
ಮೀನುಪಾಶುವಾರು ಹಕ್ಕಿನ ಗುತ್ತಿಗೆ ಅವಧಿ ವಿಸ್ತರಣೆ : ಗುತ್ತಿಗೆದಾರರಿಗೆ ಸೂಚನೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 1- ಮೀನುಗಾರಿಕೆ ಇಲಾಖೆಯ ಒಳನಾಡು ಕೆರೆ/ಜಲಾಶಯಗಳ ಮೀನುಪಾಶುವಾರು ಹಕ್ಕಿನ ಗುತ್ತಿಗೆ ಅವಧಿಯನ್ನು 2023-24 ನೇ ಸಾಲಿಗೆ ನವೀಕರಿಸಿಕೊಂಡಿರುವ ಗುತ್ತಿಗೆದಾರರು/ಟೆಂಡರ್‌ದಾರರಿಗೆ ಪಾವತಿ ಸಹಿತವಾಗಿ ಒಂದು ವರ್ಷದ ಅವಧಿಯನ್ನು ರಾಜ್ಯ ಸರ್ಕಾರವು ವಿಸ್ತರಿಸಿದೆ.
ಆದ್ದರಿಂದ 2023-24 ನೇ ಸಾಲಿಗೆ ನವೀಕರಿಸಿಕೊಂಡಿರುವ ಗುತ್ತಿಗೆದಾರರು/ಟೆಂಡರ್‌ದಾರರು 2024-25 ನೇ ಸಾಲಿನ ಗುತ್ತಿಗೆ/ಬಿಡ್ ಮೊತ್ತವನ್ನು ಆಗಸ್ಟ್-16 ರೊಳಗಾಗಿ ಸಂಬAಧಪಟ್ಟ ತಾಲ್ಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರಿಗೆ ಪಾವತಿಸಿ ಮೀನುಪಾಶುವಾರು ಹಕ್ಕಿನ ಗುತ್ತಿಗೆ ಅವಧಿಯನ್ನು ವಿಸ್ತರಿಸಿಕೊಳ್ಳಬೇಕು. ಕೊನೆಯ ದಿನಾಂಕದ ನಂತರ ಗುತ್ತಿಗೆ/ಬಿಡ್ ಮೊತ್ತ ಪಾವತಿಸಲು ಅವಕಾಶವಿರುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ/ಗಂಗಾವತಿ/ಕುಷ್ಟಗಿ ತಾಲ್ಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಬಹುದು ಎಂದು ಮೀನುಗಾರಿಕೆ ಉಪನಿರ್ದೇಶಕರಾದ ಶ್ರೀನಿವಾಸ ಕುಲಕರ್ಣಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.