4

ನಿವೃತ್ತ ಪ್ರಾಂಶುಪಾಲ ಎಂ.ಎನ್ ಜನಾದ್ರಿ ಸೇವೆ ಅನನ್ಯ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 19- ಸುಮಾರು ೩೩ ವರ್ಷ ಸುದೀರ್ಘವಾಗಿ ಸರಕಾರಿ ಸೇವೆ ಸಲ್ಲಿಸುವ ಮೂಲಕ ಉತ್ತಮ ಕಾರ್ಯ ಅಣಿಯಾಗಿ ಇದೀಗ ನಿವೃತ್ತಿ ಜೀವನ ನಡೆಸುತ್ತಿದ್ದು, ಸೇವೆಯಲ್ಲಿ ಒಳ್ಳೆಯ ಕೆಲಸದಿಂದ ಸನ್ಮಾನಿಸಿ ಗೌರವಿಸುವ ಕೆಲಸ ನಿರಂತರ ನಡೆದಿದೆ.

ಇದು ಪಟ್ಟಣದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯ ಎಂ.ಎನ್. ಜನಾದ್ರಿ ಅವರ ಕಾರ್ಯ ಸಾಧನೆ ಮೂಲತಃ ಕುಕನೂರು ತಾಲೂಕಿನ ಮಂಗಳೂರು ಗ್ರಾಮದವರು ೧-೦೬-೧೯೬೪ ಸ್ವಗ್ರಾಮ ಮಂಗಳೂರಿನಲ್ಲಿ ಜನಸಿದರು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಗ್ರಾಮದಲ್ಲಿ ಪಡೆದರು. ೧೯೭೭ರಲ್ಲಿ ೭ನೇ ತರಗತಿ ಜಿಲ್ಲೆಗೆ ಪ್ರಥಮ ಸ್ಥಾನ ಗ್ರಾಮೀಣ ಪ್ರತಿಭಾನ್ವಿತ ವಿದ್ಯಾರ್ಥಿಗಳ ವೇತನ ಪರೀಕ್ಷೆಯಲ್ಲಿ ಮೊದಲು ರ‍್ಯಾಂಕ್ ಗಿಟ್ಟಿಸಿಕೊಂಡರು. ನಂತರ ಕೊಪ್ಪಳ ನಗರದ ಶ್ರೀ ಗವಿಸಿದ್ದೇಶ್ವರ ಮಹಾ ವಿದ್ಯಾಲಯದಲ್ಲಿ ಪಿಯುಸಿ ಹಾಗೂ ಪದವಿ ಶಿಕ್ಷಣವನ್ನು ಪೂರೈಯಿಸಿದರು. ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಹೆಗ್ಗಳಿಕೆ ಪಾತ್ರರಾದರು.

ಪದವಿ ಶಿಕ್ಷಣ ಪಡೆಯುವ ಬಾಲ್ ಬ್ಯಾಟ್ ಮಿಂಟನ್‌ನಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯ ವಿಜೇತರಾಗಿ (ಯುನಿರ್ವಸಿಟಿ ವಿನ್ನರ್) ತಂಡದ ಉಪ ನಾಯಕನಾಗಿ ಕಾರ್ಯನಿರ್ವಹಿಸಿದ್ದಾರೆ. ಬಿಎಡ್ ಕಾಲೇಜಿನ ಶಿಕ್ಷಣವನ್ನು ಗಂಗಾವತಿ ನಗರದ ಟಿಎಂಇ ಸೊಸೈಟಿಯಲ್ಲಿ ಶೇ.೮೪ ರಷ್ಟು ಫಲಿತಾಂಶ ಪಡೆದು ಉತ್ತೀರ್ಣರಾಗಿದ್ದಾರೆ. ೦೯-೦೯-೧೯೯೨ ರಲ್ಲಿ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಹಿರೋಳಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಪ್ರಥಮ ಭಾರಿಗೆ ಶಿಕ್ಷಕರಾಗಿ ಸೇವೆ ಕಾರ್ಯ ಆರಂಭಿಸಿದರು.

೧೯೯೪ರಲ್ಲಿ ಯಲಬುರ್ಗಾ ಪಟ್ಟಣದ ಬಾಲಕಿಯರ ಸರಕಾರಿ ಪ್ರೌಢ ಶಾಲೆಯಲ್ಲಿ ಸಹ ಶಿಕ್ಷಕ ಹಾಗೂ ಮುಖ್ಯ ಗುರುಗಳಾಗಿ ಕಾರ್ಯ ನಿರ್ವಹಿಸಿದರು. ೨೦೦೭ರಲ್ಲಿ ಉಪನ್ಯಾಸಕರಾಗಿ ಪದೋನ್ನತಿಯಾಗಿ ಹೊಂದಿ, ತಾಲೂಕಿನ ಹಿರೇಮ್ಯಾಗೇರಿ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದರು.

೨೦೨೦-೨೧ರಲ್ಲಿ ಕುಕನೂರು ತಾಲೂಕಿನ ಬಿನ್ನಾಳ ಗ್ರಾಮದ ನೂತನ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದರು. ಅದೇ ಕಾಲೇಜಿನಲ್ಲಿ ಮೊಟ್ಟ ಮೊದಲ ಭಾರಿಗೆ ಕೊಪ್ಪಳ ಜಿಲ್ಲೆಯ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಬಿನ್ನಾಳ ಗ್ರಾಮಸ್ಥರ ಸಹಕಾರ ಮೂಲಕ ಕ್ರೀಡಾಕೂಟ ನಡೆಸಿ ಯಶಸ್ವಿಗೊಂಡರು.

ತದ ನಂತರ ತಾಲೂಕಿನ ಹಿರೇಮ್ಯಾಗೇರಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಮುಂದುವರೆದರು. ೨೦೨೨ರಲ್ಲಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸಿದರು. ಕಾಲೇಜಿನ ಸಮಗ್ರ ಅಭಿವೃದ್ಧಿ ಅವಿರತವಾಗಿ ಶ್ರಮಿಸಿದರು.

ದ್ವಿತೀಯ ಪಿಯುಸಿ ಪರೀಕ್ಷೆ ಕೇಂದ್ರಕ್ಕೆ ಮುಖ್ಯ ಅಧೀಕ್ಷರಾಗಿ ಸೇವೆ ಸಲ್ಲಿಸಿದರು. ಯಲಬುರ್ಗಾ ಪಟ್ಟಣದ ೨೦೨೩-೨೪ನೇ ಸಾಲಿನ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಏರ್ಪಡಿಸಿ ಯಶಸ್ವಿಗೊಂಡರು. ೪೮೪ ದಾಖಲಾತಿ ಹಾಗೂ ಶೇ.೭೯ ಫಲಿತಾಂಶ ಪಡೆದು ಶಿಕ್ಷಣ ಇಲಾಖೆ ಕೀರ್ತಿ ಪತಾಕೆ ಆರಿಸಿದರು. ಚುನಾವಣೆ ಕಾರ್ಯದಲ್ಲಿ ಮಾಸ್ಟರ್ ಟ್ರೆöÊನರ್‌ವರಗೆ ಇಲಾಖೆ ಕೆಲಸ ನಿರ್ವಹಿಸಿದ್ದಾರೆ. ಯೋಗ ಪಟು ಯೋಗ ಗುರುವಾಗಿ ಹಲವಾರು ಯೋಗ ಶಿಬರವನ್ನು ನಡೆಸಿದ್ದಾರೆ.

೫೫೦ ಸನ್ಮಾನ : ಮೇ. ೩೧ ರಂದು ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಿವೃತ್ತಿಗೊಂಡರು. ಈವರಗೆ ರೈತರು, ಶಾಸಕರು, ಸಂಸದರು,ಅಧಿಕಾರಿಗಳು, ಕ್ರೀಡಾಭಿಮಾನಿಗಳು, ಶಿಕ್ಷಣ ಪ್ರೇಮಿಗಳು ಸೇರಿದಂತೆ ಅನೇಕ ಹಳೇ ವಿದ್ಯಾರ್ಥಿಗಳು ಈವರಗೆ ಸುಮಾರು ೫೫೦ ಅಧಿಕಕ್ಕೂ ಸನ್ಮಾನಿಸಿ ಗೌರವಿಸಿದ್ದಾರೆ.

ತಂದೆಯವರ ಸ್ಮರಣೆ : ಅ.೧೦ ರಂದು ತಂದೆಯವರಾದ ನಾರಾಯಣಪ್ಪ ವೆಂಕಪ್ಪ ಜನಾದ್ರಿ ಇವರ ಜನ್ಮಶತಾಬ್ದಿ ಕಾರ್ಯಕ್ರಮ ನಡೆಸುವ ಮೂಲಕ ತಮ್ಮ ನಿವೃತ್ತಿ ಪ್ರೀತಿಯ ಭೋಜನವನ್ನು ನೀಡಿದ್ದಾರೆ. ಅಂದಿನ ದಿನವನ್ನು ನೆನೆಪಿಗೋಸ್ಕರ್ ಬ್ಯಾಗ್ ವಿತರಿಸಿದರು. ಸುಮಾರು ೭೦೦-೮೦೦ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಮೃದ್ಧ ಭಾರತ, ವಿಕಾಸ ಭಾರತದತ್ತಾ ಕೊಂಡಯ್ಯುವ ದಿಸೆಯಲ್ಲಿ ಉತ್ತಮ ಸೇವೆ ನಡೆಸಿ ಶಿಕ್ಷಕ, ಕಾಲೇಜಿನ ಉಪನ್ಯಾಸಕ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ ಜನಾದ್ರಿ ಪ್ರಾಚಾರ್ಯರಿಗೆ ಮುಂಬರುವ ದಿನಗಳಲ್ಲಿ ಉತ್ತಮವಾದ ರಾಜ್ಯ, ರಾಷ್ಟç ಮಟ್ಟದ ಪ್ರಶಸ್ತಿ ಲಭಿಸಿದರೆ ಒಳಿತು ಎನ್ನುವುದು ಶಿಕ್ಷಣ ಪ್ರೇಮಿಗಳ ಅಭಿಮತ.

Leave a Reply

Your email address will not be published. Required fields are marked *

error: Content is protected !!