3

ಸರ್ಕಾರಿ ಕಾಮಗಾರಿ ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿ ಎನ್.ಈರಣ್ಣ ಆಯ್ಕೆ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 4- ನಗರದಲ್ಲಿ ಖಾಸಗಿ ಹೋಟಲ್ ನಡೆದ ಜಿಲ್ಲಾ ಸರ್ಕಾರಿ ಕಾಮಗಾರಿಗಳ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ಆಯ್ಕೆಯ ಕುರಿತಂತೆ ಸಭೆಯನ್ನು ನಡೆಸಿ ಸಂಘದ ಎಲ್ಲರ ಒಮ್ಮತದ ಮೇರೆಗೆ ಅಧ್ಯಕ್ಷರಾಗಿ ಏನ್ ಈರಣ್ಣ ಅವರನ್ನು ಆಯ್ಕೆ ಮಾಡಲಾಯಿತು.

ಆಯ್ಕೆಯಾದ ಸಂಘದ ಪದಾಧಿಕಾರಿಗಳು ಸಂಘದ ಅಧ್ಯಕ್ಷರಾಗಿ ಎನ್.ಈರಣ್ಣ ಗೌರವಾಧ್ಯಕ್ಷರಾಗಿ ಮಟಂ ರ‍್ರಿಸ್ವಾಮಿ, ಉಪಾಧ್ಯಕ್ಷರಾಗಿ ಎ,ಪಂಪಾಪತಿ, ವಿ.ಎಸ್.ಕೃಷ್ಣ, ಎಂ.ಮಾರಪ್ಪ, ಜಂಟಿ ಕಾರ್ಯದರ್ಶಿಗಳಾಗಿ ಎ.ಸಿದ್ದಪ್ಪ ಸಿಂದವಾಳ, ಬಿ.ರಾಮಾಂಜನೆಯಲ್ ಸುಗ್ಗೆನಹಳ್ಳಿ ಕಂಪ್ಲಿ, ಆರ್.ಜಿ.ವೆಂಕಟೇಶ್, ಸಂಘಟನ ಕಾರ್ಯದರ್ಶಿಗಳು ವಿ.ಚಂದ್ರಶೇಖರ್, ಸಲಹಾ ಸಮಿತಿಯ ಅಧ್ಯಕ್ಷರುಗಳಾಗಿ ಆಲದಹಳ್ಳಿ ಬಸವರಾಜ್.ಕೆ.ಕೆ. ಹಾಳ ದುರಗಪ್ಪ, ಆರ್.ವೆಂಕಟೇಶ್, ವಿನಾಯಕ ಜೋಶಿ, ಖಜಾಂಚಿಯಾಗಿ ವೈ.ದುರ್ವಾಸ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ನೂತನವಾಗಿ ಸಂಘಕ್ಕೆ ಆಯ್ಕೆಯಾದ ಈರಣ್ಣ ಮಾತನಾಡಿ, ಜಿಲ್ಲಾ ಸರಕಾರಿ ಕಾಮಗಾರಿ ಗುತ್ತಿಗೆದಾರರ ಸಂಘಕ್ಕೆ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ ಸಂಘದ ಎಲ್ಲಾ ಪದಾಧಿಕಾರಿಗಳಿಗೂ ಹಾಗೂ ಸಂಘದ ಎಲ್ಲಾ ಸದಸ್ಯರಿಗೂ ತುಂಬು ಹೃದಯದ ಧನ್ಯವಾದಗಳು ಸಲ್ಲಿಸುತ್ತಾ ಸಂಘದಲ್ಲಿ ಎಲ್ಲರೂ ಒಟ್ಟಾಗಿ ಕೆಲಸವನ್ನು ಮಾಡುವುದರೊಂದಿಗೆ ಹಾಗೂ ಸಂಘದ ಯಾವುದೇ ಸದಸ್ಯರಿಗೂ ತೊಂದರೆ ಉಂಟಾದಾಗ ಒಟ್ಟಾಗಿ ಕೆಲಸ ಮಾಡೋಣ ಸಂಘದಲ್ಲಿ ಅಣ್ಣ-ತಮ್ಮಂದಿರAತೆ ಬಾಂಧವ್ಯದಿAದ ಕೆಲಸವನ್ನು ಮಾಡೋಣ ಕ್ಲಾಸ ೧ ಕ್ಲಾಸ್ ೨ಹಾಗೂ ಕ್ಲಾಸ ೩ ಕ್ಲಾಸ್ ೪, ಸಂಘದ ಸದಸ್ಯರಿಗೆ ತೊಂದರೆ ಉಂಟಾದಾಗ ಎಲ್ಲರೂ ಒಟ್ಟಾಗಿ ಸಮಸ್ಯೆಯನ್ನು ಬಗೆಹರಿಸೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಘದ ಸದಸ್ಯರು ಪದಾಧಿಕಾರಿಗಳು ಸಿರುಗುಪ್ಪ ತಾಲೂಕು ಅಧ್ಯಕ್ಷರು ನಾಗಭೂಷನರೆಡ್ಡಿ ಈ ಸಂಘದ ಮುಖಂಡರುಗಾಳದ ನಟರಾಜ್ ಗೌಡ, ಸಿದ್ದನಗೌಡ, ಸೋಮನಗೌಡ, ಸಂಗನಕಲ್ ಹನುಮಂತ್ ಮೋಕಾ ಕುಮಾರ್, ರಾಜೇಂದ್ರ ಪ್ರಸಾದ್, ಸಂಗನಕಲ್ ಪೊಂಪ, ಮಹಾನಂದಿ ಕೊಟ್ಟಂರಾಮಣ್ಣ, ಸೋನು, ದೀಪಕ್, ವಿಶ್ವನಾಥ್, ಮಿಂಚೇರಿ ಬಸವರಾಜ್ ಗೌಡ, ಯರ್ರಗುಡಿ ರಾಮಜಿ೦ನಿ ಬಸರಕೋಡು ಗಾದಿಗೋವಿಂದರೆಡ್ಡಿ, ಗೋನಾಳ್ ಮಹೇಶ್, ನಿರಂಜನ್ ಉಪಸ್ಥಿತರಿದ್ದರು.

 

ಗುತ್ತಿಗೆದಾರರ ಸಮಸ್ಯೆಗಳಿಗೆ ಬೆನ್ನೆಲುಬಾಗಿ ಸಂಘದ ಯಾವುದೇ ಸದಸ್ಯರ ಕಷ್ಟಗಳಿಗೆ ಸ್ಪಂದಿಸುವ ಜವಾಬ್ದಾರಿಯನ್ನು ತೆಗೆದುಕೊಂಡು ಸಮಸ್ಯೆಗಳಿಗೆ ಪರಿಹಾರಕ್ಕೆ ಕ್ರಮವನ್ನು ಸಂಘದ ಹಿರಿಯ ಮುಖಂಡರಿ0ದ ಪಡೆದುಕೊಂಡು ತಕ್ಷಣವೇ ಪರಿಹಾರವನ್ನು ಮಾಡುವಂತಹ ಕೆಲಸವನ್ನು ಮಾಡುತ್ತೇನೆ ಗುತ್ತಿಗೆದಾರರು ತಮಗೆ ಯಾವುದೇ ಸಮಸ್ಯೆ ಉಂಟಾದಾಗ ಒಬ್ಬ ಸಹೋದರನಾಗಿ ನಿಮ್ಮಲ್ಲಿ ಕೇಳುವುದೇನೆಂದರೆ ಸಮಸ್ಯೆಗಳನ್ನು ನನ್ನ ಬಳಿ ಹೇಳುವುದರ ಮೂಲಕ ಹಾಗೂ ಸಂಘದ ಒಗ್ಗಟ್ಟಿನೊಂದಿಗೆ ಸಮಸ್ತೆಯ ಪರಿಹಾರಕ್ಕೆ ನಾನೆಂದು ಸಿದ್ದನಿದ್ದೇನೆ.

ಏನ್.ಈರಣ್ಣ

ಸರ್ಕಾರಿ ಕಾಮಗಾರಿ ಗುತ್ತಿಗೆದಾರರ ಸಂಘದ ಅಧ್ಯಕ್ಷರು

Leave a Reply

Your email address will not be published. Required fields are marked *

error: Content is protected !!