
ಆರೋಗ್ಯ ಇಲಾಖೆಯಿಂದ ಎನ್‌ಎಸ್‌ವಿ ಜಾಗೃತಿ ಪಾಕ್ಷಿಕ ಕಾರ್ಯಗಾರ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 22- ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ, ಸಿರುಗುಪ್ಪ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ರಾರಾವಿ ಸಂಯುಕ್ತಾಶ್ರಯದಲ್ಲಿ ಜರುಗಿದ ಎನ್‌ಎಸ್‌ವಿ ಜಾಗೃತಿ ಪಾಕ್ಷಿಕ ಉದ್ಘಾಟಿಸಿ ಆಡಳಿತ ವೈದ್ಯಾಧಿಕಾರಿ ಡಾ.ದಮ್ಮೂರು ಬಸವರಾಜ್ ಕುಟುಂಬ ಕಲ್ಯಾಣ ಯೋಜನೆಯಲ್ಲಿ ಈಗ ಮಹಿಳೆಯರೆ ಶಾಶ್ವತ ಯೋಜನೆಗೆ ಒಳಗಾಗುತ್ತಿದ್ದು ಪುರುಷರ ಕುಟುಂಬ ಕಲ್ಯಾಣ ಯೋಜನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಿಕೆ ತುಂಬಾ ಕಡಿಮೆ ಪುರುಷರು ಈ ಯೋಜನೆಯಲ್ಲಿ ಪಾಲ್ಗೊಳ್ಳಬೇಕು ಸಾಮಾಜಿಕ, ಧಾರ್ಮಿಕ, ಆರೋಗ್ಯ ಮತ್ತು ಲೈಂಗಿಕ ತಪ್ಪುಗ್ರಹಿಕೆಗಳನ್ನು ತೆಗೆದುಹಾಕಲು ವ್ಯಾಪಕ ಪ್ರಚಾರದ ಅಗತ್ಯವಿದೆ ಇದು ಕಡಿಮೆ ತೊಡಕು ಮತ್ತು ಹೆಚ್ಚಿನ ರೋಗಿಗಳ ಅನುಸರಣೆಯೊಂದಿಗೆ ಸಂತಾನಹರಣದ ಸುರಕ್ಷಿತ, ಪರಿಣಾಮಕಾರಿ ಕನಿಷ್ಠ ಪ್ರವೇಶ ವಿಧಾನವಾಗಿದೆ ಫಲಾನುಭವಿಗಳನ್ನು ಕರೆತರಲು ಸೂಚಿಸಿದರು.
ತಾಲೂಕು ಆರೋಗ್ಯ ಶಿಕ್ಷ ಣಾಧಿಕಾರಿ ಮೊಹಮ್ಮದ್ ಖಾಸಿಂ ಮಾತನಾಡಿ, ಕುಟುಂಬ ಕಲ್ಯಾಣ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ತಾತ್ಕಾಲಿಕ ಮತ್ತು ಶಾಶ್ವತ ಸಂತಾನ ಹರಣ ಶಸ್ತ್ರ ಚಿಕಿತ್ಸಾ ವಿಧಾನಗಳಿವೆ.
ಪುರುಷರಿಗಾಗಿ ಎನ್‌ಎಸ್‌ವಿ ಈ ಶಸ್ತ್ರ ಚಿಕಿತ್ಸೆಯಿಂದ ಗಾಯವಾಗುವುದಿಲ್ಲ ಹೊಲಿಗೆಯಿಲ್ಲ, ೫ ರಿಂದ ೧೦ ನಿಮಿಷಗಳಲ್ಲಿ ಚಿಕಿತ್ಸೆ ಪೂರ್ಣಗೊಳ್ಳುತ್ತದೆ. ಚಿಕಿತ್ಸೆ ನಡೆದ ಅರ್ಧಗಂಟೆಯಲ್ಲಿ ಮನೆಗೆ ಹೋಗಬಹುದು. ಎನ್ ಎಸ್ ವಿ ಚಿಕಿತ್ಸೆ ಪಡೆದ ವ್ಯಕ್ತಿ ಮಾಡುವ ಕೆಲಸವನ್ನು ಅವಲಂಬಿಸಿರುತ್ತದೆ. ಸುಲಭದ ಕೆಲಸವಾಗಿದ್ದರೆ ಚಿಕಿತ್ಸೆಯ ೪೮ ಗಂಟೆಗಳ ನಂತರ ಕೆಲಸ ಆರಂಭಿಸಬಹುದು.ಸೈಕಲ್ ತುಳಿಯುವುದು ಹಾಗೂ ಇಂತಹುದೆ ಕೆಲಸಗಳನ್ನು ಕನಿಷ್ಠ ೭ ದಿನಗಳ ನಂತರ ಮಾಡಬಹುದು, ಫಲಾನುಭವಿಗಳಿಗೆ ಸರ್ಕಾರದಿಂದ ೧೧೦೦ ಗೌರವಧನ ನೀಡಲಾಗುವುದು ಎಂದರು.
ಬಗ್ಗೂರ್ ಮಲ್ಲಿಕಾರ್ಜುನ್ ಗೌಡ ಆರೋಗ್ಯ ನಿರೀಕ್ಷಣಾಧಿಕಾರಿ ಮಾತನಾಡಿ ಎಲ್ಲಾ ಉಪ ಕೇಂದ್ರಗಳಿ0ದ ಒಂದೊ0ದು ಕೇಸ್ ನ್ನು ಕರೆತರುತ್ತೇವೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಸಾಕ್ಷರತಾ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ ಆರೋಗ್ಯ ನಿರೀಕ್ಷಣಾ ಧಿಕಾರಿ ಗಳು ಸಮುದಾಯ ಆರೋಗ್ಯ ಅಧಿಕಾರಿಗಳು ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳು ಆಶಾ ಕಾರ್ಯಕರ್ತೆಯರು ಹಾಜರಿದ್ದರು.