ಭಾ.ಜ.ಪ ಸದಸ್ಯತ್ವ ಅಭಿಯಾನ ಸದಸ್ಯರಾಗಲು ಪ್ರೋತ್ಸಾಹಿಸಿ : ಎಂ.ಎಸ್.ಸೋಮಲಿಂಗಪ್ಪ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 29- ವಿಕಸಿತ ಭಾರತ ಕನಸು ಸಾಕಾರಗೊಳ್ಳಲು ರಾಜಕೀಯ ಹಿನ್ನೆಲೆ ಯುವಜನರು ರಾಜಕೀಯಕ್ಕೆ ಪ್ರವೇಶಿಸಬೇಕು ಎಂದು ಮಾಜಿ ಶಾಸಕ ಎಂಎಸ್ ಸೋಮಲಿಂಗಪ್ಪ ಅವರು ಹೇಳಿದರು.

ಸಿರುಗುಪ್ಪ ನಗರದ ಆದೋನಿ ರಸ್ತೆ ಭವಾನಿ ಫಂಕ್ಷನ್ ಹಾಲ್ ನಲ್ಲಿ ಸಿರುಗುಪ್ಪ ತಾಲೂಕು ವಿಧಾನಸಭಾ ಕ್ಷೇತ್ರದ ಬಿಜೆಪಿ ಸದಸ್ಯತ್ವ ಅಭಿಯಾನ 2024 ಸದಸ್ಯರಾಗುವ ವಿಧಾನ ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿ ಅವರು ಮಾತನಾಡುತ್ತಾ ಸಶಕ್ತ ಬಿಜೆಪಿ ವಿಕಸಿತ ಭಾರತ ಸದಸ್ಯತ್ವ ಹೊಂದಿದವರ ಮಾಹಿತಿ ದಾಖಲಿಸುವ ಪ್ರಕ್ರಿಯೆ ಕುರಿತು ಅವರು ಮಾತನಾಡಿ ಸಾಮೂಹಿಕ ಪ್ರಯತ್ನಗಳಿಂದ ಮಾತ್ರ ಇದು ಸಾಧ್ಯವಾಗಲಿದೆ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಜನರು ತೋರಿದ ಉತ್ಸಾಹವನ್ನೇ ಜನರು ಈಗಲೂ ತೋರಬೇಕು ಆಗಷ್ಟೇ ವಿಕಸಿತ ಭಾರತದ ಗುರಿ ತಲುಪಿಸಲು ಸಾಧ್ಯ ಬಿಜೆಪಿ ಸದಸ್ಯತ್ವ ಅಭಿಯಾನ ಯಶಸ್ವಿಗೊಳಿಸಬೇಕು ಯಶಸ್ವಿ ಗೊಳಿಸಬೇಕು ಎಂದು ಅವರು ಕಾರ್ಯಕರ್ತರಲ್ಲಿ ವಿನಂತಿಸಿ ಮನವಿ ಮಾಡಿದರು.

ಬಿಜೆಪಿ ತಾಲೂಕ ಅಧ್ಯಕ್ಷ ಕೆ. ಮಲ್ಲಿಕಾರ್ಜುನ ಸ್ವಾಮಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರಾಧಾ ದರಪ್ಪ ನಾಯಕ ಎಂಎಸ್ ಸಿದ್ದಪ್ಪ ಮಾರೆಪ್ಪ ಮೇಕೆಲಿ ವೀರೇಶ ಮಹಾದೇವ ಚಾಗಿ ಸುಬ್ಬಯ್ಯ ಬೆಳಗಲ್ ಬಸವ ಮತ್ತಿತರ ಬಿಜೆಪಿ ಕಾರ್ಯಕರ್ತರು ಇದ್ದರು.

Leave a Reply

Your email address will not be published. Required fields are marked *

error: Content is protected !!