
ಬರುವ ದಿನದಲ್ಲಿ 2ಎ ಮೀಸಲಾತಿಗಾಗಿ ಬೃಹತ ಹೋರಾಟ : ನಾಗರಾಜ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 21- ಬರುವ ದಿನಗಳಲ್ಲಿ ರಾಜ್ಯ ಸರಕಾರದ ವಿರುದ್ದ ೨ಎ ಮಿಸಲಾತಿಗಾಗಿ ಬೃಹತ ಪ್ರಮಾಣ ಹೋರಾಟ ಕೂಡಲ ಸಂಗಮ ಪೀಠದ ಜಯ ಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ನಡೆಸಲಾಗುವುದು ಎಂದು ವೀರಶೈವ ಲಿಂಗಾಯತ ಪಂಚಮ ಸಾಲಿ ಸಂಘ ತಾಲೂಕ ಅಧ್ಯಕ್ಷ ಶಿವಪ್ಪ ಯಲಬುರ್ಗಿ ವಕೀಲರು,ಪಂಚಸೇನೆ ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ ಬರಗೂರ ಹೇಳಿದರು.
ಅವರು -ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಮುಖ್ಯಮಂತ್ರಿಗಳ ಭರವಸೆ ನಮ್ಮಗೆ ಸಮಾಧಾನ ತಂದಿಲ್ಲ. ಹಿಂದಿನ ಸರಕಾರ ೨ಡಿಯಾದರೂ ಘೋಷಣೆ ಮಾಡಿ ಎಂದು ಹೇಳಿದರು.
ಉಪಚುನಾವಣೆಗಳ ನೀತಿ ಸಂಹಿತೆ ಅಂತಹ ಹೇಳಿದ್ದಾರೆ. ಬೆಳಗಾವಿ ಸುರ್ವಣಸೌಧಕ್ಕೆ ಮುತ್ತಿಗೆ ಹಾಕಲು ತಯಾರಿ ನಡೆಸಿದ್ದವೆ.
ಹೇಳುವ ಕೆಲಸ ಮಾಡುವುದಿಲ್ಲ ಈಬಾರಿ ಹೋರಾಟಕ್ಕೆ ನ್ಯಾಯ ದೋರೆಯುವುದು ಖಚಿತ ಡಿ.೯ರಂದು ಬೆಂಗಳೂರಿನಲ್ಲಿ ೧೦ಸಾವಿರ ಜನ ಪಂಚಮಸಾಲಿ ಸಮಾಜದ ವಕೀಲರುಗಳು ಒಂದಡೆ ಸೇರಿ ಸರಕಾರಕ್ಕೆ ಹೋರಾಟ ಬಿಸಿ ಮುಟ್ಟಿಸುತ್ತವೆ ಎಂದರು.
ಉಪಾಧ್ಯಕ್ಷ ಬಸವರಾಜ ಪಾಟೀಲ, ಪ್ರಧಾನ ಕಾರ್ಯದರ್ಶಿ ಸುಭಾಸಚಂದ್ರ ತಿಪ್ಪಶೇಟ್ಟಿ ವಕೀಲ ಮಾತನಾಡಿ, ಅ.೨೩ ರಂದು ಕಿತ್ತೂರ ರಾಣಿ ಚೆನಮ್ಮ ಜಯಂತಿ ಸರ್ವ ಸಮಾಜದವರೊಡಗೂಡಿ ಅದ್ದೂರಿಯಾಗಿ ಆಚರಿಸಲು ತಿರ್ಮಾನಿಸಿದ್ದವೆ ಸರ್ವರೂರ ಕೈ ಜೋಡಿಸಿ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾದ ಈಶಪ್ಪ ಆರ್, ಮಂಜುನಾಥ ಹೋಸಕೇರಾ, ಮಹೆಶಪ್ಪ, ಸಿ.ಮಂಜುನಾಥ ನಾಗರಾಜ.ಬಿ, ದೆವೆಂದ್ರಗೌಡ ಆಚಾರ ನರಸಾಪೂರ, ಶಿವಸಾಗರ ಮುಂತಾದವರು ಉಪಸ್ಥಿತರಿದ್ದರು.