
ಬಂದೇನವಾಜ್ ದರ್ಗಾದ ೨೪ನೇ ನೂತನ ಸಜ್ಜಾದ ನಶೀನ್ ಪಟ್ಟಾಭಿಷೇಕ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 10– ದಕ್ಷಿಣ ಭಾರತದ ಖ್ವಾಜಾ ಬಂದೇನವಾಜ್ ಗೇಸುದರಾಜ್ ರೆಹಮತುಲ್ಲ ಅಲೈಹಿ ದರ್ಗಾದ ೨೪ ನೇ ನೂತನ ಸಜ್ಜಾದ ನಶೀನ್ ಆಗಿ ಹಫೀಸ್ ಸೈಯದ್ ಮೊಹಮ್ಮದ್ ಅಲಿ ಅಲ್ ಹುಸೈನಿ ಅವರ ಪೀಠಾಧಿಪತಿಗಳ ಪಟ್ಟಾಭಿಷೇಕ ಕಾರ್ಯಕ್ರಮ ಶನಿವಾರ ಭಾರತ ದೇಶದ ಪ್ರಸಿದ್ಧ ದರ್ಗಾಗಳ ಪೀಠಾಧಿಪತಿ ಸಜ್ಜಾದ ನಶೀನ್‌ಗಳ ಸಮ್ಮುಖದಲ್ಲಿ ದರ್ಗಾದ ಆವರಣದಲ್ಲಿ ಜರುಗಿತು.
ದಿವಂಗತ ಡಾ.ಸೈಯದ್ ಶಾ ಖುಸ್ರೋ ಹುಸೈನಿ ಅವರು ಗುರುವಾರ ವಯೋ ಸಹಜವಾಗಿ ನಿಧನರಾಗಿದ್ದರು.
ಅವರ ಹಿರಿಯ ಪುತ್ರರಾದ ಹಫೀಜ್ ಸೈಯದ್ ಮೊಹಮ್ಮದ್ ಅಲಿ ಅಲ್ ಹುಸೈನಿ ಅವರನ್ನು ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ಗುಲ್ಬರ್ಗಾ ಖ್ವಾಜಾ ಬಂದೇನವಾಜ್ ದರ್ಗಾದ ೨೪ನೇ ಸಜ್ಜಾದ ನಶೀನ್ ಪೀಠಾಧಿಪತಿ ಆಗಿ ಪಟ್ಟಾಭಿಷೇಕ ಮಾಡಲಾಯಿತು.
ನವದೆಹಲಿ, ಅಜ್ಮೀರ್, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳ ಪ್ರಸಿದ್ಧ ದರ್ಗಾಗಳ ಸಜ್ಜಾದ ನಶೀನ್‌ಗಳು ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನೂತನ ಸಜ್ಜಾದ ನಶೀನ್ ಅವರಿಗೆ ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಬಳ್ಳಾರಿ ಜಿಲ್ಲಾ ಮಾಜಿ ಉಪಾಧ್ಯಕ್ಷ ಹಾಗೂ ಸಿರುಗುಪ್ಪ ಖಾದರ್ಶ, ಮೌಲಾ ಖಾದ್ರಿ ದರ್ಗಾದ ಸಜ್ಜಾದ ನಶೀನ್ ಸೈಯದ್ ಮೋಹಿಯುದ್ದೀನ್ ಖಾದ್ರಿ, ಜಿಲ್ಲಾ ಮಾಜಿ ಸದಸ್ಯರು ಸಮಾಜ ಸುಧಾರಕ ಅಲ್ ಹಾಜ್ ಎ ಅಬ್ದುಲ್ ನಬಿ, ಚಿಸ್ತಿ ನಿಜಾಮಿ, ಹಾಜಿ ಹಂಡಿ ಹುಸೇನ್ ಬಾಷಾ, ಖತೀಬ್ ಜಹೀರುದ್ದೀನ್, ಬಾಬು ಖಾಜಿ, ಸೈಯದ್ ಜೀಲಾನ್ ಪಾಷಾ ಖಾದ್ರಿ, ಹಾಜಿ ಅಬ್ದುಲ್, ಹಮೀದ್ ಫಾರುಕಿ, ಡಬಲ್ ಬಾಂಡ್, ಹಾಜಿ ಟಿಜಿ ಅಬ್ದುಲ್ ಗನಿ, ಈದ್ಗಾ ಮತ್ತು ಖಬರಸ್ಥಾನ್ ಕಮಿಟಿ ಮಾಜಿ ಅಧ್ಯಕ್ಷ ಹಂಡಿ ಹಾಶಿಮ್, ಡಾ ಮೊಹಮ್ಮದ್ ಅಲಿ ಸಜ್ಜಾದ ನಶೀನ್ ಅವರಿಗೆ ದೊರೆತ ಗೌರವಕ್ಕೆ ಶುಭ ಹಾರೈಸಿದರು.