
ಸಂಭ್ರಮ ಸಡಗರದ ನಾಗರಪಂಚಮಿ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 8- ಪಟ್ಟಣದಲ್ಲಿ ಮಹಿಳೆಯರು ನಾಗರಪಂಚಮಿ ಹಬ್ಬವನ್ನು ಅತಿ ಹೆಚ್ಚು ಸಂಭ್ರಮದಿಂದ ಹೂಸ ಬಟ್ಟೆಗಳನ್ನು ಧರಿಸಿಕೊಂಡು ಉತ್ಸಾಹದಿಂದ ಆಚರಿಸಿದರು.
ಪಟ್ಟಣದ ವಿವಿಧ ಕಡೆ ದೇವಸ್ಥಾನದ ಆವರಣದಲ್ಲಿ ನಾಗದೇವರ ಮೂರ್ತಿಗೆ ಹಾಲು ಎರೆಯುವ ಮೂಲಕ ನಾಗರಪಂಚಮಿ ಹಬ್ಬವನ್ನು ಮಹಿಳೆಯರು ತಮ್ಮ ಕುಟುಂಬಗಳ ಸಮೇತ ನಾಗರ ಮೂತಿ೯ಗೆ ವಿಶೇಷ ಹಂಗುನೂಲು, ಸಸಿ, ಹೂವು ಮತ್ತು ಕಡ್ಲಿಕಾಳು, ಅಳ್ಳಿಟು ಉಂಡಿ ಹಲವಾರು ಬಗೆಯ ವಿವಿಧ ರೀತಿಯ ಸಿಹಿ ಉಂಡಿ ತಿನ್ನಸುಗಳನ್ನು ಮಾಡಿ ದೇವರಿಗೆ ನೈವ್ಯದೆ ಸಮ೯ಪಸಿ ಭಕ್ತಿಯಿಂದ ಹಾಲು ಏರಿದು ಎಲ್ಲರೂ ಪಾಲು ಎಂದು ಸಂಭ್ರಮಸಿದರು.
ಮಹಿಳೆಯರ ಅಚ್ಚುಮೆಚ್ಚಿನ ಹಬ್ಬ ಮತ್ತು ತವರುಮನೆ ಅಣ್ಣ ತಂಗಿಯರ ಬಾಂಧವ್ಯ ಮೆರಗು ಹೆಚ್ಚಿಸುವ ಹಬ್ಬ ಜೋಕಾಲಿ ಆಡುವದು ತಂದೆ ತಾಯಿಗಳಿಗೆ ಗೌರವ ಸೂಚಿಸುವ ಹಬ್ಬವಾಗಿದೆ ಈ ಸಂದರ್ಭದಲ್ಲಿ ಮಹಿಳೆಯರು ಮತ್ತು ಮಕ್ಕಳು ಭಾಗವಹಿಸಿದ್ದರು.