
ಅವಧೂತ ಹೇರೂರು ಶ್ರೀಸಿದ್ದಾರೂಢರ ನೂತನ ರಥೋತ್ಸವ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 28- ತಾಲೂಕಿನ ಹೇರೂರು ಗ್ರಾಮದ ಅವಧೂತ ಶ್ರೀಗುರು ಸಿದ್ದಾರೂಢ ತಾತನ ಮಠದ ೨೫ನೇ ಜಾತ್ರಾ ಮಹೋತ್ಸವದ ಅಂಗವಾಗಿ ರಥೋತ್ಸವ ಶ್ರಾವಣ ಮಾಸದ ಕಡೆಯ ಸೋಮವಾರ ಸಂಜೆ ಅಪಾರ ಭಕ್ತರ ಸಮೂಹದ ಮಧ್ಯೆ ಜರುಗಿತು.
ಬೆಳಿಗ್ಗೆ ಸಿದ್ದಾರೂಢ ತಾತನ ಮೂರ್ತಿಗೆ ಅಭಿಷೇಕ, ಪೂಜೆ, ಬಿಲ್ವಾರ್ಚನೆ, ವಿಶೇಷ ಅಲಂಕಾರ ಸೇರಿದಂತೆ ವಿಶೇಷ ಪೂಜೆಗಳು ಜರುಗಿದವು. ನೂತನ ರಥಕ್ಕೆ ರಥಾಂಗ ಹೋಮ ನಡೆಯಿತು.
ಜಾತ್ರಾಮಹೋತ್ಸವ ನಿಮಿತ್ತ ಕಳೆದ 11 ದಿನಗಳಿಂದ ಸುಜ್ಞಾನ ದೇವ ಪ್ರಶಸ್ತಿ ಪುರಸ್ಕೃತ ಖ್ಯಾತ ಪ್ರವಚನಕಾರ ಬಾಬುಸಾಬ ಪುರಾಣಿಕರಿಂದ ನಡೆದ ಅವಧೂತ ಶ್ರೀಸಿದ್ದಾರೂಢ ತಾತನ ಪುರಾಣ ಮಂಗಲೋತ್ಸವ ನಡೆಯಿತು.
ಭಕ್ತರಿಗೆ ಪ್ರಸಾದ ವ್ಯವಸ್ಥೇ ಮಾಡಲಾಗಿತ್ತು. ಹೆಬ್ಬಾಳ ಮಠದ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಹಗರಿಬೊಮ್ಮನಹಳ್ಳಿಯ ಹಾಲಶಂಕರ ಶ್ರೀಮಠದ ಸ್ವಾಮೀಜಿ ಸಾನ್ನಿಧ್ಯ ಹೇರೂರು ಗ್ರಾಮದ ಪ್ರಮುಖರ ಸಮ್ಮಖದಲ್ಲಿ ಶ್ರೀ ಸಿದ್ಧಾರೂಢಉತ್ಸವ ಮೂರ್ತಿಯನ್ನು ರಥದಲ್ಲಿರಿಸಿ ವಿಶೇಷ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಶ್ರೀಸಿದ್ಧಾರೂಢ ಮಠದಿಂದ ವಿರೂಪಣ್ಣ ತಾತನ ಕಮಾನು ಬಳಿಯ ಪಾದಗಟ್ಟಿಯವರೆಗೆ ನಡೆದ ರಥೋತ್ಸವದಲ್ಲಿ ಹೇರೂರು ಸೇರಿದಂತೆ ಸುತ್ತಲಿನ ಗ್ರಾಮಗಳ ಅಪಾರ ಭಕ್ತರು ನೂತನ ರಥೋತ್ಸವಕ್ಕೆ ಉತ್ತತ್ತಿ, ಹೂವು, ಹಣ್ಣು ಸಮರ್ಪಿಸಿದರು.