
ಟಣಕನಕಲ್ ಆದರ್ಶ ವಿದ್ಯಾಲಯ : ಕೌನ್ಸೆಲಿಂಗ್‌ಗೆ ಹಾಜರಾಗಲು ಸೂಚನೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 1- ಟಣಕನಕಲ್‌ನ ಆದರ್ಶ ವಿದ್ಯಾಲಯದಲ್ಲಿ 6ನೇ ತರಗತಿಯಲ್ಲಿ 1 ರಿಂದ 3ನೇ ಸುತ್ತಿನ ದಾಖಲಾತಿ ನಂತರ ಖಾಲಿ ಉಳಿದಿರುವ ಒಟ್ಟು 42 ಸೀಟುಗಳಿಗೆ (ವಿವಿಧ ಮಿಸಲಾತಿವಾರು) 1:20 ಅನುಪಾತದಂತೆ (ಒಂದು ಸೀಟಿಗೆ 20 ವಿದ್ಯಾರ್ಥಿಗಳಂತೆ) ಕೌನ್ಸಲಿಂಗ್‌ಗೆ ಅರ್ಹವಿರುವ ವಿದ್ಯಾರ್ಥಿಗಳ ಪಟ್ಟಿಯನ್ನು ಆದರ್ಶ ವಿದ್ಯಾಲಯ ಟಣಕನಕಲ್ ಹಾಗೂ ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.
1:20 ಪಟ್ಟಿಯಲ್ಲಿ ಹೆಸರಿರುವ ವಿದ್ಯಾರ್ಥಿಗಳಿಗೆ ಆದರ್ಶ ವಿದ್ಯಾಲಯ ಟಣಕನಕಲ್‌ನಲ್ಲಿ ಆಗಸ್ಟ್ 13 ರಂದು ಕ್ರ.ಮ ಸಂಖ್ಯೆ 01 ರಿಂದ 300 ರ ವರೆಗೆ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಹಾಗೂ ಆಗಸ್ಟ್ 14 ರಂದು ಕ್ರ.ಮ ಸಂಖ್ಯೆ 301 ರಿಂದ 789 ರ ವರೆಗೆ ಮೀಸಲಾತಿ ವರ್ಗದ (ಎಸ್‌ಸಿ, ಎಸ್‌ಟಿ, ಪ್ರವರ್ಗ-1, 2ಎ, 2ಬಿ, 3ಎ, 3ಬಿ) ವಿದ್ಯಾರ್ಥಿಗಳಿಗೆ ಬೆಳಿಗ್ಗೆ 10 ಗಂಟೆಯಿಂದ ಕೌನ್ಸೆಲಿಂಗ್ ನಡೆಯಲಿದೆ.
ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನೀಡಿರುವ ದೂರವಾಣಿ ಸಂಖ್ಯೆಗೆ ಕೌನ್ಸಲಿಂಗ್ ಬಗ್ಗೆ ರಾಜ್ಯ ಕಛೇರಿಯಿಂದ ಸಂದೇಶವನ್ನು ಕಳುಹಿಸಲಾಗುವುದು. ಪಟ್ಟಿಯಲ್ಲಿರುವ ತಮ್ಮ ಹೆಸರನ್ನು ಖಚಿತಪಡಿಸಿಕೊಂಡು ಕೌನ್ಸಲಿಂಗ್‌ಗೆ ಹಾಜರಾಗಿ ತಮ್ಮ ಮಕ್ಕಳ ದಾಖಲಾತಿ ಪಡೆದುಕೊಳ್ಳಲು ಸಂಬಂಧಿಸಿದ ಪಾಲಕರು/ಪೋಷಕರಿಗೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಆದರ್ಶ ವಿದ್ಯಾಲಯ, ಟಣಕನಕಲ್ ಶಾಲೆಗೆ ಶಾಲಾ ಅವಧಿಯಲ್ಲಿ ಭೇಟಿ ನೀಡಬಹುದು ಎಂದು ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.