
ಐವರು ಬಾಲಕಾರ್ಮಿಕರ ಮಕ್ಕಳ ರಕ್ಷಣೆ : ಮೌನೇಶ್
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 29- ನಗರದಲ್ಲಿ ಕಾರ್ಮಿಕ ಇಲಾಖೆಯು ಬಳ್ಳಾರಿ ರಸ್ತೆ ಆದೋನಿ ರಸ್ತೆ ಸಿಂಧನೂರು ರಸ್ತೆ ದೇಶನೂರು ಹಾಗೂ ಸಿರುಗುಪ್ಪ ನಗರದ ಪ್ರಮುಖ ರಸ್ತೆಗಳಲ್ಲಿನ ಸ್ಥಳಗಳಲ್ಲಿರುವ ಇಟ್ಟಂಗಿ ಭಟ್ಟಿ ಗ್ಯಾರೇಜ್ ಪಂಚರ್ ಶಾಪ್ ಕಿರಾಣಿ ಅಂಗಡಿ ಮುಂತಾದ ಉದ್ದಿಮೆಗಳ ಮೇಲೆ ಆಕಸ್ಮಿಕ ದಾಳಿ ನಡೆಸಿ ಐವರು ಬಾಲ ಕಾರ್ಮಿಕ ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಬಳ್ಳಾರಿ ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾಧಿಕಾರಿ ಮೌನೇಶ್ ಅವರು ತಿಳಿಸಿದರು.
ಜಿಲ್ಲಾಧಿಕಾರಿಯವರ ನಿರ್ದೇಶನದ ಮೇರೆಗೆ ಹಾಗೂ PAN-india Rescue and Rehabilitation compaign ಅಂಗವಾಗಿ ವಿವಿಧ ಇಲಾಖೆಗಳ ಜೊತೆಗೂಡಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ೧೯೮೬ರ ಅಡಿ ನೇಮಕವಾದ ನಿರೀಕ್ಷಕರ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಸಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದರು.
ಮಕ್ಕಳನ್ನು ಮುಖ್ಯ ವಾಹಿನಿಗೆ ತರಲು ಶಾಲೆಗಳಿಗೆ ಮರು ದಾಖಲಿಸಲಾಗಿದೆ ಟಾಸ್ಕ್ ಫೋರ್ಸ್ ಸಮಿತಿಯಲ್ಲಿ ಸಿರುಗುಪ್ಪ ಗ್ರೇಡ್-೨ ತಹಸಿಲ್ದಾರ್ ಕುಮಾರಿ ಸತ್ಯಮ್ಮ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಗಜೇಂದ್ರ ಕಾರ್ಮಿಕ ನಿರೀಕ್ಷಕರಾದ ರಮೇಶ್ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೋಹನ್ ಕಾಳಪ್ಪ ಸಿರುಗುಪ್ಪ ನಗರ ಸಭೆ ಮೇಲ್ವಿಚಾರಕ ವೆಂಕಟೇಶ ಸಿರುಗುಪ್ಪ ಗ್ರಾಮ ಲೆಕ್ಕಾಧಿಕಾರಿಗಳಾದ ಪರಮೇಶ್ವರಪ್ಪ ಗಾಳಪ್ಪ ಗೋಳಪ್ಪ ಮಕ್ಕಳ ರಕ್ಷಣಾ ಘಟಕ ಸಿಬ್ಬಂದಿ ಉಮೇಶ್ ಕಾರ್ಮಿಕ ಇಲಾಖೆಯ ಸಿಬ್ಬಂದಿ ಹನುಮಂತಪ್ಪ ಚೈಲ್ಡ್ ಲೈನ್ ಸಿಬ್ಬಂದಿ ಚಂದ್ರಕಳ ಸಾಕ್ಷರತಾ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ ಮತ್ತಿತರರಿದ್ದರು.