
ಸಮಭಾವದಿಂದ ಸರ್ವರಿಗೂ ಸೇವೆ ನೀಡುವುದೆ ಅಂಚೆ ಇಲಾಖೆ : ಸಂಸದ ಹಿಟ್ನಾಳ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 13– ಸಮಭಾವದಿಂದ ಸರ್ವರಿಗೂ ಸೇವೆ ನೀಡುವ ಅಂಚೆ ಇಲಾಖೆ ಸರಕಾರಿ ಖಾಸಗಿ ಬ್ಯಾಂಕ್‌ಗಳ ನಡುವೆಯೂ ಅಸ್ತಿತ್ವ ಉಳಿಸಿಕೊಂಡಿರುವುದು ಜನರಿಗೆ ಇಲಾಖೆ ಮೇಲಿರುವ ನಂಬಿಕೆ ಕಾರಣ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.
ಅವರು ಪ್ತಧಾನ ಅಂಚೆ ಕಚೇರಿಯಲ್ಲಿ ಜರುಗಿದ ರಾಷ್ಟ್ರೀಯ ಅಂಚೆ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಕೊಪ್ಪಳ ವಿಭಾಗೀಯ ಅಂಚೆ ಕಚೇರಿ ಕಟ್ಟಡಕ್ಕೆ ನಗರಸಭೆ, ಡಿಸಿಯವರ ಜೊತೆ ಚರ್ಚಿಸಿ ಜಾಗ ಒದಗಿಸಿ ಕೊಡುವ ನಿಟ್ಟಿನಲ್ಲಿ ಶೀಘ್ರ ಪ್ರಯತ್ನ ನಡೆಸುತ್ತೇನೆ ಎಂದರು.
ವೇದಿಕೆಯಲ್ಲಿ ಕೊಪ್ಪಳ ಅಂಚೆ ವಿಭಾಗದ ಅಧೀಕ್ಷಕರಾದ ಎನ್.ಜಿ.ಬಂಗಿಗೌಡರ್, ಸಹಾಯಕ ಅಂಚೆ ಅಧೀಕ್ಷಕ ಮಹಾಂತೇಶ್ ತೊಗರಿ, ಪೋಸ್ಟ್ ಮಾಸ್ಟರ್ ನಾಗರಾಜ್. ಬಿ, ಉಪಸ್ಥಿತರಿದ್ದರು.
ಜಿ.ಎನ್. ಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಸುಭಾಸ್ ಮೋಟಮ್ಮನವರ ಸ್ವಾಗತಿಸಿದರು, ಉಪ ಅಂಚೆ ಪಾಲಕ ಡಿ.ಎಂ.ದ್ರಾಕ್ಷಿ, ಸಹಾಯಕ ಅಂಚೆ ಪಾಲಕ ಸರ್ವೋತ್ತಮ, ಅಕೌಂಟೆAಟ್ ಅಶೋಕ್ ಟಿ.ರಮೇಶ್ ಪಾಟೀಲ್, ಶ್ರೀ ಕಂಠಯ್ಯ, ರಾಜಬ್ ಅಲಿ, ರಮೇಶ್ ಬಾರ್ಕಿ, ಮುದುಕಪ್ಪ, ಸಕ್ರಪ್ಪ ಹೂಗಾರ್, ದೀಪೇಶ್ ಬನ್ಸಾಲ್ ಹಾಗೂ ಸಿಬ್ಬಂದಿ ಹಾಜರಿದ್ದರು.