6

ಕುಕನೂರು ನವೋದಯ ಶಾಲೆಗೆ ಸಂಸದರ ಭೇಟಿ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 27- ಕುಕುನೂರು ಜವಾಹರ್ ನವೋದಯ ವಿದ್ಯಾಲಯದಲ್ಲಿ ಹಿರಿಯ ವಿದ್ಯಾರ್ಥಿಗಳಿಂದ ಕಿರಿಯರ ಮೇಲೆ ನಡೆದ ಹಲ್ಲೆ ಪ್ರಕರಣದ ಕುರಿತು ಪಾಲಕರು ಸಂಸದ ರಾಜಶೇಖರ ಹಿಟ್ನಾಳ ಅವರಿಗೆ ಮನವಿ ಸಲ್ಲಿಸಿದ್ದರು. ಮನವಿಗೆ ಸ್ಪಂದಿಸಿದ ಸಂಸದರು ವಿದ್ಯಾಲಯಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.

ಈ ವೇಳೆ ಪ್ರಾಚಾರ್ಯರು ಹಾಗೂ ಸಿಬ್ಬಂದಿಯಿಂದ ಮಾಹಿತಿ ಪಡೆದು ಪಾಲಕರೊಂದಿಗೆ ಚರ್ಚಿಸಿದರು. ಘಟನೆಯ ಸಂಪೂರ್ಣ ಮಾಹಿತಿ ಪಡೆದ ಸಂಸದರು ಆಶ್ಚರ್ಯ ವ್ಯಕ್ತಪಡಿಸಿದರು.

ಇಂತಹ ಘಟನೆಗಳು ಹಲವಾರು ಬಾರಿ ನಡೆದರೂ ಅವುಗಳನ್ನು ಮುಚ್ಚಿ ಹಾಕಿದ್ದಾರೆ ಇದಕ್ಕೆಲ್ಲ ಪ್ರಾಚಾರ್ಯರು ಕಾರಣ ಅವರು ಅಮಾನತು ಆಗಬೇಕು ಎಂದು ಪಾಲಕರು ಒತ್ತಾಯಿಸಿದರು.

ಈ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಿ ಇನ್ನು ಮುಂದೆ ಈ ರೀತಿ ನಡೆದರೆ ಸಹಿಸಿಕೊಳ್ಳುವುದಿಲ್ಲ ಎಂದು ಸಂಸದರು ತಾಕೀತು ಮಾಡಿದರು.

ಜಿಲ್ಲಾಧಿಕಾರಿ ಹಾಗೂ ಜವಾಹರ್ ನವೋದಯ ವಿದ್ಯಾಲಯದ ಪ್ರಾದೇಶಿಕ ಕಚೇರಿಗೆ ಮಾತನಾಡಿ ಮುಂದಿನ ಕ್ರಮದ ಬಗ್ಗೆ ಸೂಚಿಸುವೆ ಎಂದು ಪಾಲಕರಿಗೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡ ಭರಮಪ್ಪ ಹಟ್ಟಿ, ಕುಕನೂರು ಪ.ಪಂ. ಸದಸ್ಯ ಗಗನ್ ನೋಟಗಾರ, ಕುಬೇರ್ ಮಜ್ಜಿಗಿ, ಶಿವಾನಂದ್ ಪ್ಯಾಟಿ, ಟಿ.ಎನ್.ಚೌಹಾಣ್, ಗಂಗಾಧರ ಡೊಳ್ಳಿನ್, ರಂಗನಾಥ ಮೇಟಿ, ನಾಗರಾಜ್, ಮಲ್ಲಪ್ಪ ಸೇರಿದಂತೆ ಇತರೆ ಪಾಲಕರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!