2

ನಾಳೆ RYMECನ ಆಡಿಟೋರಿಯಂನಲ್ಲಿ ನವ ಸಂಗಮ ಕಾರ್ಯಕ್ರಮ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 18- ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹೊಸದಾಗಿ ಸೇರ್ಪಡೆಗೊಂಡ ಪದವಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ನವಸಂಗಮ ವಿದ್ಯಾರ್ಥಿ ಇಂಡಕ್ಷನ್ 2024-25 ರ ವಾರ್ಷಿಕೋತ್ಸವ ಕಾರ್ಯಕ್ರಮವನ್ನು 19 ಸೆಪ್ಟೆಂಬರ್ 2024 ರಂದು, ಖಙಒಇಅ ನ ಆಡಿಟೋರಿಯಂನಲ್ಲಿ ಬೆಳಿಗ್ಗೆ 11:00 ಗಂಟೆಗೆ ಹಮ್ಮಿಕೊಂಡಿದ್ದಾರೆ.

ಈ ಕಾರ್ಯಕ್ರಮವು ಒಂದು ಪರಿಚಯಾತ್ಮಕ ಕಾರ್ಯಕ್ರಮವಾಗಿದ್ದು, ಇದು ವಿದ್ಯಾರ್ಥಿಗಳಿಗೆ ಕಾಲೇಜು, ಕೋರ್ಸ್, ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಪರಿಚಯವನ್ನು ಒದಗಿಸುತ್ತದೆ.

ಈ ಕಾರ್ಯಕ್ರಮದಲ್ಲಿ, ಸಾಮಾನ್ಯವಾಗಿ, ವಿದ್ಯಾರ್ಥಿಗಳು ಕ್ಯಾಂಪಸ್ ಟೂರ್, ವಿಷಯ ಸಂಬಂಧಿ ಪರಿಚಯ, ಸಮಾರಂಭಗಳು ಮತ್ತು ಕಾರ್ಯಾಗಾರಗಳ ಮೂಲಕ ಒಳಗೊಂಡು ತಮ್ಮ ಹೊಸ ಶಿಕ್ಷಣದ ಅನುಭವವನ್ನು ಉತ್ತಮಗೊಳಿಸಿ ಸಮರ್ಪಕವಾಗಿ ಹೊಂದಿಕೊಳ್ಳಲು ಸಹಾಯವಾಗುತ್ತದೆ.

ಈ ಕಾರ್ಯಕ್ರಮದಲ್ಲಿ ಅಲ್ಲಂ ಗುರು ಬಸವರಾಜ, ಅಧ್ಯಕ್ಷರು, ವಿ.ವಿ. ಸಂಘ, ಅಧ್ಯಕ್ಷತೆ ವಹಿಸಿ ಮುಖ್ಯ ಅತಿಥಿಯಾಗಿ ಮನೀಶ್ ಕುಮಾರ್ ಹಿರಿಯ ಉಪಾಧ್ಯಕ್ಷರು, JSW ತೋರಣಗಲ್ಲು ಮತ್ತು ಜಾನೆಕುಂಟೆ ಬಸವರಾಜ ಉಪಾಧ್ಯಕ್ಷ ವಿ.ವಿ.ಸಂಘ, ಬಳ್ಳಾರಿ, ಅಧ್ಯಕ್ಷರು, GC RYMEC, ಡಾ.ಅರವಿಂದ್ ಪಟೇಲ್ ಕಾರ್ಯದರ್ಶಿ ವಿ.ವಿ.ಸಂಘ, ಯಾಲ್ಪಿ ಮೇಟಿ ಪಂಪನಗೌಡ ಸಹಾಕಾರ್ಯದರ್ಶಿ ವಿ.ವಿ. ಸಂಘ, ಬೈಲುವದ್ದಿಗೇರಿ ಎರಿಸ್ವಾಮಿ, ಖಜಾಂಚಿ ವಿ.ವಿ.ಸಂಘ, ಪ್ರಿನ್ಸಿಪಲ್ ಡಾ.ಹನುಮಂತರೆಡ್ಡಿ, ವೈಸ್ ಪ್ರಿನ್ಸಿಪಾಲ್ ಡಾ.ಸವಿತಾ ಸೋನಾಳಿ, ಡಿನ್ ಅಕೇಡಮಿಕ್ ಡಾ.ಹೊಸಳ್ಳಿ ಗಿರೀಶ್ ಡೀನ್ ಎಕ್ಸಾಮಿನೇಶನ್ಸ್ ಡಾ.ಬಿ.ಶ್ರೀಪತಿ ಹಾಗೂ ವಿಭಾಗದ ಮುಖ್ಯಸ್ಥರು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!