
ಪೌರ ಕಾರ್ಮಿಕರ ಶ್ರೇಯೋಭಿವೃದ್ದಿ ನಮ್ಮ ಮುಖ್ಯ ಗುರಿ : ಮೌಲಾಸಾಬ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 24- ಪೌರ ಕಾರ್ಮಿಕರ ಶ್ರೇಯೋಭಿವೃದ್ದಿ ಮುಖ್ಯ ಗುರಿ ಎಂದು ನಗರಸಭೆ ಅಧ್ಯಕ್ಷ ಮೌಲಾಸಾಬ ಹೇಳಿದರು.
ನಗರದ ನಗರಸಭೆಯಲ್ಲಿ ಪೌರಕಾರ್ಮಿಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ ನಗರದ ಸ್ವಚ್ಛ ತೆಗೆ ಪೌರ ಕಾರ್ಮಿಕರ ಪರಿಶ್ರಮವಿದೆ. ಇವತ್ತು ದೇಶದಲ್ಲಿ ಸ್ವಚ್ಛತಾ ನಗರಗಳು ಆಗಿವೆ ಎಂದರೆ ಆ ಶ್ರೇಯಸ್ಸು ಪೌರ ಕಾರ್ಮಿಕರಿಗೆ ಸಲ್ಲುತ್ತದೆ. ಶಾಸಕ ಗಾಲಿ ಜನಾರ್ಧನರೆಡ್ಡಿ ತಿಳಿಸಿದಂತೆ ಪೌರ ಕಾರ್ಮಿಕರಿಗೆ ಎಲ್ಲಾ ರೀತಿಯ ಸೌಲಭ್ಯ ಒದಗಿಸಲು ಹೇಳಿದ್ದಾರೆ. ನಗರಸಭೆ ಪೌರಾಯುಕ್ತರು ಪೌರ ಕಾರ್ಮಿಕರ ಸವಲತ್ತುಗಳ ಬಗ್ಗೆ ಒತ್ತು ನಿಡಿದ್ದಾರೆ ಎಂದರು.
ನಗರಸಭೆ ಪೌರಾಯುಕ್ತ ವಿರುಪಾಕ್ಷಮೂರ್ತಿ ಪ್ರಾಸ್ತಾವಿಕ ವಾಗಿ ಮಾತನಾಡಿ ಪೌರಕಾರ್ಮಿಕರು ಅವಿಭಾಜ್ಯ ಅಂಗವಾಗಿದ್ದಾರೆ ಅವರಿಗೆ ಸರಕಾರ ಎಲ್ಲ ಯೋಜನೆಗಳ ಸದುಪಯೋಗ ಮಾಡಿಕೊಳ್ಳ ಲು ತಿಳಿಸಿದ್ದನೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಪಾರ್ವತೆಮ್ಮ ದುರುಗೆಶ, ನಗರಸಭೆ ವ್ಯವಸ್ಥಾಪಕ ಷಣಮುಖಪ್ಪ, ಸಾದಿಕ, ಗಜಾನನ ನಾಯಕ, ಡಾ.ಶಿವಕುಮಾರ ಮಾಲಿಪಾಟೀಲ, ರಮೇಶ ಗಬ್ಬೂರ, ಅಕೌಂಟ್‌ಟೆ0ಟ್ ಮಂಜುನಾಥ,
ನಾಗರಾಜ, ಚೇತನಕುಮಾರ, ಶಂಕರಗೌಡ, ರಗಡಪ್ಪ, ಕಾಂತಮ್ಮ, ರಾಮಣ್ಣ, ಪರಶುರಾಮ, ಗುರುರಾಜ ದಾಸನಾಳ, ಬಸವರಾಜ ಸುಳಿಕೋಡ, ಬುತ್ತಿ ಬಸವರಾಜ, ರಮೇಶ, ದುರುಗಪ್ಪ, ವಾಹಿದ ಮುಂತಾದವರು ಉಪಸ್ಥಿತರಿದ್ದರು.