
ಎಲ್ ಕೆಜಿ, ಯುಕೆಜಿ ಅಧಿಕೃತವಾಗಿ ಚಾಲನೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ : ಶಾಸಕ ಬಿ ಎಂ ನಾಗರಾಜ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 8- ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯ ಅಕ್ಷರ ಅವಿಷ್ಕಾರ ಯೋಜನೆ ಅಡಿಯಲ್ಲಿ ಸಿರುಗುಪ್ಪ ತಾಲೂಕಿನ ಎಲ್ ಕೆ ಜಿ ಹಾಗೂ ಯುಕೆಜಿ 32 ಶಾಲೆಗಳು ಹಾಗೂ ಒಂದು ತರಗತಿ 34 ಆಂಗ್ಲ ಮಾಧ್ಯಮ ಶಾಲೆಗಳಿಗೆ ಸಿರುಗುಪ್ಪ ನಗರದ ಏಳು ಮತ್ತು ಎಂಟನೇ ವಿಭಾಗದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯನ್ನು ಪ್ರಾರಂಭಿಸಲು ಅಧಿಕೃತವಾಗಿ ಶಾಸಕ ಬಿ ಎಂ ನಾಗರಾಜ ಚಾಲನೆ ನೀಡಿದರು.
ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಅತ್ಯಾವಶ್ಯವಾಗಿದೆ ಎಲ್ಲರೂ ಶ್ರಮಿಸಬೇಕು ಎಂದು ಅವರು ಕರೆ ಕೊಟ್ಟರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಗುರಪ್ಪ, ಕ್ಷೇತ್ರ ಸಂಪನ್ಮೂಲ ಕೇಂದ್ರ ಶಿಕ್ಷಣ ಸಮನ್ವಯಾಧಿಕಾರಿ ತಮ್ಮನಗೌಡ ಪಾಟೀಲ್, ಬಿ.ಆರ್.ಪಿ.ಗಜೇಂದ್ರ, ವೀರೇಶ್, ವೈ.ಹನುಮನಗೌಡ, ಬಿ.ಈರಣ್ಣ, ಶಿವಲಿಂಗಪ್ಪ, ಶಿಕ್ಷಣ ಇಲಾಖೆಯ ಸಿಬ್ಬಂದಿ ವರ್ಗ, ಶಾಲಾ ಅಭಿವೃದ್ಧಿ ಉಸ್ತುವಾರಿ ಸಮಿತಿ ಅಧ್ಯಕ್ಷರು, ಮುಖ್ಯ ಗುರುಗಳು, ಕಾಂಗ್ರೆಸ್ ಮುಖಂಡರಾದ ಸೈಯದ್ ಮೋಹಿನಿದ್ದೀನ್ ಖಾದ್ರಿ, ನಗರಸಭಾ ಸದಸ್ಯ ಬಿ.ವೆಂಕಟೇಶ್ ಗೊರವರ, ಶ್ರೀನಿವಾಸ್, ರಾಷ್ಟ್ರೀಯ ಸಾಕ್ಷರತಾ ಅಬ್ದುಲ್ ನಬಿ, ಟಿಸಿ ಮೋಹನ್, ಪವನ್ ದೇಸಾಯಿ, ಬಸವರಾಜಯ್ಯ ಸ್ವಾಮಿ, ಶಿಕ್ಷಕ ವೃಂದ, ಶಾಲೆಯ ಮುದ್ದು ಮಕ್ಕಳು ಪಾಲ್ಗೊಂಡಿದ್ದರು.