ಎಲ್ಲರು ಒಟ್ಟಾಗಿ ಭಾವೈಕ್ಯತೆಯಿಂದ ಹಬ್ಬಗಳನ್ನು ಆಚರಿಸಿ : ನಾಗರಾಜ ಕೊಟಗಿ
ಕರುನಾಡ ಬೆಳಗು ಸುದ್ದಿ
ತಾವರಗೇರಾ, 29- ಪಟ್ಟಣದ ವಿವಿಧ ಸಮುದಾಯದ ಎಲ್ಲರು ಒಟ್ಟಾಗಿ ಭಾವೈಕ್ಯತೆಯಿಂದ ಹಬ್ಬಗಳನ್ನು ಆಚರಿಸಬೇಕು, ಸ್ಥಳಿಯ ಪೋಲಿಸ್ ಠಾಣೆಯಲ್ಲಿ ಮಂಗಳವಾರ ಸಂಜೆ ನಡೆದ ಈದ್ ಮಿಲಾದ ಮತ್ತು ಗಣೇಶ ಹಬ್ಬದ ಪ್ರಯುಕ್ತ ನಡೆದ ಶಾಂತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಪಿಎಸ್‌ಐ ನಾಗರಾಜ ಕೊಟಗಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಗಣೇಶ ವಿಸರ್ಜನೆ ಸಮಯದಲ್ಲಿ ಡಿ.ಜಿ ಸೌಂಡ ಬಳಕೆಗೆÀನಿಷೇದಮಾಡಿದೆ ಇನ್ನು ಕೆಲವು ನಿಯಮಗಳು ಬದಲಾವಣೆ ಆದರೆ ತಿಳಿಸುತ್ತೆನೆ, ಯುವ ಪೀಳಿಗೆಯು ಪರಿಸರ ಉಳಿಸುವ ಕಾರ್ಯದಲ್ಲಿ ಚಿಂತನೆ ನಡೆಸಿ ಹೆಚ್ಚನ ಪ್ರಮಾಣದಲ್ಲಿ ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು, ಪ್ಲಸ್ಟರ ಆಫ್ ಪ್ಯಾರಿಸ್ ಗಣಪತಿ ಬೇಡಾ ಎಂದು ಪಿಎಸ್‌ಐ ನಾಗರಾಜ ಕೊಟಗಿ ತಿಳಿಸಿದರು.
ಅಪರಾಧ ವಿಭಾಗದ ಪಿಎಸ್‌ಐ ಮಲ್ಲಪ್ಪ ವಜ್ರದ, ಪೋಲಿಸ್ ಸಿಬ್ಬಂದಿ ಬಸವರಾಜ ಇಂಗಳದಾಳ ಮತ್ತು ಶರಣಪ್ಪ ಮಡಿವಾಳ, ಜೆಸ್ಕಾಮ್ ಇಲಾಖೆ ಸಿಬ್ಬಂದಿ, ಪ.ಪಂ.ಸಿಬ್ಬAದಿ, ಸ್ಥಳಿಯ ವಿವಿಧ ಸಂಘಟನೆ ಪ್ರಮುಖರು ಸಂಘಗಳ ಸದಸ್ಯರು ಇದ್ದರು.