾರ್ಧನ ರೆಡ್ಡಿ ಹೇಳಿದರು.

ನಗರದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಕೋಟಿಗಟ್ಗಲೇ ಅನುದಾನ ವಿನಿಯೋಗಿಸಿ ಮಾರುಕಟ್ಟೆ ನಿರ್ಮಾನ ಮಾಡಲಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕು. ವ್ಯಾಪಾರ ಮಾಡುವವರಿಗೆ ಮಾತ್ರ ಅವಕಾಶ ಒದಗಿಸಿ ಕೋಡಲಾಗುವುದು ಪೋಲಿಸ ಸಹಕಾರದಿಂದ ಶಿಪ್ಟ ಮಾಡಲಾಗುವುದು. ಎಷ್ಟು ಸಲ ಹರಾಜು ಕರೆಯುತ್ತಿರಿ ಹಿರಿಯ ಸದಸ್ಯ ಶ್ಯಾಮಿದಮನಿಯಾರ ಕೇಳಿದಲ್ಲದೇ ಶಾಸಕ ಜನಾರ್ಧನರೆಡ್ಡಿಯವರ ತೆಗೆದುಕೊಳ್ಳುವ ಅಭಿವೃದ್ದಿ ವಿಚಾರಕ್ಕೆ ನಮ್ಮ ಸಹಮತವಿದೆ ಟೇಂಡರ್ ಭಾಗವಹಿಸಿ ಬಾರದೇ ಇರುವ ಎಲ್ಲರ ಕಟ್ಟಿದ ಹಣವನ್ನು ಮುಟ್ಟುಗೋಲು ಹಾಕಿಕೋಳ್ಳಿ ಎಂದರು.

ಖಾಂಸಿಸಾಬ ಮಾತನಾಡಿ, ಟೆಂಡರ್‌ನಲ್ಲ ಭಾಗವಹಿಸಿದವರ ಹಣ ಹಿಂತಿರುಗಿಸಿ ಎಂದಾಗ ಸಭೆಯಲ್ಲಿ ಎಲ್ಲಾ ಸದಸ್ಯರು ಹಣ ಹಿಂದುರಿಗಿಸಬೇಡಿ ಎಂದು ತಿಳಿಸಿದರು.

ಪೌರಾಯುಕ್ತ ವಿರುಪಾಕ್ಷಮೂರ್ತಿ ಮಾತನಾಡಿ, ಯಾವುದೇ ಕಾರಣಕ್ಕೂ ಗುಂಡಮ್ಮ ಕ್ಯಾಂಪ ಮಾರುಕಟ್ಟೆಯಲ್ಲಿ ಭಾಗವಹಿಸಿ ಹಣ ಕಟ್ಟಿದವರ ಹಣ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದರು.

ವಿರೋಧ ಪಕ್ಷದ ನಾಯಕ ಮನೋಹರಸ್ವಾಮಿ ಮುದೇನೂರ ಮಾತನಾಡಿ, ರೈಸಮಿಲ್‌ನವರಿಂದ ತೆರಿಗೆ ಮಾಹಿತಿ ನೀಡಿ ೧೨ ರೈಸಮಿಲನವರು ತೆರಿಗೆ ಕಟ್ಟಲು ಮುಂದಾಗಿದ್ದಾರೆ ಇನ್ನೂಳಿದ ೬ ರೈಸಮಿಲನವರಿಗೆ ತಿಳಿಹೇಳಿ ಅವರುಗಳಿಂದ ಬರುವ ೧.೫೦ ಕೋಟಿ ತೆರಿಗೆ ಹಣ ಕಟ್ಟಿಸಿಕೊಂಡರೆ ನಗರಸಭೆ ಅಭಿವೃದ್ದಿಗೆ ಬರುತ್ತದೆ ಎಂದರು.

ಪೌರಾಯುಕ್ತ ವಿರುಪಾಕ್ಷಮೂರ್ತಿ ಮಾತನಾಡಿ, ೧೨ ರೈಸಮಿಲ್ ನವರು ತೆರಿಗೆ ಕಟ್ಟಲು ಮುಂದಾಗಿದ್ದಾರೆ. ೬ ರೈಸಮಿಲ್ರ‍್ಸಗೆ ಸಾಕಷ್ಟು ಬಾರಿ ಕರೇದು ತಿಳಿಸಿದರೂ ಒಪ್ಪಲಿಲ್ಲ ಜಪ್ತಿ ನೋಟಿಸ್ ನಿಡಿದ ಕಾರಣ ನ್ಯಾಯಾಲಯದ ಮೋರೆ ಹೋಗಿದ್ದಾರೆ. ನ್ಯಾಯಾಲಯಕ್ಕೆ ದಾಖಲಾತಿ ಒದಗಿಸುತ್ತವೆ ಎಂದರು.

ಸದಸ್ಯರುಗಳದ ವಾಸುದೇವ ನವಲಿ, ಆಬಿದಾ ಬೆಗಂ, ಸುನಿತಾ ಶ್ಯಾವಿ, ಅಜಯ ಬಿಚ್ಚಾಲಿ, ಪರಶುರಾಮ ಮಡ್ಡೇರ, ಜಬ್ಬಾರಗೇಗ, ಸೋಮನಾಥ ಭಂಡಾರಿ, ಶರಬೋಜಿ, ಉಮೇಶ ಸಿಂಘನಾಳ ಮಾತನಾಡಿ ಪೌರಾಯುಕ್ತರಿಗೆ ಶಾಸಕರು ಈ ಹಿಂದೆ ತಿಳಿಸಿದಂತೆ ಗಂಗಾವತಿ ಎರಡು ದಿನಕೊಮ್ಮೆ ಕುಡಿಯುವ ನೀರು ಒದಗಿಸಿ ಸುಖಾ ಸುಮ್ಮನೆ ಮುಂದ ತಳಬೇಡಿ ಎಂದರು.

ಪೌರಾಯುಕ್ತರು ೧೦ ದಿದ ಒಳಗಾಗಿ ವ್ಯವಸ್ಥೇ ಮಾಡುತ್ತನೆ ಮೊದಲಿದ್ದ ವ್ಯವಸ್ಥೇ ಸರಿಪಡಿಸುತ್ತನೆ ಎಂದರು.

ಶಾಸಕ ಗಾಲಿ ಜನಾರ್ಧನರೆಡ್ಡಿ ಮಾತನಾಡಿ, ನಗರದ ೩೫ ವಾರ್ಡುಗಳಿಗೆ ಅಭಿವೃದ್ದಿಗೆ ಸರಿಸಮಾನವಾದ ಅನುದಾನ ನೀಡುತ್ತವೆ ನಮ್ಮಗೆ ನಗರದ ಅಭಿವೃದ್ದಿ ಮುಖ್ಯ ಪಕ್ಷಾತೀತವಾಗಿ ಮಾಡೋಣ ಸರ್ವರೂ ಕೈಜೋಡಿಸಬೇಕು ಮುಂಬರುವ ದಿನದಲ್ಲಿ ಶ್ಯಾಮಿದ ಮನಿಯಾರ ಕಾಂಗ್ರೆಸ್‌Aದ ಎದುರಾಳಿ ಅಭ್ಯರ್ಥಿಯಾಗಬಹದು ಎಂದರು.

ನಗರಸಭೆ ಸದಸ್ಯ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಶ್ಯಾಮಿದ ಮನಿಯಾದ ಮಾತನಾಡಿ ನಾವು ಮುಂಬರುವ ದಿನದಲ್ಲಿ ವಿಧಾನಸಭೆ ಆಕಾಂಕ್ಷಿತ ನಿಜ. ಆದರೆ ಶಾಸಕ ಜನಾರ್ಧನರೆಡ್ಡಿಯವರ ವಿರುದ್ದ ಸ್ಪರ್ಧಿಸಲು ನಮ್ಮಲ್ಲಿ ಹಣದ ಕೊರತೆ ಇದೆ ಮೂರು ಬಾರಿ ನಗರಸಭೆ ಸದಸ್ಯರಾಗಿದ್ದವೆ ಪ್ರಾಮಾಣಿಕರಾಗಿ ಇದ್ದವೆ ನಮ್ಮತಂದೆ ಬಡ ರೈತರುರಾಗಿದ್ದಾರೆ ನಮ್ಮನ್ನು ಚುನಾವಣೆ ಸಮಯದಲ್ಲಿ ಅನೇಕರು ಕರೆದರು ಹೋಗಲಿಲ್ಲ ಪಕ್ಷಕ್ಕೆ ನಿಷ್ಠೆಯಿಂದ ಇದ್ದವೆ ಎಂದರು.

ವಿರೋಧ ಪಕ್ಷದ ನಾಯಕ ಮನೋಹರಸ್ವಾಮಿ ಮುದೇನೂರ ಮಾತನಾಡಿ, ಶಾಸಕೆ ಗಮನಕ್ಕೆ ನಮ್ಮ ನಾಯಕ ಮಾಜಿ ಸಚಿವ ಇಕ್ಬಾಲ ಅನ್ಸಾರಿಯವರು ಈಗಾಗಲೇ ತಿಳಿಸಿದಂತೆ ಅಭಿವೃದ್ದಿ ವಿಷಯದಲ್ಲಿ ಸಹಕಾರ ನೀಡಿ ಇದು ನಮ್ಮ ಗಂಗಾವತಿ ಮುಖ್ಯ ಎಂದು ತಿಳಿಸಿದ್ದಾರೆ ಎಂದರು.

ನಗರಸಭೆ ಅಧ್ಯಕ್ಷ ಮೌಲಾಸಾಬ ಮಾತನಾಡಿ ಶಾಸಕ ಗಾಲಿ ಜನಾರ್ಧನರೆಡ್ಡಿ ನಮ್ಮನ್ನು ಬಿಜೆಪಿವತಿಯಿಂದ ಅಧ್ಯಕ್ಷರನ್ನಾಗಿ ಕೂಡಿಸಿದಲ್ಲದೇ ಎಲ್ಲಾ ವಾರ್ಡುಗಳ ಅಭಿವೃದ್ದಿ ಬಗ್ಗೆ ತಿಳಿಸಿದ್ದಾರೆ. ಸರ್ವ ಸದಸ್ಯರು ಸಹಕಾರ ನಿಡಬೇಕು ಶಾಸಕ ಗಾಲಿ ಜನಾರ್ಧನರೆಡ್ಡಿಯವರಿಗೆ ಅಭಿನಂದನೆ ತಿಳಿಸುತ್ತವೆ ೯ ಜನ ನಮ್ಮ ಸದಸ್ಯರು ಸಲ್ಲಿಸಿದ ಸ್ಥಾಯಿ ಸಮಿತಿ ಸದಸ್ಯರು ಸಲ್ಲಿಸಿದ ಅರ್ಜಿ ಅನುಮೋದನೆ ನೀಡಿದ್ದವೆ ಕಾಂಗ್ರೇಸ ಇಬ್ಬರು ಸದಸ್ಯರ ಅರ್ಜೀ ತಿರಸ್ಕರಿಸಿದ್ದವೆ ಪರಿಶಿಲಿಸುತ್ತವೆ ಎಂದರು.

ಈ ಸಂಧರ್ಭದಲ್ಲಿ ಉಪಾಧ್ಯಕ್ಷೆ ಪಾರ್ವತೆಮ್ಮ ದುರುಗೇಶ ಉಪಸ್ಥಿತರಿದ್ದರು.

ಒಂಭತ್ತು ಜನ ಸದಸ್ಯರು ಸ್ಥಾಯಿ ಸಮಿತಿಗೆ ಆಯ್ಕೆ
ನಗರದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಗರಸಭೆ ಅಧ್ಯಕ್ಷ ಮೌಲಾಸಾಬ ಒಂಭತ್ತು ಜನ ಸದಸ್ಯರನ್ನು ಸ್ಥಾಯಿ ಸಮಿತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ನವಿನಕುಮಾರ, ವಾಸುದೇವ ನವಲಿ, ರಮೇಶ ಚೌಡ್ಕಿ, ಶರಭೋಜಿ, ಸೋಮನಾಥ ಭಂಡಾರಿ, ಮಹಮ್ಮದ ಉಸ್ಮಾನ, ಉಮೇಶ ಸಿಂಘನಾಳ, ಜಯಶ್ರೀ ಸಿದ್ದಾಪೂರ, ಸುಚಿತ್ರಾ ಶಿರಗೇರಿ ಒಂಭತ್ತು ಜನ ಸದಸ್ಯರು ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!